Economy

ಪೋಸ್ಟ್‌ ಆಫೀಸ್‌ ಮಾಸಿಕ ಆದಾಯ ಯೋಜನೆ; ತಿಂಗಳಿಗೆ 9250 ರೂಪಾಯಿ ಪಡೆಯಿರಿ!

ಹಣವನ್ನು ಉಳಿತಾಯ ಮಾಡಿ, ಅದನ್ನು ಹೂಡಿಕೆ ಮಾಡಲು ಹಲವಾರು ದಾರಿಗಳಿವೆ.. ಮ್ಯೂಚ್ಯುಯಲ್‌ ಫಂಡ್‌ಗಳು, ರಿಯಲ್‌ ಎಸ್ಟೇಟ್‌, ಚಿನ್ನದ ಬಾಂಡ್‌ಗಳು, ಆರ್‌ಡಿ ಹೀಗೆ ಹಲವಾರು ಯೋಜನೆಗಳಿವೆ.. ಇದರ ಜೊತೆ ಅಂಚೆ ಕಚೇರಿಯ ಹಲವು ಹೂಡಿಕೆ ಯೋಜನೆಗಳೂ ಇವೆ.. ಅಂಚೆ ಕಚೇರಿಯ ಹೂಡಿಕೆಯ ಯೋಜನೆಗಳು ಅತ್ಯಂತ ಸುರಕ್ಷಿತವಾದುದು.. ಇಲ್ಲಿ ನಾವು ಹೂಡಿಕೆ ಮಾಡುವ ಹಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ.. ಹೀಗಾಗಿ ನಿಶ್ಚಿಂತೆಯಿಂದ ಇಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.. ಅದರಲ್ಲೂ ಮಾಸಿಕವಾಗಿ ಆದಾಯ ಪಡೆಯಬಹುಸುವವರಿಗಾಗಿ ಮಂತ್ಲಿ ಇನ್‌ಕಮ್‌ ಸ್ಕೀಂ ಇದ್ದು, ಇದು ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿದೆ.. ಅದರ ಬಗ್ಗೆ ನಾವು ತಿಳಿಯುತ್ತಾ ಹೋಗೋಣ..

ಇದು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ.. ಹೂಡಿಕೆಯ ಮೇಲೆ ಸುರಕ್ಷಿತ ಮತ್ತು ಸ್ಥಿರವಾದ ಅಪಾಯ-ಮುಕ್ತ ಮಾಸಿಕ ಆದಾಯವನ್ನು ಪಡೆಯಲು ಬಯಸುವವರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.. ಎಲ್ಲಕ್ಕಿಂತ ಹೆಚ್ಚಾಗಿ, ನಿವೃತ್ತಿಯ ನಂತರ ತಮ್ಮ ಮಾಸಿಕ ವೆಚ್ಚಗಳಿಗೆ ಸ್ಥಿರ ಆದಾಯವನ್ನು ಬಯಸುವವರು ಯಾವುದೇ ತೊಂದರೆಯಾಗುವ ಭೀತಿ ಇಲ್ಲದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.. ಅದರಲ್ಲೂ ಕೂಡಾ ಹಿರಿಯ ನಾಗರಿಕರಿಗೆ ಇದು ಅತ್ಯಂತ ಉಪಯೋಗಕಾರಿಯಾದುದು..

ಈ ಮಾಸಿಕ ಆದಾಯ ಯೋಜನೆಗೆ ಬಂದರೆ, ಇದು ಒಂದು ಬಾರಿ ಹೂಡಿಕೆ ಯೋಜನೆ. ಅಂದರೆ ಒಂದೇ ಬಾರಿಗೆ ಹೂಡಿಕೆ ಮಾಡುವುದು. ಒಂದೇ ಖಾತೆಯ ಅಡಿಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿಯವರೆಗೆ ಹೂಡಿಕೆ ಮಾಡಬಹುದು, ಅದೇ ಜಂಟಿ ಖಾತೆಯ ಅಡಿಯಲ್ಲಿ (ಮೂರು ವ್ಯಕ್ತಿಗಳವರೆಗೆ)  ನೀವು 15 ಲಕ್ಷದವರೆಗೆ ಠೇವಣಿ ಮಾಡಬಹುದು. ಖಾತೆಯ ಅವಧಿ ಐದು ವರ್ಷಗಳು. ಅಂದರೆ ನೀವು 5 ವರ್ಷಗಳವರೆಗೆ ಪ್ರತಿ ತಿಂಗಳು ಸ್ಥಿರ ಆದಾಯವನ್ನು ಪಡೆಯುತ್ತೀರಿ. ಷೇರು ಮಾರುಕಟ್ಟೆಯಂತಹ ವಿಷಯಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಯಾವುದೇ ಅಪಾಯವಿಲ್ಲ.

10 ವರ್ಷ ಪೂರೈಸಿದ ಮಗುವಿನ ಹೆಸರಿನಲ್ಲಿ ರಕ್ಷಕ ಖಾತೆಯನ್ನು ತೆರೆಯಬಹುದು ಅಂದರೆ ಅಪ್ರಾಪ್ತ ಖಾತೆ. ಕನಿಷ್ಠ ರೂ. 1000 ಸಹ ಈ ಯೋಜನೆಗೆ ಸೇರಬಹುದು. ಪ್ರಸ್ತುತ, ಕೇಂದ್ರವು ವಾರ್ಷಿಕ ಆಧಾರದ ಮೇಲೆ ಶೇಕಡಾ 7.4 ರ ಬಡ್ಡಿದರವನ್ನು ನೀಡುತ್ತಿದೆ. ಐದು ವರ್ಷಗಳವರೆಗೆ ಅಂದರೆ ಮೆಚ್ಯೂರಿಟಿ ತನಕ ಪ್ರತಿ ತಿಂಗಳು ಬಡ್ಡಿ ಸೇರುತ್ತದೆ. ಇಲ್ಲಿ ಬಡ್ಡಿ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ಮುಂಚಿತವಾಗಿ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ.. ಕೆಲವು ಬಡ್ಡಿದರವನ್ನು ಕಡಿತಗೊಳಿಸಲಾಗುತ್ತದೆ.

ನೀವು ಒಂದು ಬಾರಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ 9 ಲಕ್ಷ ರೂಪಾಯಿ ಠೇವಣಿ ಇಟ್ಟರೆ  ಖಾತೆ ತೆರೆದ ತಿಂಗಳ ಅಂತ್ಯದಿಂದ ಮೆಚ್ಯೂರಿಟಿ ತನಕ ಪ್ರಸ್ತುತ ಬಡ್ಡಿಯಂತೆ ರೂ. 5550 ಬರುತ್ತದೆ. ಅದೇ ಜಂಟಿ ಖಾತೆಯಡಿ ಗರಿಷ್ಠ ರೂ.15 ಲಕ್ಷ ಠೇವಣಿ ಇಟ್ಟರೆ ನಂತರ ಪ್ರತಿ ತಿಂಗಳು ನಿಗದಿತ ರೂ. 9250 ಸಿಗಲಿದೆ.

Share Post