ಬಂದೇ ಬಿಡ್ತು ದಸರಾ; ಅರಮನೆ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ..
ಮೈಸೂರು; ದಸರಾ ಇನ್ನೇನು ಬಂದೇ ಬಿಟ್ಟಿದೆ. ಹೀಗಾಗಿ ಅಕ್ಟೋಬರ್ 9ರಿಂದ ಮೈಸೂರು ಅರಮನೆಯಲ್ಲಿ ಹಲವು ಕಾಯಕ್ರಮಗಳು ನಡೆಯಲಿವೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಿದೆ. ಮೊದಲ ದಿನ ಸಿಂಹಾಸನ ಜೋಡಣೆ ಹಾಗೂ ಹಲವು ಪೂಜಾ ಕೈಂಕರ್ಯಗಳು ನಡೆಯಲಿವೆ. ಮೈಸೂರು ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಇಲ್ಲಿದೆ.
ಅರಮನೆ ಕಾರ್ಯಕ್ರಮಗಳು;
================
ಅಕ್ಟೋಬರ್ 9; ಬೆಳಗ್ಗೆ 7 ಗಂಟೆಗೆ ನವಗ್ರಹ ಹೋಮ.
ಬಳಿಕ 10.05 ರಿಂದ 10.35ರ ರತ್ನ ಖಚಿತ ಸಿಂಹಾಸನ ಜೋಡಣೆ ಆರಂಭ
ಗೋ ಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ
ಅಕ್ಟೋಬರ್ 15; ಬೆಳಗ್ಗೆ 6ರಿಂದ 6.25ಕ್ಕೆ ಸಿಂಹಾಸನ ಜೋಡಣೆ
ಬೆಳಗ್ಗೆ 7.05ರಿಂದ 7.45ಕ್ಕೆ ವಾಣಿವಿಲಾಸ ಅರಮನೆಯಲ್ಲಿ ಯದುವೀರ್ ಹಾಗೂ ಪತ್ನಿ ತ್ರಿಷಿಕಾ ಕುಮಾರಿ ಅವರಿಗೆ ಕಂಕಣಧಾರಣೆ
ಬೆ.9.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಗೋಶಾಲೆಗೆ ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಆನೆ ಪಟ್ಟದ ಹಸು ಆಗಮನ
ಬೆ.10.15ಕ್ಕೆ ಕಳಸ ಪೂಜೆ, ಸಿಂಹಾಸನ ಪೂಜೆ
ಬೆ.11.30ರಿಂದ 11.50ಕ್ಕೆ ಖಾಸಗಿ ದರ್ಬಾರ್
ಮಧ್ಯಾಹ್ನ 1.45 ರಿಂದ 02.05ಕ್ಕೆ ತಾಯಿ ಚಾಮುಂಡೇಶ್ವರಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುತ್ತೆ
ಅಕ್ಟೋಬರ್ 20; ಶುಕ್ರವಾರ ಬೆ.10.05 ರಿಂದ 10.25ಕ್ಕೆ ಸರಸ್ವತಿ ಪೂಜೆ
ಅಕ್ಟೋಬರ್ 21; ಶನಿವಾರ ಕಾಳರಾತ್ರಿ ಪೂಜೆ
ಅಕ್ಟೋಬರ್ 22; ಭಾನುವಾರ ದುರ್ಗಾಷ್ಠಮಿ
ಅಕ್ಟೋಬರ್ 23; ಸೋಮವಾರ ದುರ್ಗಾಷ್ಠಮಿ
ಬೆ 5.30ಕ್ಕೆ ಚಂಡಿಹೋಮ
ಬೆ 5.30ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ
ಬೆ 6.05 ರಿಂದ 06.15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ
ಬೆ 07.15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್
ಬೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ.
ಅಕ್ಟೋಬರ್ 23; ಬೆ. 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನ
ಮಧ್ಯಾಹ್ನ 12.20 -12.45ರವರೆಗೆ ಆಯುಧಪೂಜೆ
ಅರಮನೆ ಕಲ್ಯಾಣ ಮಂಟಪದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ
ಸಂಜೆ ಖಾಸಗಿ ದರ್ಬಾರ್ ದರ್ಬಾರ್ ನಂತರ ಸಿಂಹ ವಿಸರ್ಜನೆ
ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ
ಮಹಾಸನ್ನಿಧಾನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಂದ ಅಮಲದೇವಿ ದರ್ಶನ
ಅಕ್ಟೋಬರ್ 24; ಬುಧವಾರ ವಿಜಯದಶಮಿ ಆಚರಣೆ
ಬೆಳಗ್ಗೆ 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ
ಕಲ್ಯಾಣಮಂಟಪದಲ್ಲಿ ಖಾಸ ಆಯುಧಗಳಿಗೆ ಪೂಜೆ
ಬೆ 11 ರಿಂದ 11.40 ವಿಜಯದಶಮಿ ಮೆರವಣಿಗೆ
ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ
ಭುವನೇಶ್ವರಿ ದೇಗುಲದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಂದ ಪೂಜೆ
ನವೆಂಬರ್ 8; ಬುಧವಾರ ಸಿಂಹಾಸನ ಭದ್ರತಾ ಕೊಠಡಿಗೆ ರವಾನೆ