ನರೇಶ್-ಪವಿತ್ರಾ ಲೋಕೇಶ್ ಕಥೆಯೇ ಚಿತ್ರವಾಗುತ್ತಂತೆ..!
ಹೈದರಾಬಾದ್; ತೆಲುಗು ನಟಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿಚಾರ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದೀಗ ಇವರಿಬ್ಬರ ಕಥೆಯನ್ನೇ ತೆರೆಯ ಮೇಲೆ ತರಲು ನಿರ್ಧರಿಸಲಾಗಿದೆಯಂತೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ತಮ್ಮದೇ ಕಥೆಯನ್ನಿಟ್ಟುಕೊಂಡು ಚಿತ್ರ ತೆಗೆಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನರೇಶ್ಗೆ ರಮ್ಯಾ ರಘುಪತಿಯವರು ಮೂರನೇ ಪತ್ನಿಯಾಗಿದ್ದರು. ಆದ್ರೆ ಇದೀಗ ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಅಗಿದ್ದಾರೆ ಎನ್ನಲಾಗುತ್ತಿದೆ. ಅವರಿಬ್ಬರೂ ಒಟ್ಟಿಗೆ ಓಡಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಈ ಬೆನ್ನಲ್ಲೇ ನರೇಶ್, ತಮ್ಮ ಬಾಂದವ್ಯದ ಕಥೆಯನ್ನ ಸಿನಿಮಾ ರೂಪ ಕೊಡಲು ಮುಂದಾಗಿದ್ದಾರೆ. ಆದ್ರೆ ಇದು ಯಾವಾಗ ಕಾರ್ಯರೂಪಕ್ಕೆ ಬರುತ್ತೆ ಅನ್ನೋದು ಗೊತ್ತಾಗಿಲ್ಲ. ಆದ್ರೆ ಈ ಚಿಂತನೆ ನಡೆದಿರೋದಂತೂ ಸತ್ಯ.