7 ಮಕ್ಕಳನ್ನು ಹೆತ್ತ; ಸಾಕೋಕಾಗಲ್ಲ ಅಂತ ಹೆಂಡತಿ ಸಮೇತ ಎಲ್ಲರನ್ನೂ ಕೊಂದ!
ಪಾಕಿಸ್ತಾನ; ಕೆಲವರಿಗೆ ಸಾಕೋಕೆ ಗತಿ ಇರೋದಿಲ್ಲ.. ದುಡಿಯಬೇಕು ಅನ್ನೋದು ಕನಿಷ್ಠ ಜ್ಞಾನವೂ ಇರೋದಿಲ್ಲ.. ಆದರೂ ಮನೆ ತುಂಬಾ ಮಕ್ಕಳು ಮಾಡಿರುತ್ತಾರೆ.. ಹೆಂಡತಿ-ಮಕ್ಕಳನ್ನು ಉಪವಾಸ ಕೂರಿಸಿರುತ್ತಾರೆ.. ಸಾಕಷ್ಟು ಎಂಬಂತೆ ಕಾಟ ಕೂಡಾ ಕೊಡ್ತಾರೆ.. ಇಲ್ಲೊಬ್ಬ ಅಂತಹದ್ದೇ ವ್ಯಕ್ತಿ, ಹುಟ್ಟಿಸಿದ್ದ ಏಳು ಮಕ್ಕಳು ಹಾಗೂ ಹೆಂಡತಿಯನ್ನು ಸಾಕಲಾಗದೆ ಎಲ್ಲರನ್ನೂ ಕೊಲೆ ಮಾಡಿದ್ದಾನೆ..
ಇದನ್ನೂ ಓದಿ; ಚೀನಾದಲ್ಲಿ ಮತ್ತೊಂದು ಹೊಸ ರೋಗ ಪತ್ತೆ; 32,380 ಪ್ರಕರಣಗಳು, 13 ಸಾವು
ಪಾಕಿಸ್ತಾನದಲ್ಲಿ ನಡೆಯಿತು ಪೈಶಾಚಿಕ ಕೃತ್ಯ;
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕೂಲಿ ಕಾರ್ಮಿಕನೊಬ್ಬ ಈ ದಾರುಣ ಕೃತ್ಯ ಎಸಗಿದ್ದಾನೆ.. ಸಜ್ಜದ್ ಖೋಖರ್ ಎಂಬಾತನೇ ಆರೋಪಿ.. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಈತ ಏಳು ಮಂದಿ ಮಕ್ಕಳನ್ನು ಮಾಡಿದ್ದಾನೆ.. ಆದ್ರೆ ಅವರನ್ನು ಸಾಕೋದಕ್ಕೆ ಸಾಧ್ಯವಾಗಿಲ್ಲ.. ಇದರಿಂದಾಗಿ ಮಾನಸಿಕ ಅಸ್ವಸ್ಥನಂತೆ ಆಡಲು ಶುರು ಮಾಡಿದ್ಧಾನೆ.. ದಿನವೂ ಹೆಂಡತಿ ಮಕ್ಕಳು ಹೊಡೆಯುತ್ತಿದ್ದನಂತೆ.. ಕೊನೆಗೆ ತನ್ನ 42 ವರ್ಷದ ಪತ್ನಿ ಕೌಸರ್ ಮತ್ತು ಏಳು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ..
ಇದನ್ನೂ ಓದಿ; ಕೊನೆಗೂ ಸಿಕ್ಕಿಬಿದ್ದ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ
ನಾಲ್ವರು ಪುತ್ರಿಯರು, ಮೂವರು ಪುತ್ರರ ಕೊಲೆ;
ಹೆಂಡತಿ ಕೌಸರ್ ಹಾಗೂ ಹತ್ತು ವರ್ಷದೊಳಗಿನ ನಾಲ್ವರು ಪುತ್ರಿಯರು ಹಾಗೂ ಮೂವರು ಪುತ್ರರನ್ನು ಈತ ದಾರುಣವಾಗಿ ಕೊಂದಿದ್ದಾನೆ.. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.. ಕುಟುಂಬ ನಿರ್ವಹಣೆ ಮಾಡೋದಕ್ಕೆ ಆಗುತ್ತಿರಲಿಲ್ಲ.. ಹೀಗಾಗಿ ನಾನು ಈ ಕೆಲಸ ಮಾಡಬೇಕಾಯಿತು ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ತಮಿಳುನಾಡಿನಲ್ಲಿ ಅಪಘಾತ; ರಾಜ್ಯದ ಮೂವರು ಪೊಲೀಸರ ದುರ್ಮರಣ