ಆಯೋಧ್ಯೆ ರಾಮಲಲ್ಲಾ ಹಣೆಗೆ ಸ್ಪರ್ಶಿಸಿದ ಸೂರ್ಯ ರಶ್ಮಿ
ಅಯೋಧ್ಯೆ; ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯಾದ ಇದೇ ಮೊದಲ ಬಾರಿಗೆ ಇಲ್ಲಿ ರಾಮ ನವಮಿ ಆಚರಣೆ ಮಾಡಲಾಗುತ್ತಿದೆ.. ಹೀಗಾಗಿ ಲಕ್ಷಾಂತರ ಜನ ಅಯೋಧ್ಯೆಗೆ ಆಗಮಿಸಿದ್ದು, ಅಯೋಧ್ಯಾ ನಗರವನ್ನು ನವವಧುವಿನಂತೆ ಸಿಂಗಾರ ಮಾಡಲಾಗಿದೆ..
ಇದನ್ನೂ ಓದಿ; ಕಾರಿನಲ್ಲಿ ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿ; ಹಿಗ್ಗಾಮುಗ್ಗಾ ಥಳಿತ!
ಇನ್ನು ಇಂದು ಬಾಲರಾಮನ ಹಣೆಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ಸೂರ್ಯವಂಶದ ರಘುರಾಮನಿಗೆ ಸೂರ್ಯ ಭಗವಾನನಿಂದ ಅಭಿಷೇಕ ಮಾಡಲಾಗಿದ್ದು, ಇದನ್ನು ಕೋಟ್ಯಂತರ ಜನ ಕಣ್ತುಂಬಿಕೊಂಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮಲಲ್ಲಾನಿಗೆ ಸೂರ್ಯ ರಶ್ಮಿ ಸ್ಪರ್ಶಿಸಿದೆ.. ಸುಮಾರು 70 ಮಿ.ಮೀ ಉದ್ದದ ಸೂರ್ಯನ ತಿಲಕ ರಾಮಲಲ್ಲಾನ ಹಣೆಯ ಮೇಲೆ ಮೂಡಿತ್ತು.
ಇದನ್ನೂ ಓದಿ; ಸಂತೋಷದ ಜೀವನಕ್ಕೆ 7 ಸೂತ್ರಗಳು; ಹೀಗೆ ಬದುಕಿದರೆ ದುಃಖವೇ ಇರೋದಿಲ್ಲ!