National

ಆಕಾಶದಲ್ಲಿ ಬೆಳಕಿನ ಹಬ್ಬ, ರಾರಾಜಿಸಿದ ತ್ರಿವರ್ಣ ಧ್ವಜ, ಮೇಕ್‌ ಇನ್‌ ಇಂಡಿಯಾ, ಸಿಂಹದ ಚಿಹ್ನೆ

ದೆಹಲಿ: ರಾಷ್ಟ್ರ ರಾಜಧಾನಿಯ ವಿಜಯ್‌ ಚೌಕ್‌ನಲ್ಲಿ ಬೀಟಿಂಗ್‌ ರೀಟ್ರೀಟ್‌ ಕಾರ್ಯಕ್ರಮದಲ್ಲಿ ಬೆಳಕಿನ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಒಂದು ಸಾವಿರ ಡ್ರೋಣ್‌ಗಳ ಮೂಲಕ ಭವ್ಯ ಭಾರತ ಪ್ರದರ್ಶನವಾಯಿತು. ಆಕಾಶದಲ್ಲಿ ಬೆಳಕಿನ ಮೂಲಕ ಸಂಗೀತ ರಾಗಗಳನ್ನು ಪ್ರದರ್ಶನ ಮಾಡಲಾಯಿತು.  10 ನಿಮಿಷಗಳ ಪ್ರದರ್ಶನವು ಸಂಗೀತದೊಂದಿಗೆ  ಸಿಂಕ್ರೊನೈಸ್ ಮಾಡಿ ಭಾರತದ ನಕ್ಷೆ, ತ್ರಿವರ್ಣ ಮತ್ತುಮೇಕ್ ಇನ್ ಇಂಡಿಯಾಸಿಂಹದ ಚಿಹ್ನೆ ಸೇರಿದಂತೆ ವಿವಿಧ ಮಾದರಿಗಳಲ್ಲಿ ಬೆಳಕಿನ ಚಿತ್ರ ಬಿಡಿಸಲಾಗಿತ್ತು.

ಲೇಸರ್‌ ಪ್ರೊಜೆಕ್ಷನ್‌ ಸಹಾಯದಿಂದ ಉತ್ತರ ಮತ್ತು ದಕ್ಷಿಣ ಬ್ಲಾಕ್ ಗೋಡೆಗಳ ಮೇಲೆ 75 ವರ್ಷಗಳ ಸ್ವಾತಂತ್ರ್ಯದ ನೆನಪಿಗಾಗಿ ಹೋರಾಟ ಹಾಗೂ ಸ್ವಾತಂತ್ರ್ಯದ ನಂತರದ ಪ್ರಯಾಣವನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. 

Share Post