ಮಹಿಳೆಯರ ಹೆಸರಿನಲ್ಲಿ ಹೂಡಿಕೆ ಮಾಡೋದಕ್ಕೆ ಇದಕ್ಕಿಂತ ಉತ್ತಮ ಯೋಜನೆ ಇಲ್ಲ!
ಬೆಂಗಳೂರು; ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ ಮೂಲಕ ಅನೇಕ ಉಳಿತಾಯ ಯೋಜನೆಗಳನ್ನು ಜಾರಿ ಮಾಡಿದೆ.. ಅದರಲ್ಲಿ ಹೆಣ್ಣು ಮಕ್ಕಳಿಗಾಗಿ ಜಾರಿ ಮಾಡಿರುವ ಸುಕನ್ಯಾ ಸಮೃದ್ಧಿ ಯೋಜನೆ ಕೋಟ್ಯಂತರ ಜನಕ್ಕೆ ಉಪಯೋಗವಾಗುತ್ತಿದೆ.. ಇನ್ನು ಹಿರಿಯ ಹೆಂಗಸರಿಗಾಗಿಯೂ ಒಂದು ಉಳಿತಾಯ ಯೋಜನೆಯನ್ನು ಪರಿಚಯಿಸಲಾಗಿದೆ.. ಇದರಲ್ಲಿ ಕೂಡಾ ಉತ್ತಮ ಬಡ್ಡಿ ಸಿಗಲಿದ್ದು, ಮಹಿಳೆಯರ ಹೆಸರಿನಲ್ಲಿ ಉಳಿತಾಯ ಮಾಡುವುದಕ್ಕೆ ಇದು ಅತ್ಯಂತ ಉಪಯುಕ್ತ ಯೋಜನೆಯಾಗಿದೆ..
ಇದನ್ನೂ ಓದಿ; ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!
ಮಹಿಳೆಯರಿಗಾಗಿ ಪೋಸ್ಟ್ ಆಫೀಸ್‌ನಲ್ಲಿ ಜಾರಿ ಮಾಡಿರುವ ಉಳಿತಾಯ ಯೋಜನೆ ಹೆಸರು ಮಹಿಳಾ ಸಮ್ಮಾನ್ ಯೋಜನೆ.. ಕಳೆದ ವರ್ಷ ಬಜೆಟ್‌ನಲ್ಲಿ ಈ ಯೋಜನೆ ಪರಿಚಯಿಸಲಾಗಿದ್ದು, ಕನಿಷ್ಠ 1000 ರೂಪಾಯಿಯಿಂದ 2 ಲಕ್ಷದವರೆಗೆ ಠೇವಣಿ ಇಡಬಹುದಾಗಿದೆ.. ಇದಕ್ಕೆ ವಾರ್ಷಿಕ 7.5ರಷ್ಟು ಬಡ್ಡಿ ಸಿಗಲಿದೆ.. ಇದರಲ್ಲಿ ಯಾವುದೇ ಕಾರಣಕ್ಕೂ ಇತರ ಯೋಜನೆಗಳಂತೆ ಮೂರು ತಿಂಗಳಿಗೊಮ್ಮೆ ಬಡ್ಡಿ ರೇಟ್ ಬದಲಾಗುವುದಿಲ್ಲ.
ಇದನ್ನೂ ಓದಿ; ಹಬ್ಬ-ಹರಿದಿನಗಳಲ್ಲಿ ಉಪವಾಸ ಮಾಡಿದರೆ ಕ್ಯಾನ್ಸರ್ ನಮ್ಮತ್ತ ಸುಳಿಯೋದಿಲ್ಲ..!
ಈ ಯೋಜನೆಯಲ್ಲಿ ಒಂದೇ ಹಣ ಹೂಡಿಕೆ ಮಾಡಬೇಕು. ಎರಡು ವರ್ಷಗಳ ನಂತರ ಹೂಡಕೆ ಹಣವನ್ನು ವಾಪಸ್ ಪಡೆಯಬಹುದು.. ಎರಡು ಲಕ್ಷ ರೂಪಾಯಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಎರಡು ವರ್ಷಕ್ಕೆ 32 ಸಾವಿರದ 44 ರೂಪಾಯಿ ಬಡ್ಡಿ ಸಿಗಲಿದೆ.. ಅಂದ್ರೆ ಎರಡು ವರ್ಷದ ನಂತರ ನಮ್ಮ ಕೈಗೆ 2 ಲಕ್ಷ 32 ಸಾವಿರದ 44 ರೂಪಾಯಿ ಸಿಗಲಿದೆ.. ಪೋಸ್ಟ್ ಆಫೀಸ್ ಅಲ್ಲದೆ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಬ್ಯಾಂಕ್‌ಗಳಲ್ಲೂ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ..
ಇದನ್ನೂ ಓದಿ; ರೀಲ್ಸ್ ಮಾಡುವಾಗ ದುರಂತ; 300 ಅಡಿ ಫಾಲ್ಸ್‌ಗೆ ಬಿದ್ದು ಯುವತಿ ಸಾವು!