ಮೈಸೂರು ಮೈಲಾರಿ ಹೋಟೆಲ್ನಲ್ಲಿ ದೋಸೆ ತಿರುವಿದ ಪ್ರಿಯಾಂಕಾ ಗಾಂಧಿ
ಮೈಸೂರು; ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ಬೆಳಗ್ಗೆ ಮೈಸೂರಿನ ಮೈಲಾರಿ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದರು. ಮೊದಲಿಗೆ ರೆಸ್ಟೋರೆಂಟ್ನ ಅಡುಗೆ ಕೋಣೆಗೆ ಹೋದ ಪ್ರಿಯಾಂಕಾ ಗಾಂಧಿ, ದೋಸೆ ತಯಾರಿಸುವುದನ್ನು ಕಲಿತರು. ಒಂದು ದೋಸೆಯನ್ನು ಹುಯ್ದು ತಿರುವಿ ಹಾಕೋ ಪ್ರಯತ್ನ ಮಾಡಿದರು.
ಅನಂತರ ಡಿ.ಕೆ.ಶಿವಕುಮಾರ್, ರಣದೀಪ್ ಸುರ್ಜೇವಾಲಾ ಹಾಗೂ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಸೇರಿ ಪ್ರಿಯಾಂಕಾ ಗಾಂಧಿಯವರು ಇಡ್ಲಿ ವಡೆ ಸವಿದರು.