HealthLifestyle

ತಡರಾತ್ರಿಯಲ್ಲಿ ಊಟ ಮಾಡೋ ಅಭ್ಯಾಸ ಇದ್ದವರು ದಪ್ಪಗಾಗ್ತಾರಾ..?

ಬ್ಯುಸಿ ಲೈಫ್‌ನಲ್ಲಿ ನಮ್ಮ ಆಹಾರ ಶೈಲಿಯೇ ಬದಲಾಗಿಬಿಟ್ಟಿದೆ.. ನಾವು ಊಟ ಸೇವಿಸುವ ಸಮಯ ಕೂಡಾ ಸರಿಯಾಗಿರುವುದಿಲ್ಲ.. ಯಾವಾಗಂದ್ರೆ ಆವಾಗ ಊಟ ಮಾಡುತ್ತೇವೆ.. ಅದ್ರಲ್ಲೂ ಬೇರೆ ಬೇರೆ ಕೆಲಸ ಮಾಡುವವರು ಊಟವನ್ನು ತಡರಾತ್ರಿಯಲ್ಲಿ ಮಾಡುತ್ತಾರೆ.. ಇಂತಹ ಆಹಾರ ಶೈಲಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.. ರಾತ್ರಿ ಲೇಟಾಗಿ ಊಟ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತೆ ಎಂದು ಕೆಲವರು ಹೇಳುತ್ತಾರೆ.. ಆದ್ರೆ ಇದು ನಿಜವಾ..? ತಜ್ಞರು ಏನು ಹೇಳ್ತಾರೆ..?

೧. ತಾವಾಗಲೂ ತಡರಾತ್ರಿಯಲ್ಲಿ ಊಟ ಮಾಡುತ್ತಿದ್ದರೆ ದೇಹದ ತೂಕ ಹೆಚ್ಚುತ್ತದೆ ಎಂದು ಹಲವರು ನಂಬಿದ್ದಾರೆ.. ಆದರೆ ತೂಕ ಹೆಚ್ಚಾಗುವುದಕ್ಕೂ ತಡರಾತ್ರಿ ಊಟ ಮಾಡುವುದಕ್ಕೂ ಸಂಬಂಧವಿಲ್ಲ ಎಂದು ತಜ್ಞರು ಹೇಳುತ್ತಾರೆ.. ದಿನವಿಡೀ ಸೇವಿಸುವ ಕ್ಯಾಲೊರಿಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ.. ಮಲಗುವ ಮುಂಚೆ ಹೆಚ್ಚು ಆಹಾರ ಸೇವನೆ ಮಾಡಿದರೆ,  ನಿದ್ದೆ ಸರಿಯಾಗಿ ಬರುವುದಿಲ್ಲ. ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಮಲಗುವ ಕನಿಷ್ಠ ಎರಡು ಗಂಟೆಗಳ ಮುಂಚೆ ಆಹಾರ ಸೇವಿಸುವುದು ಉತ್ತಮ..

೨. ಮೂರು ಹೊತ್ತಿನ ಊಟ ಮಾಡುವಾಗಲೂ ಹೊಟ್ಟೆ ತುಂಬಾ ತಿನ್ನಬಾರದು.. ಜೊತೆಗೆ ಸ್ವಲ್ಪ ಸ್ವಲ್ಪ ಗ್ಯಾಪ್ ಕೊಟ್ಟು ತಿನ್ನುವುದು ಒಳ್ಳೆಯದು ಎಂಬ ಭಾವನೆ ಅನೇಕರಲ್ಲಿದೆ. ಆದ್ರೆ ನೀವು ತಿನ್ನುತ್ತಿರುವ ಆಹಾರದಲ್ಲಿ ಯಾವ ಪೋಷಕಾಂಶಗಳಿವೆ, ಎಷ್ಟು ಪೋಷಕಾಂಶಗಳಿವೆ ಅನ್ನೋದು ಮುಖ್ಯವಾಗುತ್ತದೆ..  ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಆರೋಗ್ಯಕರ.

೩. ಡಿಟಾಕ್ಸ್ ಡಯಟ್ ತೆಗೆದುಕೊಳ್ಳುವುದರಿಂದ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ ಎಂದು ಹೇಳಲಾಗುತ್ತದೆ. ಯಕೃತ್ತು, ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ, ಚರ್ಮ ಮತ್ತು ಶ್ವಾಸಕೋಶಗಳು ದೇಹದಿಂದ ನೈಸರ್ಗಿಕವಾಗಿ ವಿಷಕಾರಿ ವಸ್ತುಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಡಿಟಾಕ್ಸ್ ಆಹಾರವನ್ನು ಸೇವಿಸುವುದರಿಂದ ಯಾವುದೇ ನೇರ ಪರಿಣಾಮವಿಲ್ಲದಿದ್ದರೂ, ಡಿಟಾಕ್ಸ್ ಆಹಾರಗಳು ಅಂತಹ ಪರೋಕ್ಷ ಪರಿಣಾಮಗಳಿಗೆ ಕಾರಣವಾಗಬಹುದು.

೪. ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಆದರೆ ಒಬ್ಬ ವ್ಯಕ್ತಿಯು ಎಷ್ಟು ನೀರು ಕುಡಿಯಬೇಕು ಎಂಬುದು ಹವಾಮಾನ, ವ್ಯಕ್ತಿಯ ಆರೋಗ್ಯ ಮತ್ತು ಅವರಿಗೆ ಎಷ್ಟು ಬೆವರು ಬರುತ್ತದೆ ಎಂಬ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಯುಎಸ್ ನ್ಯಾಷನಲ್ ಅಕಾಡೆಮಿಕ್ಸ್ ಆಫ್ ಸೈನ್ಸ್, ಎಂಜಿನಿಯರಿಂಗ್ ಮತ್ತು ಮೆಡಿಸಿನ್ ಸಾಮಾನ್ಯ ತಾಪಮಾನದಲ್ಲಿ ವಾಸಿಸುವ ವ್ಯಕ್ತಿಯು ದಿನಕ್ಕೆ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯಬೇಕು ಎಂದು ಸೂಚಿಸುತ್ತದೆ.

Share Post