Love Horoscope; ಈ ಪ್ರೇಮಿಗಳ ದಿನದಂದು ನಿಮ್ಮ ಲವ್ ಸಕ್ಸಸ್ ಆಗುತ್ತಾ..?; ರಾಶಿ ಭವಿಷ್ಯ ಏನು ಹೇಳುತ್ತಿದೆ..?
ಬೆಂಗಳೂರು; ಪ್ರೇಮಿಗಳ ದಿನ ಇನ್ನೇನು ಹತ್ತಿರವಾಗುತ್ತಿದೆ. ಫೆಬ್ರವರಿ 14ನ್ನು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳು ತಾವು ಇಷ್ಟಪಟ್ಟವರ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಲಕ್ಷಾಂತರ ಯುವಕ, ಯುವತಿಯರು ಕಾಯುತ್ತಿದ್ದಾರೆ. ಆದ್ರೆ ರಾಶಿಫಲದ ಆಧಾರದ ಮೇಲೆ ಯಾರಿಗೆ ಈ ಬಾರಿ ಪ್ರೀತಿ ಒಲಿಯುತ್ತೆ..? ಯಾವ ರಾಶಿಯವರ ಪ್ರೇಮ ನಿವೇದನೆ ಫೇಲ್ ಆಗುತ್ತೆ..? ರಾಶಿ ಭವಿಷ್ಯದ ಆಧಾರದ ಮೇಲೆ ನೋಡೋದಾದರೆ ಈ ಬಾರಿಯ ಪ್ರೇಮಿಗಳ ದಿನ ಯಾವ ರಾಶಿಯವರಿಗೆ ಖುಷಿ ಕೊಡುತ್ತೆ, ಯಾರಿಗೆ ದುಃಖಕ್ಕೆ ಕಾರಣವಾಗುತ್ತೆ..? ನೋಡೋಣ ಬನ್ನಿ…
ಮೇಷ ರಾಶಿ;
ಪ್ರಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ ಈ ಬಾರಿಯ ಪ್ರೇಮಿಗಳ ದಿನದಂದು ಮೇಷ ರಾಶಿಯವರ ಪ್ರೇಮ ನಿವೇದನೆ ಸಕ್ಸಸ್ ಆಗುತ್ತೆ. ಈ ತಿಂಗಳ ಪೂರ್ತಿ ಮೇಷರಾಶಿಯವರಿಗೆ ಮಂಗಳಕರವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರೀತಿಸುವ ವ್ಯಕ್ತಿಗಳು ತಿಂಗಳಲ್ಲಿ ಸಿಕ್ಕೇ ಸಿಗುತ್ತಾರೆ. ಫೆಬ್ರವರಿ 14ರಂದು ತಾವು ಇಷ್ಟವರ ಬಳಿ ಪ್ರೇಮನ ನಿವೇದನೆ ಮಾಡಿಕೊಂಡು ಮೇಷ ರಾಶಿಯವರು ಇದರಲ್ಲಿ ಸಕ್ಸಸ್ ಪಡೆಯುತ್ತಾರೆ. ಇಷ್ಟಪಟ್ಟ ಸಂಗಾತಿ ನಿಮ್ಮಂತೆ ಆಗುತ್ತಾರೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ.
ವೃಷಭ ರಾಶಿ;
ವೃಷಭ ರಾಶಿಯವರಿಗೂ ಈ ಬಾರಿ ಒಳ್ಳೆಯದಾಗುತ್ತದೆ. ತಾವು ಇಷ್ಟಪಡುವವರ ಬಳಿ ಹೋಗಿ ಧೈರ್ಯವಾಗಿ ಹೇಳಿ, ಪ್ರೇಮ ನಿವೇದನೆ ಮಾಡಿಕೊಂಡರೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಆದ್ರೆ ಈ ರಾಶಿಯವರಿಗೆ ನಾಚಿಕ ಸ್ವಭಾವ ಹೆಚ್ಚು. ಹೀಗಾಗಿ, ಪ್ರೇಮ ನಿವೇದನೆ ಮಾಡಬೇಕು ಅಂದುಕೊಂಡು ಹೋದರೂ, ನಾಚಿಕೆಯಿಂದಾಗಿ ಏನನ್ನೂ ಹೇಳದೇ ವಾಪಸ್ ಬರುವವರೇ ಹೆಚ್ಚು. ಇನ್ನು ಕೆಲವರು, ಎದುರಿಗಿರುವವರೇ ಪ್ರೇಮ ನಿವೇದನೆ ಮಾಡುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಆದ್ರೆ ಧೈರ್ಯವಾಗಿ ಮಾತನಾಡಿದರೆ ತಾವು ಇಷ್ಟವರನ್ನು ಒಲಿಸಿಕೊಳ್ಳಬಹುದು ಎಂದು ಹೇಳುತ್ತೆ ರಾಶಿ ಭವಿಷ್ಯ.
