Lifestyle

ದಂಪತಿಗಳಿಗೆ ಈ ವಿಷಯ ಅರ್ಥವಾದರೆ ಎಂದಿಗೂ ಡಿವೋರ್ಸ್‌ ಆಗಲ್ಲ!

ಬೆಂಗಳೂರು; ಈ ಬ್ಯುಸಿ ಲೈಫ್‌ನಲ್ಲಿ ಎಲ್ಲರಿಗೂ ಮಾನಸಿಕ ಒತ್ತಡಗಳು ಜಾಸ್ತಿಯಾಗುತ್ತಿವೆ.. ಇದರಿಂದಾಗಿ ಸಂಬಂಧಗಳು ಕೂಡಾ ಹಾಳಾಗುತ್ತಿವೆ.. ಸಣ್ಣ ಸಣ್ಣ ವಿಷಯಕ್ಕೂ ದಂಪತಿಗಳನ್ನು ಜಗಳಗಳಾಗುತ್ತಿವೆ.. ಕ್ಷುಲ್ಲಕ ಕಾರಣಕ್ಕೆಲ್ಲಾ ದಂಪತಿಗಳು ಡಿವೋರ್ಸ್‌ ಪಡೆಯುತ್ತಿದ್ದಾರೆ.. ಆದ್ರೆ ಒಂದಷ್ಟು ವಿಚಾರಗಳನ್ನು ದಂಪತಿಗಳಿಬ್ಬರೂ ನೆನಪಿನಲ್ಲಿಟ್ಟುಕೊಂಡರೆ ಸಂಸಾರದಲ್ಲಿ ಎಷ್ಟೇ ವೈಮಸ್ಯಗಳ ಬಂದರೂ ತೊಂದರೆಯಾಗದು..
ಸಮಯ ಕೊಡಿ, ಖುಷಿ ವಿಚಾರಗಳನ್ನು ಹಂಚಿಕೊಳ್ಳಿ;
ಸಂಬಂಧವನ್ನು ಬಲಪಡಿಸಲು, ಇಬ್ಬರೂ ಪರಸ್ಪರ ಗೌರವದಿಂದ ವರ್ತಿಸಬೇಕು.. ಇಬ್ಬರಿಗೂ ನಂಬಿಕೆ ಇರಬೇಕು.. ಮದುವೆಯಾದ ಕೆಲ ವರ್ಷಗಳ ನಂತರ ಒಬ್ಬರಿಗೊಬ್ಬರು ಸಮಯ ಕೊಡುವುದು ಕಡಿಮೆಯಾಗುತ್ತದೆ.. ಇದರಿಂದಾಗಿ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಶುರುವಾಗುತ್ತದೆ.. ಆದರೆ ಸಂಬಂಧವನ್ನು ಗಟ್ಟಿಗೊಳಿಸಬೇಕಾದರೆ, ನೀವು ಒಬ್ಬರಿಗೊಬ್ಬರು ಸಮಯವನ್ನು ಮೀಸಲಿಡಬೇಕು..
ಬೇರೆಯವರಿಗೆ ಹೋಲಿ ಮಾತನಾಡುವುದು ಬಿಡಿ;
ಮಾಜಿ ಗೆಳತಿ ಹಾಗೂ ಗೆಳಯನ ಬಗ್ಗೆ ಮಾತನಾಡುವುದು. ಬೇರೆಯವರಿಗೆ ಹೋಲಿಸಿ ಮಾತನಾಡುವುದು ಮಾಡಿದರೆ ಸಂಬಂಧಗಳು ಹಳಸಲಿವೆ.. ಹೀಗಾಗಿ, ಯಾವುದೇ ಕಾರಣಕ್ಕೂ ಒಬ್ಬರಿಗೆ ಹೋಲಿಕೆ ಮಾಡಿ ಮಾತನಾಡುವುದನ್ನು ಬಿಡಿ..
ಸಣ್ಣ ವಿಷಯಕ್ಕೂ ಜಗಳ ಬಿಡಿ;
ಪ್ರತಿ ಸಣ್ಣ ವಿಚಾರಕ್ಕೂ ಸಂಗಾತಿಯೊಂದಿಗೆ ಜಗಳವಾಡಿದರೆ ಅಥವಾ ಇತರ ವಿಷಯಗಳಿಗೆ ತನ್ನ ಸಂಗಾತಿಯೊಂದಿಗೆ ಅನಗತ್ಯವಾಗಿ ಕೋಪಗೊಂಡರೆ, ಸಂಬಂಧವೂ ಹದಗೆಡುತ್ತದೆ. ಆದ್ದರಿಂದ, ಶಾಂತಿಯಿಂದಿರಿ.. ತಾಳ್ಮೆಯಿಂದಿರಿ.
ಪದೇ ಪದೇ ಸುಳ್ಳು ಹೇಳುವುದು ನಿಲ್ಲಿಸಿ;
ಸಂಗಾತಿ ಪದೇ ಪದೇ ಸುಳ್ಳು ಹೇಳಿದರೆ ಸಂಬಂಧ ಮುರಿದು ಬೀಳಬಹುದು. ಆದ್ದರಿಂದ ಯಾವಾಗಲೂ ಪ್ರಾಮಾಣಿಕವಾಗಿ, ನಿಜವಾದ ಹೃದಯದಿಂದ ಮಾತನಾಡಿ. ಏಕೆಂದರೆ ನಿಮ್ಮ ಸಂಗಾತಿಗೆ ಮೋಸ ಮಾಡುವುದು ನಿಮ್ಮ ಸಂಬಂಧವನ್ನು ಮುರಿಯುತ್ತದೆ.

ತಪ್ಪು ಮಾಡಿದ್ದಕ್ಕೆ ಕ್ಷಮಿಸಿ;
ಅನೇಕ ಬಾರಿ ದಂಪತಿಗಳು ತಪ್ಪುಗಳನ್ನು ಮಾಡಲು ಪರಸ್ಪರ ಕ್ಷಮಿಸುವುದಿಲ್ಲ. ಆದರೆ ಇದು ಹೆಚ್ಚು ಕಾಲ ಮುಂದುವರಿದರೆ, ಅದು ನಿಮ್ಮ ಸಂಬಂಧವನ್ನು ಮುರಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯನ್ನು ಆದಷ್ಟು ಬೇಗ ಕ್ಷಮಿಸಲು ಪ್ರಯತ್ನಿಸಿ.. ನಿಮ್ಮ ಸಂಬಂಧವನ್ನು ಒಳ್ಳೆಯದರೊಂದಿಗೆ ಮತ್ತೆ ಪ್ರಾರಂಭಿಸಿ. ಈ ಎಲ್ಲಾ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಸಂಬಂಧವನ್ನು ಮುರಿಯದಂತೆ ನೀವು ಉಳಿಸಬಹುದು.

Share Post