ಚಾಣಕ್ಯನ ಈ 5 ಸೂತ್ರಗಳು ಪಾಲಿಸಿದರೆ ಜೀವನದ ಎಲ್ಲಾ ಸಮಸ್ಯೆಗಳೂ ದೂರವಾಗುತ್ತವೆ!
ಬದುಕು ಅನ್ನೋದು ಸುಖ-ದುಃಖಗಳ ಸಂಗಮ.. ಪ್ರತಿಯೊಬ್ಬರಿಗೂ ಕಷ್ಟ ಸುಖಗಳು ಬರುತ್ತಲೇ ಇರುತ್ತವೆ.. ಕಷ್ಟಗಳು ಬಂದಾಗ ಅವುಗಳನ್ನು ಸರಿಯಾಗಿ ನಿಭಾಯಿಸಿ ಮುಂದೆ ಸಾಗುವವನೇ ಜೀವನದಲ್ಲಿ ಯಶಸ್ವಿಯಾಗುತ್ತಾನೆ.. ನಾವು ಸುಖದ ದಾರಿಯಲ್ಲಿ ನಡೆಯಬೇಕಾದರೆ ಚಾಣಕ್ಯನ ಸೂತ್ರಗಳನ್ನು ಅನುಸರಿಸಬೇಕು.. ಈ ಐದು ಚಾಣಕ್ಯ ನೀತಿಗಳನ್ನು ಅನುಸರಿಸಿದರೆ ಜೀವನದಲ್ಲಿ ಎಲ್ಲವನ್ನೂ ಗೆಲ್ಲಬಹುದು..
ಆರೋಗ್ಯವಾಗಿರುವುದು;
ಚಾಣಕ್ಯ ಹೇಳುವ ಪ್ರಕಾರ ಆರೋಗ್ಯವೇ ಮನುಷ್ಯನಿಗೆ ದೊಡ್ಡ ಆಸ್ತಿ.. ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಂಪಾದನೆ ಮಾಡಬಹುದು.. ಹೀಗಾಗಿ ಮೊದಲ ನಾವು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡರೆ, ಯಾವುದೇ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡಿಕೊಳ್ಳಬಹುದು.. ನಾವು ಏನೇ ಕೆಲಸ ಮಾಡಬೇಕಾದರೂ ಆರೋಗ್ಯ ತುಂಬಾನೇ ಮುಖ್ಯವಾಗುತ್ತದೆ.. ಮನುಷ್ಯ ಮಾನಸಿಕ ಹಾಗೂ ದೈಹಿಕವಾಗಿ ಸದೃಢನಾಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು..
ನಿಖರವಾದ ಯೋಜನೆ;
ಚಾಣಕ್ಯ ಹೇಳುವ ಪ್ರಕಾರ ನಮಗೊಂದು ನಿಖರವಾದ ಗುರಿ, ಯೋಜನೆ ಇದ್ದರೆ ಯಾವುದೇ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.. ನಮ್ಮ ನಿಖರವಾದ ಯೋಜನೆ ನಮಗೆ ಸರಿಯಾದ ತಿಳುವಳಿಕೆ ನೀಡುತ್ತದೆ.. ಜೊತೆಗೆ ಸಮಸ್ಯೆಗೆ ಪರಿಹಾರವನ್ನೂ ಒದಗಿಸಿಕೊಡುತ್ತದೆ.. ಹೀಗಾಗಿ ಏನೇ ಸಮಸ್ಯೆ ಬಂದರೂ ಅದು ಹೇಗೆ ಬಂತು, ಅದನ್ನು ನಿವಾರಿಸುವುದು ಹೇಗೆ..? ಅದಕ್ಕಿರುವ ದಾರಿಗಳು ಯಾವವು..? ಯಾವ ದಾರಿ ಸುಲಭವಾಗುತ್ತದೆ..? ಎಂಬುದನ್ನು ನಾವು ತಿಳಿಯಬೇಕಾಗುತ್ತದೆ.. ತುರ್ತು ಪರಿಸ್ಥಿತಿಯಲ್ಲಿ ಯಾವುದೇ ತಂತ್ರವನ್ನು ಹೊಂದಿಲ್ಲದವರು ಸಾಕಷ್ಟು ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಏನೇ ಮಾಡಬೇಕು ಎಂದರೂ ಮುಂಚಿತವಾಗಿ ಯೋಜನೆಯನ್ನು ಸಿದ್ಧಪಡಿಸಬೇಕು.
ಉಳಿತಾಯ;
ಜೀವನದಲ್ಲಿ ಯಾವಾಗ ಬೇಕಾದರೂ ಸಮಸ್ಯೆ ಬರಬಹುದು. ಎಲ್ಲ ಕಷ್ಟಗಳನ್ನು ಎದುರಿಸಲು ಆರ್ಥಿಕವಾಗಿ ಸದೃಢವಾಗಿರಬೇಕು. ಆದ್ದರಿಂದ, ಹಣವನ್ನು ಮುಂಚಿತವಾಗಿ ಉಳಿಸುವುದು ಉತ್ತಮ. ಏಕೆಂದರೆ, ಬಿಕ್ಕಟ್ಟಿನ ಸಮಯದಲ್ಲಿ, ಹಣವು ತೊಂದರೆಗಳನ್ನು ಜಯಿಸಲು ಸಹಾಯ ಮಾಡುತ್ತದೆ.
ಹುಷಾರಾಗಿರುವುದು ಅಗತ್ಯ;
ಆಚಾರ್ಯ ಚಾಣಕ್ಯರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಕಷ್ಟಗಳಲ್ಲಿ ಜಾಗರೂಕರಾಗಿರಬೇಕು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತೊಂದರೆಗಳನ್ನು ಹೊಂದಿದ್ದಾರೆ. ಅವುಗಳಿಂದ ದೂರವಾಗಲು ಕೆಲವು ಮಾರ್ಗಗಳು ಕೂಡಾ ಇವೆ.. ಸಣ್ಣ ತಪ್ಪುಗಳು ಕೂಡ ದೊಡ್ಡ ಸಮಸ್ಯೆಗಳಾಗಿ ಬದಲಾಗುತ್ತವೆ. ಆದ್ದರಿಂದ ಯಾವುದೇ ಸಮಸ್ಯೆಯ ಬಗ್ಗೆ ಕೂಲಂಕುಷವಾಗಿ ಯೋಚಿಸಿ ಶಾಂತ ಮನಸ್ಸಿನಿಂದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಸರ್ವಾನುಮತದಿಂದ ತೀರ್ಮಾನ;
ಒಂದು ವಿಷಯ ನೆನಪಿಡಿ..ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಧೈರ್ಯದಿಂದ ಮುನ್ನಡೆಯಬೇಕು. ಅದಕ್ಕಾಗಿ ಏಕತೆ ಮತ್ತು ಧೈರ್ಯ ಬಹಳ ಮುಖ್ಯ. ಅಹಂಕಾರವು ಕಷ್ಟದ ಸಮಯದಲ್ಲಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಎಲ್ಲರೂ ಸೇರಬೇಕು. ಧೈರ್ಯದಿಂದ ಒಗ್ಗಟ್ಟಿನಿಂದ ಮುನ್ನಡೆದರೆ ಯಾವುದೇ ಸಮಸ್ಯೆಯಾದರೂ ಕಡಿಮೆಯಾಗುತ್ತದೆ.