HealthLifestyle

ಕಪ್ಪು ಅರಿಶಿಣ ನೋಡಿದ್ದೀರಾ..?; ಇದನ್ನು ಬಳಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?

ಬೆಂಗಳೂರು; ಅರಿಶಿಣ ಅಂದರೆ ಹಳದಿ ಕಲರ್‌ ಇರುತ್ತದೆ.. ಈ ಅರಿಶಿಣ ಅಡುಗೆಯಲ್ಲಿ ಬಳಸುತ್ತಾರೆ.. ಪೂಜೆಗೆ ಬಳಸುತ್ತಾರೆ.. ಜೊತೆಗೆ ಆಯುರ್ವೇದದಲ್ಲಿ ಅದೆಷ್ಟೋ ಕಾಯಿಲೆಗಳಿಗೆ ಇದು ಮದ್ದು.. ಆದ್ರೆ ಈ ಹಳದಿ ಅರಿಶಿಣಕ್ಕಿಂತ ಕಪ್ಪು ಅರಿಶಿಣ ಇನ್ನಷ್ಟು ಉಪಯುಕ್ತವಂತೆ.. ಇದು ಆಹಾರದಲ್ಲಿ ಬಳಸಿದರೆ ಆಹಾರಕ್ಕೆ ಮತ್ತಷ್ಟು ಪರಿಮಳ ಬರುತ್ತದೆ.. ಅಷ್ಟೇ ಏಕೆ, ದೇಹದ ವಿವಿಧ ಅಂಗಾಂಗಗಳ ನೋವು, ಉರಿಯೂತ ಮುಂತಾದ ಸಮಸ್ಯೆಗಳನ್ನು ಈ ಕಪ್ಪು ಅರಿಶಿಣ ಕಡಿಮೆ ಮಾಡುತ್ತದಂತೆ.. ಇನ್ನು ಚರ್ಮದ ಸಮಸ್ಯೆ ಬರದಂತೆ ಈ ಕಪ್ಪು ಅರಿಶಿಣ ತಡೆಯಲಿದ್ದು, ಮನುಷ್ಯರಿಗೆ ವಯಸ್ಸಾಗುವುದನ್ನೂ ನಿಧಾನಗೊಳಿಸುತ್ತದಂತೆ..! ಹೀಗಾಗಿ ಈ ಕಪ್ಪು ಅರಿಶಿಣಕ್ಕೆ ವಿಶೇಷ ಬೇಡಿಕೆ ಇದೆ..

ಇದನ್ನೂ ಓದಿ; Breaking; ಟೇಕಾಫ್‌ ವೇಳೆ ವಿಮಾನ ಪತನ; 19 ಮಂದಿ ದುರ್ಮರಣ!

ಕಪ್ಪು ಅರಿಶಿಣವನ್ನು ಸೇವಿಸುವುದರೆ ನಮಗೆ ಯಾವುದೇ ಕಾಯುಲೆಗಳು ಬರುವುದಿಲ್ಲ.. ಇರುವ ಕಾಯಿಲೆಗಳನ್ನು ಕೂಡಾ ಇದು ಓಡಿಸುತ್ತದೆ.. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಡುವುದರಿಂದ ನಮಗೆ ಕ್ಯಾನ್ಸರ್‌ ಬರದಂತೆ ತಡೆಯುತ್ತದೆ.. ಶ್ವಾಸಕೋಶ, ಸ್ತನ, ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್‌ಗಳನ್ನು ಬರದಂತೆ ತಡೆಯುತ್ತದೆ.. ಕ್ಯಾನ್ಸರ್‌ ಇದ್ದವರಿಗೆ ಕ್ಯಾನ್ಸರ್‌ ಕೋಶಗಳ ವಿರುದ್ಧ ಹೋರಾಡುತ್ತದೆ..

ಇದನ್ನೂ ಓದಿ; ಆಟೋ ಮೇಲೆ ದಿಢೀರ್‌ ಅಂತ ಕುಸಿಯಿತು ಮನೆ!; ಮುಂದೇನಾಯ್ತು..?

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಕಪ್ಪು ಅರಿಶಿಣ ಸೇವನೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.. ಕಪ್ಪು ಅರಿಶಿನದ ಉರಿಯೂತ ನಿವಾರಕ ಗುಣಲಕ್ಷಣಗಳು ಮಹಿಳೆಯರಲ್ಲಿ ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ. ಇದಕ್ಕೆ ಕಪ್ಪು ಅರಿಶಿನ ಪುಡಿಯನ್ನು ಬಿಸಿ ಹಾಲಿನಲ್ಲಿ ಬೆರೆಸಿ ಕುಡಿಯುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಕಪ್ಪು ಅರಿಶಿನವು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಆಸಿಡ್ ರಿಫ್ಲಕ್ಸ್, ಗ್ಯಾಸ್, ಉಬ್ಬುವುದು, ಬಿಕ್ಕಳಿಕೆ, ಅಜೀರ್ಣ, ಅಲ್ಸರ್ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಂತಹ ಸಮಸ್ಯೆಗಳು ದೂರವಾಗಿ, ಜೀರ್ಣಾಂಗ ವ್ಯವಸ್ಥೆ ಮತ್ತಷ್ಟು ಉತ್ತಮವಾಗುತ್ತಾ ಹೋಗುತ್ತದೆ..

Share Post