ಮಿಥುನ ರಾಶಿ;
ಮಿಥುನ ರಾಶಿಯವರು ತುಂಬಾ ಯೋಚನೆ ಮಾಡಿ ನಿರ್ಧಾರ ಮಾಡುತ್ತಾರೆ. ಯಾರನ್ನಾದರೂ ಪ್ರೀತಿಸುತ್ತಿರುತ್ತಾರೆ. ಆದ್ರೆ ಅವರ ಬಳಿ ಹೇಳಿದರೆ ಎಲ್ಲಿ ಬೇಸರ ಮಾಡಿಕೊಂಡುಬಿಡುತ್ತಾರೋ ಅನ್ನೋ ಭಯ ಇರುತ್ತದೆ. ಪ್ರೀತಿ ಮಾಡದಿದ್ದರೂ ಪರವಾಗಿಲ್ಲ, ಸ್ವೇಹ ಸಂಬಂಧದಲ್ಲಾದರೂ ಬಿರುಕು ಬರದಿದ್ದರೆ ಸಾಕು ಎಂದುಕೊಳ್ಳುತ್ತಿರುತ್ತಾರೆ. ಹೀಗಾಗಿ, ಮಿಥುನ ರಾಶಿಯವರು ಪ್ರೇಮ ನಿವೇದನೆ ಮಾಡೋಕೆ ಆಗದೆಯೇ ಪರಿತಪಿಸುವವರೇ ಹೆಚ್ಚು.
ಕರ್ಕಾಟಕ ರಾಶಿ;
ಕರ್ಕಾಟಕ ರಾಶಿ ಪ್ರೀತಿಸುತ್ತಾರೆ. ಪ್ರೇಮ ನಿವೇದನೆಯನ್ನೂ ಮಾಡುತ್ತಾರೆ. ಆದ್ರೆ ಸಿಕ್ಕ ಸಂಗಾತಿಯ ಬಗ್ಗೆ ಅನುಮಾನ ಹೊಂದಿರುತ್ತಾರೆ. ಪ್ರೀತಿಯಲ್ಲಿ ಇವರಿಗೆ ನಂಬಿಕೆಯೇ ಇರೋದಿಲ್ಲ. ಮೊದಲು ಇಷ್ಟಪಟ್ಟು ಅವರಿಗೆ ಪ್ರೀತಿಯ ವಿಷಯ ಹೇಳಿಬಿಡುತ್ತಾರೆ. ಆ ಕಡೆಯಿಂದ ಒಪ್ಪಿಗೆ ಬಂದ ಮೇಲೆ ಇನ್ನೂ ಒಳ್ಳೆಯ ಹುಡುಗಿ ಸಿಗುತ್ತಿದ್ದಳೋ ಏನೋ ಎಂದು ಯೋಚನೆ ಮಾಡುತ್ತಾರೆ. ಇನ್ನೂ ಕೆಲವರು ಪ್ರೀತಿಸಿದ ಹುಡುಗಿ ಬೇರೆ ಯಾರ ಜೊತೆಯಾದರೂ ಮಾತನಾಡಿದರೆ ಅನುಮಾನ ಪಡುತ್ತಿರುತ್ತಾರೆ.
ಸಿಂಹ ರಾಶಿ;
ಸಿಂಹ ರಾಶಿಯವರಿಗೆ ಅವರ ಪ್ರೇಮಿಯ ಬಗ್ಗೆಯೇ ಅವರಿಗೆ ನಿರ್ಲಕ್ಷ್ಯ ಇರುತ್ತದೆ. ಪ್ರೇಮಿಯ ಬಗ್ಗೆ ಯೋಚನೆ ಮಾಡುತ್ತಲೇ ಮನಸ್ಸನ್ನು ವಿಚಲಿತಗೊಳಿಸಿಕೊಳ್ಳುತ್ತಿರುತ್ತಾರೆ. ಪ್ರೇಮಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೇ ಹೋಗೋದಿಲ್ಲ.
ಕನ್ಯಾ ರಾಶಿ;
ಮೇಷರಾಶಿಯಂತೆ ಕನ್ಯಾರಾಶಿಯವರಿಗೆ ಕೂಡಾ ಈ ಬಾರಿ ಉತ್ತಮ ವಾತಾವರಣವಿದೆ. ಸಂಗಾತಿಯನ್ನು ಪಡೆಯಲು ಈ ಪ್ರೇಮಿಗಳ ದಿನ ಕನ್ಯಾ ರಾಶಿಯವರಿಗೆ ಉತ್ತಮ ದಿನ. ನಿಮ್ಮ ಒಳ್ಳೆಯತನ ನೀವು ಪ್ರೀತಿಸಬೇಕೆಂದಿರುವ ವ್ಯಕ್ತಿಗೆ ತುಂಬಾ ಇಷ್ಟವಾಗಿರುತ್ತದೆ. ನೀವು ಪ್ರೇಮ ನಿವೇದನೆ ಮಾಡಿಕೊಂಡ ತಕ್ಷಣವೇ ಒಪ್ಪಿಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ಪ್ರೀತಿ ವಿಚಾರ ಸದ್ಯಕ್ಕೆ ಮನೆಯಲ್ಲಿ ತಿಳಿಸುವ ಪ್ರಯತ್ನ ಮಾಡಬಾರದು.
