LifestyleNational

Sela Tunnel: ವಿಶ್ವದ ಅತಿ ಉದ್ದದ ಸೆಲಾ ಪಾಸ್ ಸುರಂಗ ಮಾರ್ಗ ಲೋಕಾರ್ಪಣೆ

ನವದೆಹಲಿ; ಅರುಣಾಚಲ ಪ್ರದೇಶದಲ್ಲಿ ವಿಶ್ವದ ಅತಿ ಎತ್ತರದಲ್ಲಿ (13000 ಅಡಿ) ನಿರ್ಮಿಸಲಾಗಿರುವ  ಬಹು ನಿರೀಕ್ಷಿತ ಮತ್ತು ಉದ್ದವಾದ ಸೆಲಾ ಪಾಸ್  ದ್ವಿಪಥ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. 

ಅರುಣಾಚಲ ಪ್ರದೇಶದ ಪಶ್ಚಿಮ ಕಮಿಂಗ್ ಮತ್ತು ತವಾಂಗ್ ಜಿಲ್ಲೆಗಳನ್ನು ಈ ಸುರಂಗ ಮಾರ್ಗ ಸಂಪರ್ಕಿಸಲಿದ್ದು, ವಾಸ್ತವ ಗಡಿ ನಿಯಂತ್ರಣ ರೇಖೆ  ತಲುಪುವುದಕ್ಕೆ ಇದೊಂದೇ ಮಾರ್ಗ ಇರೋದು ಎಂದು ಗೊತ್ತಾಗಿದೆ. ರಾಜತಾಂತ್ರಿಕ ದೃಷ್ಟಿಯಿಂದ ಭಾರತಕ್ಕೆ ಸೆಲಾ ಪಾಸ್ ಸುರಂಗ ಮಾರ್ಗ ಸಾಕಷ್ಟು ಅನುಕೂಲವಾಗಿದೆ. ಹಾಗಾದ್ರೆ ಈ ಸುರಂಗ ಮಾರ್ಗದ ವಿಶೇಷತೆ ಏನು..? ನೋಡೋಣ..

ಸೆಲಾ ಪಾಸ್‌ ಮಾರ್ಗ ಭಾರತೀಯ ಸೇನೆಗೆ ಏಕೆ ಮುಖ್ಯ..?;

ಸೆಲಾ ಪಾಸ್‌ ಮಾರ್ಗ ಭಾರತೀಯ ಸೇನೆಗೆ ಏಕೆ ಮುಖ್ಯ..?: ತವಾಂಗ್ ತಲುಪಲು ಬಲಿಪರಾ-ಚರಿದುವಾರ್ ರಸ್ತೆಯನ್ನು ಬಳಸಲಾಗುತ್ತಿತ್ತು. ಆದ್ರೆ ಚಳಿಗಾಲದಲ್ಲಿ ಭಾರೀ ಹಿಮಪಾತವಾಗಿ ಈ ರಸ್ತೆಯೇ ಸಂಪೂರ್ಣ ಬಂದ್‌ ಆಗುತ್ತಿತ್ತು. ಜೊತೆಗೆ ಸೆಲಾ ಪಾಸ್‌ ಸುಮಾರು 30 ತಿರುವುಗಳನ್ನು ಹೊಂದಿದ್ದರಿಂದ ಸಂಚಾರವೂ ತುಂಬಾ ತಡವಾಗುತ್ತಿತ್ತು. ಇದರಿಂದಾಗಿ ಭಾರತೀಯ ಸೈನಿಕರು ಹಾಗೂ ಸುತ್ತಮುತ್ತಲ ಜನಕ್ಕೆ ತುಂಬಾನೇ ತೊಂದರೆಯಾಗುತ್ತಿತ್ತು.  ಆದ್ರೆ ಈಗ ಈ ಸುರಂಗದಿಂದ ಎಲ್ಲಾ ಸಮಸ್ಯೆಗಳೂ ಮಾಯವಾಗಿವೆ.  ಸೆಲಾ ಪಾಸ್ ಸುರಂಗ ಈಗಿರುವ ರಸ್ತೆಯನ್ನು ಬೈಪಾಸ್ ಮಾಡುತ್ತದೆ.  ಇದು ಬೈಸಾಖಿಯನ್ನು ನುರಾನಾಂಗ್‌ಗೆ ಸಂಪರ್ಕಿಸುತ್ತದೆ.

11.84 ಕಿಲೋ ಮೀಟರ್‌ ಉದ್ದದ ಸುರಂಗ ಮಾರ್ಗ;

11.84 ಕಿಲೋ ಮೀಟರ್‌ ಉದ್ದದ ಸುರಂಗ ಮಾರ್ಗ; ಸೆಲಾ ಫಾಸ್ ಸುರಂಗ ಯೋಜನೆಯ ಒಟ್ಟು ಉದ್ದ 11.84 ಕಿಲೋಮೀಟರ್ ಹೊಂದಿದೆ. ಸುರಂಗಗಳು ಮತ್ತು ರಸ್ತೆಯನ್ನು ಒಳಗೊಂಡ ಮಾರ್ಗ ಇದಾಗಿದೆ. ಪಶ್ಚಿಮ ಕ್ಯೂಮಿಂಗ್ ಜಿಲ್ಲೆಯ (ಬೈಸಾಖಿ) ಕಡೆಗೆ 7.2 ಕಿಲೋಮೀಟರ್ ತಲುಪಿದ ಮೇಲೆ ಸುರಂಗ-1 ಅನ್ನು ಪ್ರವೇಶ ಮಾಡಲಾಗುತ್ತದೆ. ಮೊದಲು ಸುರಂಗ ಸುಮಾರು 1 ಕಿಲೋ ಮೀಟರ್‌ ಉದ್ದ ಇದೆ.  1.2 ಕಿಲೋಮೀಟರ್ ಉದ್ದದ ರಸ್ತೆ ಬರುತ್ತದೆ. ನಂತರ ಬರುವ ಎರಡನೇ ಸುರಂಗ 1.591 ಕಿಲೋ ಮೀಟರ್‌ ದೂರವಿದೆ. ನಂತರ ರಸ್ತೆ ಸಿಗಲಿದ್ದು 770 ಮೀಟರ್‌ ನಂತರ ನೂರಾನಾಂಗ್‌ ಕಡೆಗೆ ಹೋಗಬಹುದು.

ವಿಶ್ವದ ಅತಿ ಎತ್ತರದ ಸುರಂಗದ ವಿಶೇಷತೆ ಏನು..?

13,500 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ನಿರ್ಮಾಣ
ಸುರಂಗ 1 ಮತ್ತು ಸುರಂಗ 2 ಅರುಣಾಚಲ ಪ್ರದೇಶದ ತವಾಂಗ್, ಪಶ್ಚಿಮ ಕಮೆಂಗ್ ಜಿಲ್ಲೆಗಳ ಸಂಪರ್ಕ
ಸುರಂಗದ ಒಟ್ಟು ಉದ್ದ 11.84 ಕಿಲೋಮೀಟರ್
ಸ್ವದೇಶಿ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸುರಂಗ ನಿರ್ಮಾಣ
ಈ ಮಾರ್ಗದಲ್ಲಿ ಹಿಮಪಾತದ ಪರಿಣಾಮ, ಸಮಸ್ಯೆ ಇಲ್ಲ

 

Share Post