Bengaluru

Bhadrapura; ಇಲ್ಲಿ ಗವರ್ನಮೆಂಟ್-ಹೈಕೋರ್ಟ್‌  ದೋಸ್ತಿ ದೋಸ್ತಿ..!, ಶುಗರ್ ಗೆ ಕಾಫಿ ಕಂಡ್ರಾಗಲ್ಲ..!,

ಇದೇನಿದು ಅಂತ ಆಶ್ಚರ್ಯ ಆಯ್ತಾ..? ಆಗ್ಲೇಬೇಕು..ಯಾಕಂದ್ರೆ ಬೆಂಗಳೂರಿನ ಸಮೀಪದಲ್ಲೇ ಒಂದು ಪುಟ್ಟ ಹಳ್ಳಿ ಇದೆ..ಈ ಹಳ್ಳಿಯಲ್ಲಿ ಶುಗರ್‍—ಕಾಫಿ ದಿನಾ ಜಗಳ ಆಡ್ತವೆ.. ಗವರ್ನಮೆಂಟ್‍ಹೇಳಿದ್ದನ್ನೇ ಹೈಕೋರ್ಟ್‍ಮಾಡೋದು..ಈ ಊರಲ್ಲಿ ಮೈಸೂರ್‍ಪಾಕ್‍ಮಾತಾಡುತ್ತೆ.. ಇಲ್ಲಿ ಜಪಾನ್‍ಇದೆ, ಉತ್ತರ ಕೊರಿಯಾ ಇದೆ.. ಅಮೆರಿಕಾನೂ ಇಲ್ಲೇ ಠಿಕಾಣಿ ಹೂಡಿದೆ, ಡಾಲರ್‌ ಕೂಡಾ ಇಲ್ಲಿ ಸಿಗುತ್ತೆ.. ಗೂಗಲ್‍ ಇವೆಲ್ಲವನ್ನೂ ಬೆಸೆಯುತ್ತಿದೆ.. ಬೇಜಾರಾದ್ರೆ ಕುಡಿಯೋಕೆ ಒನ್‍ಬೈಟು ಕಾಫಿ ಕೂಡಾ ರೆಡಿ..! (funny names)

ನೀವು ಹೇಳ್ತಿರೋದು ಹಳ್ಳಿ ಅಂತ.. ಅಲ್ಲಿ ಹೇಗೆ ಬೇರೆ ಬೇರೆ ದೇಶಗಳು ಸಿಗುತ್ತವೆ ಅನ್ನೋ ಪ್ರಶ್ನೆ ನಿಮ್ಮದಾಗಿರಬಹುದು..ಹಾಗಾದ್ರೆ ಹೇಳ್ತೀವಿ ಕೇಳಿ..ಮೇಲೆ ಹೇಳಿದ್ದೆಲ್ಲಾ ಈ ಹಳ್ಳಿಯಲ್ಲಿರುವ ಜನರ ಹೆಸರುಗಳು..! ಪ್ರಪಂಚದಲ್ಲಿ ಪ್ರಚಲಿತದಲ್ಲಿರುವ ಪದಗಳೆಲ್ಲಾ ಈ ಹಳ್ಳಿ ಜನರ ನಾಮಧೇಯಗಳೇ.! (hakkipikki tribe)

ಹಕ್ಕಿಪಿಕ್ಕಿ ಜನರ ಹೆಸರುಗಳೇ ವಿಚಿತ್ರ

ಇದು ಬಿಡದಿಗೆ ಹತ್ತಿರವಿರುವ ಭದ್ರಾಪುರ ಗ್ರಾಮ.. ಕಾಡಿನಲ್ಲಿ ಹಕ್ಕಿಗಳ ಬೇಟೆಯಾಡುತ್ತಾ ಊರಿಂದೂರಿಗೆ ವಲಸೆ ಹೋಗುವ ಹಕ್ಕಿಪಿಕ್ಕಿ ಜನಾಂಗದ ಒಂದಷ್ಟು ಕುಟುಂಬಗಳು ಇಲ್ಲಿ ನೆಲೆ ನಿಂತಿವೆ.. ಇವರು ಮೊದಲಿನಿಂದಲೂ ವಿಚಿತ್ರ ವಿಚಿತ್ರ ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದರು. ಇದೀಗ ಇವರು ನಗರೀಕರಣಕ್ಕೆ ಒಗ್ಗಿಕೊಳ್ಳುತ್ತಿದ್ದು ಹಳೇ ಪದ್ಧತಿಯನ್ನು ಬಿಟ್ಟು, ಹೈಬ್ರಿಡ್‍ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವೇ ಮೇಲಿನ ವಿಚಿತ್ರ ಹೆಸರುಗಳು..! (bhadrapura, near bidadi)

ಪಕ್ಷಗಳ ಹೆಸರೂ ಇಟ್ಟುಕೊಳ್ಳುತ್ತಾರೆ ಇಲ್ಲಿನ ಜನ!

ಕಾಂಗ್ರೆಸ್‍, ಜೆಡಿಎಸ್‍, ಜನತಾ, ಬಿಜೆಪಿ ಅನ್ನೋದು ರಾಜಕೀಯ ಪಕ್ಷಗಳ ಹೆಸರುಗಳು.. ಆದರೆ ಭದ್ರಾಪುರದಲ್ಲಿ ಕೆಲವರಿಗೆ ಈ ಹೆಸರನ್ನೇ ಇಟ್ಟಿದ್ದಾರೆ. ದೇಶಗಳ ಹೆಸರುಗಳು, ತಿಂಡಿಗಳ ಹೆಸರುಗಳು ಹೀಗೆ ಮನಸಿಗೆ ಏನು ಅನಿಸಿದರೆ ಅವೇ ಹೆಸರುಗಳನ್ನು ಇಡುತ್ತಾರೆ. ಮತದಾರರ ಪಟ್ಟಿ, ಇತರೆ ಸರ್ಕಾರಿ ದಾಖಲೆಗಳಲ್ಲೂ ಇವೇ ಹೆಸರುಗಳು ದಾಖಲಾಗಿರುವುದು ವಿಶೇಷ..!

