CrimeNational

ಟ್ರಕ್‌-ಕಾರು ನಡುವೆ ಭೀಕರ ಅಪಘಾತ; 6 ಮಂದಿ ದುರ್ಮರಣ!

ಲಕ್ನೋ; ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.. ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ.. ಇದರಿಂದಾಗಿ ಕಾರಿನಲ್ಲಿದ್ದ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ..

ಹಾಪುರ್‌ನ ಗರ್ಹ್ ಕೊಟ್ವಾಲಿ ಪ್ರದೇಶದಲ್ಲಿರುವ ಬ್ರಜ್‌ಘಾಟ್ ಟೋಲ್ ಪ್ಲಾಜಾ ಬಳಿ ಈ ದುರಂತ ಸಂಭವಿಸಿದೆ.. ಘಟನೆಯಲ್ಲಿ ಕಾರಿನಲ್ಲಿ ಏಳು ಮಂದಿ ಇದ್ದು, ಇದರಲ್ಲಿ ಒಬ್ಬ ಮಾತ್ರ ತೀವ್ರವಾಗಿ ಗಾಯಗೊಂಡಿದ್ದಾರೆ.. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..

6 ಮಂದಿಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ.. ಮೃತರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ..

 

Share Post