EconomyLifestyle

ಹೊಲದಲ್ಲಿ ಸಿಕ್ತು ದುಬಾರಿ ವಜ್ರ; ರಾತ್ರೋರಾತ್ರಿ ಶ್ರೀಮಂತನಾದ ರೈತ..!

ಕರ್ನೂಲ್‌; ಆಂಧ್ರಪ್ರದೇಶದ ಕರ್ನೂಲು ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೊಲಗಳಲ್ಲಿ ವಜ್ರಗಳು ಸಿಗುತ್ತಿವೆ ಎಂದು ಸುದ್ದಿಗಳು ಆಗಾಗ ಹರಿದಾಡುತ್ತಿರುತ್ತವೆ.. ಈ ಹಿಂದೆ ಕೂಡಾ ಈ ಭಾಗದಲ್ಲಿ ರೈತರೊಬ್ಬರಿಗೆ ವಜ್ರವೊಂದು ಸಿಕ್ಕಿತ್ತು.. ಇದೀಗ ಕರ್ನೂಲ್‌ ಜಿಲ್ಲೆಯ ರೈತನೊಬ್ಬನಿಗೆ ತನ್ನ ಹೊಲದಲ್ಲಿ ವಜ್ರವೊಂದು ಸಿಕ್ಕಿದ್ದು, ಈಗ ರಾತ್ರೋರಾತ್ರಿ ಆತನ ಜೀವನವೇ ಬದಲಾಗಿಬಿಟ್ಟಿದೆ..

ಕರ್ನೂಲು ಜಿಲ್ಲೆ ಮದ್ದೇಕರ ಮಂಡಲ್‌ ಹಂಪಾ ಗ್ರಾಮದ ಸಣ್ಣ ರೈತ ಮಳೆ ಆಧಾರಿತ ಕೃಷಿ ಮಾಡುತ್ತಾನೆ.. ತುಂಡು ಭೂಮಿಯಷ್ಟೇ ಆತನಿದೆ.. ಆತ ಲಕ್ಷ ಲಕ್ಷಗಳಲ್ಲಿ ಹಣ ನೋಡಿದ್ದೇ ಇಲ್ಲ.. ಆದ್ರೆ, ಈಗ ಮಳೆ ಬಂದಿದ್ದು, ಹೊಲದಲ್ಲಿ ಕೃಷಿ ಮಾಡುತ್ತಿದ್ದಾಗ, ಹೊಳೆಯುತ್ತಿದ್ದ ಕಲ್ಲೊಂದು ಆ ರೈತನಿಗೆ ಸಿಕ್ಕಿದೆ.. ಆತ ಅದನ್ನು ಪೆರವಳ್ಳಿಯ ವಜ್ರ ವ್ಯಾಪಾರಿಯೊಬ್ಬರಿಗೆ ತೋರಿಸಿದ್ದಾರೆ.. ಅದನ್ನು ಪರೀಕ್ಷಿಸಿ ವ್ಯಾಪಾರಿ ಅದು ವಜ್ರ ಅನ್ನೋದನ್ನು ಖಾತ್ರಿ ಮಾಡಿದ್ದಾರೆ.. ಜೊತೆಗೆ ತನಗೇ ಕೊಟ್ಟರೆ ಖರೀದಿ ಮಾಡುತ್ತೇನೆ ಎಂದೂ ಹೇಳಿದ್ದಾರೆ..

