Heart attack; ಈ ನೋವು ಹೃದಯಾಘಾತದ ಮುನ್ಸೂಚನೆ!
ಬೆಂಗಳೂರು; ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.. ಚಿಕ್ಕಮಕ್ಕಳು ಕೂಡಾ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.. ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಿದೆ.. ಕರೋನರಿ ಆರ್ಟರಿ ಡಿಸೀಸ್ (ಸಿಎಡಿ) ಹೃದಯಾಘಾತಕ್ಕೆ ಮುಖ್ಯ ಕಾರಣವೆಂದು ಪರಿಗಣಿಸಲಾಗಿದೆ. ವೈದ್ಯರು ಹೇಳುವ ಪ್ರಕಾರ ಹೃದಯಾಘಾತಕ್ಕೂ ಮೊದಲು ವಿಪರೀತವಾಗಿ ಎದೆನೋವು ಕಾಣಿಸಿಕೊಳ್ಳುತ್ತದೆ.. ಆದ್ರೆ ಎಲ್ಲಾ ಎದೆನೋವುಗಳೂ ಕೂಡಾ ಹೃದಯಾಘಾತದ ಮುನ್ಸೂಚನೆಯಲ್ಲ. ಎಂತಹ ಎದೆನೋವು ಬಂದರೆ ಹೃದಯಾಘಾತದ ಮುನ್ಸೂಚನೆ ಅನ್ನೋದನ್ನು ನೋಡೋಣ..
ಇದನ್ನೂ ಓದಿ; ತಿಂಗಳಿಗೆ 50 ಸಾವಿರ ರೂ. ಪಿಂಚಣಿ ಪಡೆಯುವುದು ಹೇಗೆ..?
ಎದೆನೋವು ಸ್ನಾಯು ನೋವಿನಿಂದಲೂ ಬರಬಹುದು. ಹೊಟ್ಟೆ ನೋವು, ಅಸಿಡಿಟಿ, ಪಿತ್ತಕೋಶದ ಕಲ್ಲುಗಳು ಕೂಡ ಎದೆನೋವಿಗೆ ಕಾರಣವಾಗಬಹುದು.. ಆದ್ರೆ ಹೃದಯಾಘಾತದ ನೋವು ಇದ್ದಕ್ಕಿದ್ದಂತೆ ಬರುತ್ತದೆ.. 2-3 ನಿಮಿಷಗಳಲ್ಲಿ ಆ ನೋವು ಹೆಚ್ಚಾಗುತ್ತದೆ, ಭಯಾನಕವೆನಿಸುತ್ತದೆ. ಈ ನೋವು ಬಲ, ಎಡ, ಎದೆಯ ಮಧ್ಯ, ದವಡೆ ಅಥವಾ ಎಡಗೈಗೂ ಹರಡುತ್ತದೆ.. ಹೃದಯಾಘಾತದ ನೋವು 10 ನಿಮಿಷಗಳಿಗಿಂತ ಹೆಚ್ಚು ಇರುತ್ತದೆ. ಆದರೆ ಬೇರೆ ಯಾವುದೇ ನೋವು ಇದ್ದರೆ, ಅದು 2 ರಿಂದ 5 ನಿಮಿಷಗಳಲ್ಲಿ ಕೊನೆಗೊಳ್ಳುತ್ತದೆ.
ಹೃದಯಾಘಾತದ ನೋವಾಗಿದ್ದರೆ ನಡೆಯುವಾಗ ಇನ್ನೂ ಹೆಚ್ಚಾಗುತ್ತದೆ.. ಎಡಭಾಗದಲ್ಲಿ ನೋವು ಬಂದು ಭುಜ ಅಥವಾ ತೋಳುಗಳಿಗೆ ಹರಡಿದರೆ ಅದು ಹೃದಯಾಘಾತದ ಮುನ್ಸೂಚನೆಯಾಗಿರುತ್ತದೆ.. ನೋವು ಎದೆಯಿಂದ ಪ್ರಾರಂಭವಾಗಿ ಅದು ದವಡೆ ತಲುಪಿದರೆ ಕೂಡಲೇ ವೈದ್ಯರನ್ನು ಸಂಪರ್ಕ ಮಾಡಿ. ಕೆಲವೊಮ್ಮೆ ಎದೆನೋವು ಕುತ್ತಿಗೆಯವರೆಗೆ ಹರಡುತ್ತದೆ. ಅದೂ ಕೂಡಾ ಹೃದಯಾಘಾತದ ಎಚ್ಚರಿಕೆ. ಎದೆಯಲ್ಲಿ ಬಿಗಿತ ಮತ್ತು ಭಾರವಾದ ಭಾವನೆಯು ಹೃದಯಾಘಾತದ ಸಂಕೇತವಾಗಿದೆ.
ಇದನ್ನೂ ಓದಿ;ಐಫೋನ್ ತಯಾರಿಕಾ ಸಂಸ್ಥೆ ಅಧ್ಯಕ್ಷ ರಾಜ್ಯಕ್ಕೆ; ಲಕ್ಷ ಉದ್ಯೋಗ ಸೃಷ್ಟಿ!