ಮದುವೆಯಾಗುವುದೇ ಬ್ಯುಸಿನೆಸ್ ಮಾಡಿಕೊಂಡಿದ್ದ ಮಹಿಳೆ ಏಡ್ಸ್!; ಪುರುಷರಲ್ಲಿ ಶುರುವಾಯ್ತು ಭೀತಿ!
ಡೆಹ್ರಾಡೂನ್; ಮದುವೆಯಾಗುವುದೇ ಬ್ಯುಸಿನೆಸ್ ಮಾಡಿಕೊಂಡು, ಹಲವು ಗಂಡಸರನ್ನು ಮದುವೆಯಾಗಿ ಅವರ ಬಳಿ ಇದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ.. ಆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆಕೆಗೆ ಏಡ್ಸ್ (HIV) ಇರುವುದು ಪತ್ತೆಯಾಗಿದೆ.. ಇದರಿಂದಾಗಿ ಪುರುಷರಲ್ಲಿ ಆತಂಕ ಶುರುವಾಗಿದೆ..
ಮದುವೆಯಾಗಿ ಕೆಲ ದಿನ ಸಂಸಾರ ಮಾಡಿದ ಮೇಲೆ ಗಂಡನ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು, ನಗನಾಣ್ಯಗಳ ಜೊತೆ ಎಸ್ಕೇಪ್ ಆಗುತ್ತಿದ್ದ ಮಹಿಳೆಯೊಬ್ಬಳನ್ನುಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.. ಆಕೆಗೆ ಸಹಾಯ ಮಾಡುತ್ತಿದ್ದ ಆರು ಮಂದಿಯ ಗ್ಯಾಂಗ್ ಕೂಡಾ ಅಂದರ್ ಆಗಿದೆ.. ಬಂಧಿತ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಆರು ಮಂದಿಯನ್ನು ಮದುವೆಯಾಗಿ ವಂಚಿಸಿರುವುದಾಗಿ ಹೇಳಿದ್ದಾರೆ.. ಇದರಲ್ಲಿ ಬಹುತೇಕ ಉತ್ತರಾಖಂಡ್ ಮೂಲದವರೇ ಆಗಿದ್ದಾರೆ..
ಆದ್ರೆ ಮಹಿಳೆ ಇನ್ನೂ ಹೆಚ್ಚು ಮಂದಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿರಬಹುದು ಎಂದು ಹೇಳಲಾಗುತ್ತಿದೆ.. ಆಕೆಗೆ ಹೆಚ್‌ಐವಿ ಇರುವುದರಿಂದ ಪುರುಷರಿಗೂ ಅದು ಹರಡಿರುವ ಸಾಧ್ಯತೆ ಇದೆ.. ಹಾಗೇನಾದರೂ ಆಗಿದ್ದರೆ, ಅವರಿಂದ ಮತ್ತಷ್ಟು ಜನಕ್ಕೆ ಹರಡುವ ಸಾಧ್ಯತೆ ಇದೆ.. ಹೀಗಾಗಿ ಆರೋಗ್ಯ ಇಲಾಖೆ ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದೆ.. ಆಕೆಯ ಸಂಪರ್ಕಕ್ಕೆ ಬಂದಿರುವ ಪುರುಷರನ್ನು ಪತ್ತೆ ಹಚ್ಚಿ ಅವರ ಆರೋಗ್ಯ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ..
ಆದ್ರೆ ಆಕೆ ಉತ್ತರಾಖಂಡ್ , ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಓಡಾಡಿದ್ದಾಳೆ.. ಅಲ್ಲೆಲ್ಲಾ ಪುರುಷರ ಜೊತೆ ದೈಹಿಕ ಸಂಪರ್ಕ ನಡೆಸಿದ್ದಾಳೆ.. ಕೆಲವರನ್ನು ಮದುವೆಯಾಗಿ ವಂಚಿಸಿದ್ದಾಳೆ.. ಹೀಗಾಗಿ ಎಲ್ಲರನ್ನೂ ಹುಡುಕೋದು ಅನ್ನೋ ಸಂಕಷ್ಟದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸಿಲುಕಿದ್ದಾರೆ..