ವಜ್ರ ಸಿಕ್ಕ ಖುಷಿಯಲ್ಲಿದ್ದ ರೈತನಿಗೆ ಹೆಚ್ಚಿನ ಆಸೆ ಇರಲಿಲ್ಲ.. ಸಮಸ್ಯೆಗಳು ತೀರಿದರೆ ಸಾಕು ಎಂದುಕೊಂಡ ರೈತ, ಆ ವ್ಯಾಪಾರಿಗೆ ವಜ್ರವನ್ನು ಮಾಡಿದ್ದಾನೆ.. ಆ ವ್ಯಪಾರಿ ರೈತನಿಗೆ 10 ಲಕ್ಷ ರೂಪಾಯಿ ಹಣ ಹಾಗೂ 10 ಗ್ರಾಂ ಚಿನ್ನವನ್ನು ಕೊಟ್ಟಿದ್ದಾನಂತೆ..!. ಇದಕ್ಕೇ ರೈತ ಫುಲ್‌ ಖುಷಿಯಾಗಿದ್ದಾರೆ.. ಲಕ್ಷ ರೂಪಾಯಿ ಹಣವನ್ನು ಎಂದೂ ನೋಡದ ರೈತನಿಗೆ ಒಮ್ಮೆಗೇ ಹತ್ತು ಲಕ್ಷ ರೂಪಾಯಿ ಸಿಕ್ಕಿದೆ.. ಇದರಿಂದ ರೈತ ಫುಲ್‌ ಖುಷ್‌ ಆಗಿದ್ದಾನೆ..

ಆದ್ರೆ ಸ್ಥಳೀಯರು ಹೇಳೋ ಪ್ರಕಾರ ರೈತ ಬೇರೆ ಕಡೆ ತೆಗೆದುಕೊಂಡು ಹೋಗಿದ್ದರೆ ಇನ್ನೂ ಹೆಚ್ಚಿನ ಹಣ ಸಿಗುತ್ತಿತ್ತು.. ಆದ್ರೆ ಕಡಿಮೆ ಬೆಲೆಗೆ ಮಾರಿಕೊಂಡಿದ್ದಾನೆ ಎಂದು ಹೇಳುತ್ತಾರೆ..  ತುಗ್ಗಲಿ ಮಂಡಲದ ತುಗ್ಗಲಿ, ರಾಮಾಪುರ, ಚಿನ್ನಜೋನಗಿರಿ, ಪಗಿದ್ರಾಯಿ, ಜಿ.ಎರ್ರಗುಡಿ, ಉಪ್ಪರ್ಲಪಲ್ಲಿ ಮತ್ತು ಗಿರಿಗೇಟ್ ಗ್ರಾಮದಲ್ಲಿ ಹೊಲದಲ್ಲಿ ವಜ್ರಗಳ ಹುಡುಕಾಟ ನಡೆಸಲಾಗುತ್ತಿದೆ.. ಮಡ್ಡಿಕೇರಾ ಮಂಡಲದ ಪೆರವಲಿ, ಮಡ್ಡಿಕೇರಾ, ಬಸಿನೇಪಲ್ಲಿ ಪ್ರದೇಶಗಳಲ್ಲೂ ಶೋಧ ನಡೆಸಲಾಗಿದೆ. ಅನಂತಪುರ ಜಿಲ್ಲೆಯ ವಜ್ರಕರೂರು, ಬೆಟಪಲ್ಲಿ, ಊಟಕಲ್ಲು, ಬಸಿನೇಪಲ್ಲಿ ಮತ್ತಿತರ ಪ್ರದೇಶಗಳಲ್ಲಿ ಕೂಡಾ ವಜ್ರಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.. ಈ ಕಾರಣದಿಂದಾಗಿ ದೂರದ ಊರುಗಳಿಂದಲೂ ಜನರು ವಜ್ರಗಳ ಹುಡುಕಾಟಕ್ಕೆ ಬರುತ್ತಿದ್ದಾರೆ..

ಕಳೆದ ವರ್ಷ ಚಿಕ್ಕ ಜೊನ್ನಗಿರಿಯ ರೈತನೊಬ್ಬನಿಗೆ ಜಮೀನಿನಲ್ಲಿ ಬೆಲೆಬಾಳುವ ವಜ್ರ ಸಿಕ್ಕಿದ್ದು ಗೊತ್ತೇ ಇದೆ. ಆದರೆ, ಈ ಬಾರಿ ಮೊದಲ ಮಳೆಗೂ ಮುನ್ನವೇ ವಜ್ರ ಬೇಟೆ ಆರಂಭವಾಗಿದೆ. ಕರ್ನೂಲು ಜಿಲ್ಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳು, ನೆರೆಯ ರಾಜ್ಯಗಳ ಜನರೂ ವಜ್ರಕ್ಕಾಗಿ ಮುಗಿ ಬೀಳುತ್ತಿದ್ದಾರೆ.

Share Post