ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ತೊಕ್ಕು, ಒಮ್ಮೆ ಮಾಡಿ ನೋಡಿ
ಚಳಿಗಾಲಕ್ಕೆ ಸ್ವಲ್ಪ ಖಾರ ಖಾರವಾಗಿ ಏನಾದ್ರೂ ತಿನ್ನಬೇಕು ಅನ್ಸುತ್ತೆ. ಜೊತೆಗೆ ಮನೆಯಲ್ಲಿ ಸಾಂಬಾರ್ ಮಾಡೋಕೆ ಏನು ಇಲ್ಲ, ಬರೀ ರೊಟ್ಟಿ, ಚಪಾತಿ ಇದೆ ಅಂದ್ರೆ ಅದಕೆಕ ಚಟ್ನಿ ಮಾಡುವ ಅವಶ್ಯಕತೆಯೂ ಇರುವುದಿಲ್ಲ ಅಷ್ಟು ಪ್ರಯೋಜನಕಾರಿ ಈ ಹುಣಸೆಹಣ್ಣಿನ ತೊಕ್ಕು. ಮಾಡುವುದು ಸುಲಭ, ಸಾಮಗ್ರಿಗಳು ಕೂಡ ಬೆರಳೆಣಿಕೆಯಷ್ಟೇ. ನಾಲ್ಕೈದು ಅಡುಗೆ ಸಾಮಾನು ಪದಾಋಥಗಳಲ್ಲಿ ಈ ರೆಸಿಪಿ ತಯಾರಾಗುತ್ತದೆ. ವರ್ಷಗಟ್ಟಲೆ ಉಪ್ಪಿನ ಕಾಯಿ ಥರ ಸ್ಟೋರ್ ಮಾಡಿ ಬಳಸಬಹುದು. ಉಪ್ಪಿನಕಾಯಿ ಇಲ್ಲದಿದ್ರೂ ಪರವಾಗಿಲ್ಲ ಇದನ್ನೇ ಪರ್ಯಾಯವಾಗಿ ಬಳಸಬಹುದು
ಬೇಕಾಗುವ ಸಾಮಗ್ರಿಗಳು
೧. ಹಸಿ ಹುಣಸೆಹಣ್ಣು
೨. ಅರಿಶಿಣ ಪುಡಿ
೩. ಉಪ್ಪು
೪. ಹಸಿ/ಒಣ ಮೆಣಸಿನ ಕಾಯಿ
ಮಾಡುವ ವಿಧಾನ
ಮೊದಲಿಗೆ ಹದವಾಗಿ ಹಣ್ಣಾಗಿರುವ ಹುಣಸೆ ಹಣ್ಣನ್ನು ತೆಗೆದುಕೊಳ್ಳಬೇಕು. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಅರ್ಧ ಕೆಜಿ. ಒಂದು ಕೆಜಿ ನಿಮ್ಮ ಇಷ್ಟಕ್ಕನುಗುಣವಾಗಿ ತೆಗೆದುಕೊಂಡು ಅದರ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಮತ್ತು ಹೆಚ್ಚಾಗಿ ಖಾರ ತಿನ್ನುವವರು ೩೦೦/೪೦೦ ಗ್ರಾಂ ಬಳಸಬಹುದು.
ಇವೆಲ್ಲವನ್ನು ಒಟ್ಟಿಗೆ ರುಬ್ಬುವ ಗುಂಡಿನಲ್ಲಿ ರುಬ್ಬಬೇಕು. ಮಿಕ್ಸಿ ಕೂಡ ಮಾಡಬಹುದು ಆದ್ರೆ ಇದಕ್ಕೆ ನೀರನ್ನು ಉಪಯೋಗಿಸುವಂತಿಲ್ಲ. ಹುಣಸೆ ಹಣ್ಣಿನ ರಸದಿಂದಲೇ ಎಲ್ಲವನ್ನು ಸರಿಯಾಗ ಮಿಶ್ರಣ ಮಾಡಬೇಕು. ಮೊದಲ ಬಾರಿಗೆ ಅರ್ಧಂಬರ್ಧ ರುಬ್ಬಿ ಒಂದು ಜಾರಿನಲ್ಲಿ ಸ್ಟೋರ್ ಮಾಡಬೇಕು. ಒಂದು ವಾರ ಅಥವಾ ಹತ್ತು ದಿನಗಳ ಬಳಿಕ ಮತ್ತೊಮ್ಮೆ ಹೊರತೆಗೆದು ರುಬ್ಬಬೇಕು. ನುಣ್ಣಗೆ ಹುಣಸೆಹಣ್ಣಿನ ಬೀಜ ಸಮೇತ ರುಬ್ಬಿ(ಹುಣಸೆ ಬೀಜ ಎಳೆಯದ್ದಾಗಿರಬೇಕು) ಅದಕ್ಕೆ ಸ್ವಲ್ಪ ಹೆಚ್ಚಾಗಿ ಎಣ್ಣೆ, ಸಾಸಿವೆ ಕರಿಬೇವಿನೊಂದಿಗೆ ಚೆನ್ನಾಗಿ ಒಗ್ಗರಣೆ ಸೇರಿಸಿ ಬಿಟ್ಟರೆ ಆಹಾ…ಹುಣಸೆ ಹಣ್ಣಿನ ತೊಕ್ಕು ರೆಡಿ. ಇದು ವರ್ಷಾನುಗಟ್ಟಲೆ ಕೆಡುವುದಿಲ್ಲ. ಜ್ವರದೊಂದಿಗೆ ಬಳಲುತ್ತಿರುವವರಿಗೆ ರಾಮಬಾಣ ಎಂದರೆ ತಪ್ಪಾಗಲಾರದು. ತುಂಬಾ ಸುಲಭದ ವಿಧಾನ ಒಮ್ಮೆ ಮಾಡಿ ನೋಡಿ.