LifestyleNational

ಪತ್ನಿಯನ್ನು ಅರ್ಧ ದಾರಿಯಲ್ಲೇ ಕಾರಿನಿಂದ ಇಳಿಸಿಹೋದ ಪತಿ!

ಫಿರೋಜಾಬಾದ್; ಗಂಡ ತನ್ನ ಕಾರಿನಲ್ಲಿ ಪತ್ನಿಯನ್ನಲ್ಲದೆ ಬೇರೆ ಇನ್ಯಾರನ್ನು ಕೂರಿಸಿಕೊಂಡು ಹೋಗಲು ಸಾಧ್ಯ ಅಲ್ಲವೇ..?. ಆದ್ರೆ ಇಲ್ಲೊಬ್ಬ ಗಂಡ ತನ್ನ ಪತ್ನಿಗೆ ನನ್ನ ಕಾರಿನಲ್ಲಿ ಕೂರುವ ಯೋಗ್ಯತೆ ಇಲ್ಲ ಎಂದು ಹೇಳುತ್ತಿದ್ದಾನೆ.. ಅರ್ಧ ದಾರಿಯಲ್ಲೇ ಪತ್ನಿಯನ್ನು ಕಾರಿನಿಂದ ಕೆಳಗಿಳಿಸಿ ಹೋಗಿದ್ದಾನೆ.. ಇಂತಹದ್ದೊಂದು ಘಟನೆ ನಡೆದಿರೋದು ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ.. ಈ ಬಗ್ಗೆ ಮಹಿಳೆ ಪೊಲೀಸ್‌ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದಾಳೆ..

ಇದನ್ನೂ ಓದಿ; ಗಂಡನ ಜೊತೆ ಮಲಗಬೇಕಾದರೆ ಈ ಮಹಿಳೆಗೆ ಹಣ ಕೊಡಬೇಕಂತೆ!

2020ರಲ್ಲಿ ವಿಕಾಸ್‌ ಸೋಂಕಿ ಎಂಬಾತನ ಜೊತೆ ನೋಯ್ಡಾ ಮೂಲದ ಮಹಿಳೆ ಮದುವೆಯಾಗಿದ್ದಾಳೆ.. ಇವರಿಗೆ ಈಗ ಒಂದು ಮಗು ಕೂಡಾ ಇದೆ.. ಅಂದಹಾಗೆ, ವಧುವಿನ ಕಡೆಯವರು 12 ಲಕ್ಷ ರೂಪಾಯಿ ಖರ್ಚು ಮಾಡಿ ಚೆನ್ನಾಗಿ ಮದುವೆ ಕೂಡಾ ಮಾಡಿಕೊಟ್ಟಿದ್ದರು.. ಒಂದಷ್ಟು ವರದಕ್ಷಿಣೆಯನ್ನೂ ಕೊಟ್ಟಿದ್ದರು.. ಆದ್ರೆ ವಿಕಾಸ್‌ ಸೋಂಕಿಗೆ ವರದಕ್ಷಿಣೆಯಾಗಿ ಕಾರು ಕೊಡಬೇಕಿತ್ತಂತೆ.. ಹೀಗಾಗಿ ಪತ್ನಿಗೆ ದಿನವೂ ಕಿರುಕುಳ ಕೊಡುತ್ತಿದ್ದ.. ಕೊನೆಗೆ ತಾನೇ ಕಾರೊಂದು ಖರೀದಿ ಮಾಡಿದ್ದಾನೆ..

ಇದನ್ನೂ ಓದಿ; ಚನ್ನಪಟ್ಟಣ ಉಪಚುನಾವಣೆ; ಬಂಡಾಯದ ಬಾವುಟ ಹಾರಿಸ್ತಾರಾ ಸಿ.ಪಿ.ಯೋಗೇಶ್ವರ್‌?

ಮಗುವಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಹೋಗಬೇಕಿತ್ತು.. ಹೀಗಾಗಿ ಕಾರಿನಲ್ಲಿ ಹೋಗಲಾಗುತ್ತಿತ್ತು.. ಇದೇ ವೇಳೆ ಹೆಂಡತಿ ಮನೆಯವರು ಕಾರು ಕೊಡದಿದ್ದರ ಬಗ್ಗೆ ಗಂಡ ಕ್ಯಾತೆ ತೆಗೆದಿದ್ದಾನೆ.. ನೀನು ತವರಿನಿಂದ ನನಗೆ ಕಾರು ಕೊಡಿಸಿಲ್ಲ.. ಹೀಗಾಗಿ ನನ್ನ ಕಾರಿನಲ್ಲಿ ಕೂರೋದಕ್ಕೆ ನಿಗೆ ಯೋಗ್ಯತೆ ಇಲ್ಲ ಎಂದು ವಿಕಾಸ್‌ ಸೋಂಕಿ, ತನ್ನ ಪತ್ನಿಯನ್ನು ನಡುರಸ್ತೆಯಲ್ಲಿ ಬಿಟ್ಟುಹೋಗಿದ್ದಾನೆ.. ಹೇಗೋ ಆಕೆ ಪತಿಯ ಮನೆಗೆ ಬಂದಿದ್ದಾಳೆ.. ಆದ್ರೆ ಆತ ಮನೆಯೊಳಗೆ ಸೇರಿಸಿಕೊಂಡಿಲ್ಲ.. ಇದರಿಂದ ಬೇಸತ್ತ ಮಹಿಳೆ ಪತಿ ವಿಕಾಸ್‌ ಸೋಂಕಿ, ಮಾವ ಮುಕೇಶ್‌, ಅತ್ತಿಗೆ ಸೀಮಾ ದೇವಿ, ಪತಿಯ ಸಹೋದರಿ ಶೀತಲ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕೇಸ್‌ ದಾಖಲು ಮಾಡಿದ್ದಾಳೆ..

ಇದನ್ನೂ ಓದಿ; ಕೊನೆಗೂ ಗೃಹಲಕ್ಷ್ಮಿಯರಿಗೆ ಶುಭಸುದ್ದಿ; ಇಂದಿನಿಂದ ಹಣ ಜಮೆ!

Share Post