ತುಲಾ ರಾಶಿ;
ತುಲಾ ರಾಶಿಯವರಿಗೂ ಅಷ್ಟೇ ತಾವು ಇಷ್ಟಪಡುವವರ ಜೊತೆ ಮನ ಬಿಚ್ಚಿ ಮಾತನಾಡಬಹುದು. ನೀವು ಹೇಳಿದ್ದಕ್ಕೆಲ್ಲಾ ಅವರು ಒಪ್ಪಿಕೊಳ್ಳುತ್ತಾರೆ. ಸೂಕ್ತ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿದರೆ, ನಿಮಗೆ ಜಯ ಸಿಕ್ಕೇ ಸಿಗುತ್ತದೆ. ನಿಮ್ಮ ರಾಶಿಫಲದ ಪ್ರಕಾರ ಫೆಬ್ರವರಿ 14 ನಿಮಗೆ ತುಂಬಾ ಒಳ್ಳೆಯ ದಿನ
ವೃಶ್ಚಿಕ ರಾಶಿ;
ಫೆಬ್ರವರಿ ತಿಂಗಳು ನಿಮಗೆ ತುಂಬಾನೇ ಮಂಗಳಕರವಾದ ದಿನ. ನೀವು ಪ್ರೇಮ ನಿವೇದನೆ ಮಾಡಿಕೊಂಡರೆ ಅದು ಸಕ್ಸಸ್ ಆಗುತ್ತದೆ. ಆದ್ರೆ ನಿಮ್ಮ ಮನೆಯವರಿಂದ ಹಾಗೂ ಸ್ನೇಹಿತರಿಂದ ಇದಕ್ಕೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಪ್ರೇಮಿಗಳ ದಿನದಂದು ಸ್ನೇಹಿತರು ಹಾಗೂ ಮನೆಯವರಿಂದ ಎಚ್ಚರಿಕೆಯಿಂದ ಇರುವುದು ಅಗತ್ಯ.
ಧನು ರಾಶಿ;
ಧನು ರಾಶಿಯವರಿಗೂ ಅಷ್ಟೇ ಈ ಬಾರಿಯ ಫೆಬ್ರವರಿ ಅದೃಷ್ಟದ ತಿಂಗಳು. ಪ್ರೇಮ ಜೀವನದಲ್ಲೂ ಸಾಕಷ್ಟು ಯಶಸ್ಸು ಗಳಿಸಬಹುದು. ಈ ತಿಂಗಳಲ್ಲಿ ನೀವು ಪ್ರೇಮ ನಿವೇದನೆ ಮಾಡಿಕೊಂಡರೆ, ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕರೆ ನಿಮ್ಮ ಇಡೀ ಜೀವನ ಬಂಗಾರವಾಗಿರುತ್ತದೆ.
ಮಕರ ರಾಶಿ;
ನಿಮ್ಮ ಗುಣದಿಂದ ನೀವು ಇಷ್ಟಪಡುವವರನ್ನು ಒಲಿಸಿಕೊಳ್ಳಬಹುದು. ರಾಶಿ ಭವಿಷ್ಯ ಕೂಡಾ ನಿಮಗೆ ಸಹಕಾರಿಯಾಗಿದೆ. ನೀವು ಇಷ್ಟಪಡುವವರನ್ನು ಸೂಕ್ತ ಸಮಯ ನೋಡಿಕೊಂಡು ಅವರ ಬಳಿ ಪ್ರೇಮ ನಿವೇದನೆ ಮಾಡಿಕೊಂಡರೆ ಯಶಸ್ಸು ಸಿಗುತ್ತದೆ.
ಕುಂಭ ರಾಶಿ;
ಕುಂಭ ರಾಶಿಯವರಿಗೆ ಈ ಬಾರಿಯ ಪ್ರೇಮಿಗಳ ದಿನಾಚರಣೆ ಅಷ್ಟು ಶುಭವಾಗಿಲ್ಲ. ಒಂದು ವೇಳೆ ನಿವೇದನೆ ಮಾಡಿಕೊಂಡರೂ ರಿಜೆಕ್ಟ್ ಆಗುವ ಚಾನ್ಸಸ್ ಜಾಸ್ತಿ ಇರುತ್ತದೆ. ಹಾಗಂತ ಬೇಜಾರಾಗುವ ಅಗತ್ಯವಿಲ್ಲ. ರಿಜೆಕ್ಟ್ ಮಾಡಿದರೂ ಕಾದು ನೋಡುವ ತಂತ್ರ ಅನುಸರಿಸಿದರೆ, ಆಕೆಗೆ ಯಾವುದೇ ತೊಂದರೆ ಕೊಡಲು ಹೋಗದೆ ನಿಮ್ಮ ಪಾಡಿಗೆ ನೀವಿದ್ದರೆ ಆದಷ್ಟು ಬೇಗ ನೀವು ಇಷ್ಟಪಟ್ಟವರು ಅವರಾಗೆ ಅವರೇ ನಿಮ್ಮ ಬಳಿ ಬರುತ್ತಾರೆ. ಆದ್ರೆ ಅದಕ್ಕೆ ಸಮಯ ಬೇಕಾಗುತ್ತದೆ.