ಗಯಾದಲ್ಲಿ ಸೇನಾ ವಿಮಾನ ಪತನ : ಪೈಲೆಟ್‌ಗಳು ಸೇಫ್
ಬಿಹಾರ: ಗಯಾದಲ್ಲಿ ಮತ್ತೊಂದು ಭಾರತೀಯ ಸೇನಾ ವಿಮಾನ ಪತನಗೊಂಡಿದೆ. ಟೇಕಾಫ್ ಆದ ಕೆಲವೇ ಸಮಯದಲ್ಲಿ ಸೇನಾ ವಿಮಾನ ಪತನಗೊಂಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಇಬ್ಬರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ಸೇನಾ ಅಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿದ ವಿಮಾನವು ಇಬ್ಬರು ಪೈಲಟ್‌ಗಳೊಂದಿಗೆ ಟೇಕ್ ಆಫ್ ಆಗಿತ್ತು. ಪೈಲಟ್ ತರಬೇತಿಗಾಗಿ ಟೇಕ್ ಆಫ್ ಆಗಿದ್ದ ವಿಮಾನ ಕ್ಷಣಾರ್ಧದಲ್ಲಿ ಬಿಹಾರದ ಜಮೀನಿನೊಂದರಲ್ಲಿ ಬಂದು ಬಿದ್ದಿದೆ. ಭಾರೀ ಶಬ್ದ ಕೇಳಿ ಅಕ್ಕಪಕ್ಕದ ಗ್ರಾಮರು, ಸ್ಥಳೀಯರೆಲ್ಲಾ ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ಸಿಲುಕಿದ್ದ ಪೈಲೆಟ್‌ಗಳನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ. ಘಟನೆ ತಿಳಿದ ಬಳಿಕ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ. ವಿಮಾನ ಪತನಗೊಂಡ ಪ್ರದೇಶ ಕೆಸರಿನಿಂದ ಕೂಡಿತ್ತು. ಸ್ಥಳೀಯರ ನೆರವಿನಿಂದ ಅಧಿಕಾರಿಗಳು ವಿಮಾನವನ್ನು ಹಿಂದಕ್ಕೆ ತಳ್ಳಿದ್ರು. ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಪೈಲಟ್‌ಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಇಬ್ಬರ ಪೈಲೆಟ್‌ಗಳ ಆರೋಗ್ಯ ಸ್ಥಿರವಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಹೊಲದಲ್ಲಿ ಬಿದ್ದಿದ್ದ ವಿಮಾನದ ಅವಶೇಷಗಳನ್ನು ಸಂಗ್ರಹಿಸಲಾಗಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ತಜ್ಞರ ಪರಿಶೀಲನೆಯ ನಂತರ ಮಾಹಿತಿಯನ್ನು ಸ್ಪಷ್ಟಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
#WATCH | An aircraft of the Indian Army’s Officers’ Training Academy in Gaya, Bihar today crashed soon after taking off during training. Both the pilots in the aircraft are safe.
Video source: Local village population pic.twitter.com/gauLWCrfxN
— ANI (@ANI) January 28, 2022