ಬೇಟೆಯಾಡುವುದೇ ಇವರ ಮುಖ್ಯ ಕಸುಬು!

ಹಕ್ಕಿಪಿಕ್ಕಿ ಜನಾಂಗದವರು ಹಕ್ಕಿಗಳನ್ನು ಬೇಟೆಯಾಡುತ್ತಾರೆ. ಈ ಕಾರಣಕ್ಕೆ ಅವರು ತಮ್ಮ ಮಕ್ಕಳಿಗೆ ಯೋಧರ ಹೆಸರುಗಳನ್ನು ಇಡುತ್ತಿದ್ದರು. ಬರಬರುತ್ತಾ ಅವರು ಹೆಸರಿಡುವ ಪದ್ಧತಿ ಬದಲಾಗುತ್ತಾ ಹೋಯಿತು. 1970ರಲ್ಲಿ ಮಗು ಹುಟ್ಟಿದಾಗ ಹತ್ತಿರ ಕಾಣಿಸಿದ ವಸ್ತುಗಳ ಹೆಸರುಗಳನ್ನೇ ಇಡಲು ಪ್ರಾರಂಭಿಸಿದರು. ಹೀಗಾಗಿ 70 ದಶಕದಲ್ಲಿ ಭದ್ರಾಪುರದ ಹಕ್ಕಿಪಿಕ್ಕಿ ಜನಾಂಗದ ಮಕ್ಕಳ ಹೆಸರುಗಳು ಕೋಕ್‍, ಪಿಸ್ತೂಲ್‍, ಬ್ರಿಟೀಷ್‍, ಕಾಂಪೌಂಡ್‍ಹೀಗೆ ಇರುತ್ತಿದ್ದವು.

1980ರ ನಂತರ ಹಕ್ಕಿಪಿಕ್ಕಿ ಜನಾಂಗದವರು ಹೆಚ್ಚು ನಗರಗಳ ಕಡೆ ಮುಖ ಮಾಡಿದರು. ಭದ್ರಾಪುರ ಬೆಂಗಳೂರಿಗೆ ಹತ್ತಿರವಿರುವುದರಿಂದ ನಗರದ ಒಡನಾಟ ಹೆಚ್ಚಾಯಿತು. ಹಕ್ಕಿಗಳನ್ನು ಬೇಟಯಾಡುವ ಇವರು ಊರೂರು ಅಲೆದಾಡಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಕೂದಲುಗಳನ್ನು ಸಂಗ್ರಹಿಸುತ್ತಾರೆ. ನಗರೀಕರಣ ಹೆಚ್ಚಾದಂತೆಲ್ಲಾ ಹಕ್ಕಿಪಿಕ್ಕಿ ಜನಾಂಗದವರು ನಗರವಾಸಿಗಳ ಜೊತೆ ಒಡನಾಟ ಇಟ್ಟುಕೊಂಡರು. ಹೀಗಾಗಿ ಅವರು ವಿದೇಶಿ ಸೆಲೆಬ್ರಿಟಿಗಳು, ಬೇರೆ ದೇಶಗಳ ಹೆಸರುಗಳು, ತಿಂಡಿಗಳ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಡಲು ಪ್ರಾರಂಭಿಸಿದರು.

ಕೋರ್ಟ್‌ ಮೆಟ್ಟಿಲೇರಿ ಹೆಸರಿಗೆ ಮಾನ್ಯತೆ ಪಡೆದ ಜನ!

ಈ ರೀತಿಯ ವಿಚಿತ್ರ ಹೆಸರುಗಳಿಗೆ ಸರ್ಕಾರ ಮಾನ್ಯತೆ ನೀಡಿರಲಿಲ್ಲ. ಆದರೆ ಕೋರ್ಟ್‍ಹಕ್ಕಿಪಿಕ್ಕಿ ಜನಾಂಗ ಹೋರಾಟಕ್ಕೆ ಅಸ್ತು ಎಂದಿದೆ.. ಹೀಗಾಗಿ ಕೆಲ ವರ್ಷಗಳಿಂದ ಮತದಾರರ ಪಟ್ಟಿ, ಆಸ್ತಿ ದಾಖಲೆಗಳು, ಕೊನೆಗೆ ಪಾಸ್‍ಪೋರ್ಟ್‍ನಲ್ಲೂ ಈ ವಿಚಿತ್ರ ಹೆಸರುಗಳು ಕಂಡುಬರುತ್ತಿವೆ. ಹೀಗಾಗಿ ನೀವು ಭದ್ರಾಪುರದಲ್ಲಿ ಹೋಗಿ ಮೈಸೂರ್‍ಪಾಕ್‍ಕೇಳಿದ್ರೆ ಒಂದು ಹುಡುಗ ನಿಮ್ಮ ಮುಂದೆ ಬಂದು ನಿಲ್ತಾನೆ.. ಕಾಫಿ ಕೇಳಿದ್ರೂ ನಿಮಗೆ ಸಿಗೋದು ವ್ಯಕ್ತಿಯೊಬ್ಬನ ಉತ್ತರ ಮಾತ್ರ..

 

Share Post