Lifestyle

ಬೆಲ್ಲದ ಕಡಲೆ ಬೀಜದ ಉಂಡೆ(ಚಿಕ್ಕಿ), ಆರೋಗ್ಯಕ್ಕೆ ಒಳ್ಳೆಯದಾ..?

ಕಡಲೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಡಲೆ ಬೀಜ ಮತ್ತು ಬೆಲ್ಲದ ಉಂಡೆ ಕಾಂಬಿನೇಷನ್‌ ಬಾಯಿಗೆ ರುಚಿ ಜೊತೆಗೆ ಆರೋಗ್ಯಕ್ಕೂ ಸಹ ಒಳ್ಳೆಯದು. ಪ್ರಪಂಚದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಾಗಿ ಈ ಖಾದ್ಯವನ್ನು ಕರೆಯುತ್ತಾರೆ. ಕಡಲೆ ಉಂಡೆ, ಚಿಕ್ಕಿ, ತೆಲುಗಿನಲ್ಲಿ ಪಪ್ಪುಂಡೆ, ಪಲ್ಲಿ ಉಂಡಲು ಎಂದೂ ಕರೆಯುತ್ತಾರೆ.  ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ಈ  ಧಾನ್ಯಗಳು ಪ್ರಮುಖವಾಗಿವೆ.

ಇದು ಹಸಿವನ್ನು ನೀಗಿಸುವುದರ ಜೊತೆಗೆ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ರಕ್ತಹೀನತೆ ದೂರವಾಗುತ್ತದೆ. ಕಡಲೆಕಾಯಿಯಲ್ಲಿ ಫೋಲಿಕ್ ಆಮ್ಲ, ಪ್ರೋಟೀನ್, ಬೆಲ್ಲ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳಿವೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನೂ ಸುಧಾರಿಸುತ್ತದೆ. ಬೆಲ್ಲದ ಜೊತೆಗೆ ಕಡಲೆಬೀಜ ತಿನ್ನುವುದರಿಂದ ರಕ್ತಹೀನತೆಯನ್ನು ದೂರವಿಡಬಹುದು. ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಬೆಲ್ಲ ಮತ್ತು ಕಡಲೆಕಾಯಿಯನ್ನು ಒಟ್ಟಿಗೆ ತಿನ್ನುವುದರಿಂದ ಮಹಿಳೆಯರ ಋತುಚಕ್ರದ ಸಮಸ್ಯೆಗಳು ನಿವಾರಣೆಯಾಗುತ್ತವೆ.  ದೇಹದಲ್ಲಿನ ಜೀವಕೋಶಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಕಡಲೆಕಾಯಿಯಲ್ಲಿರುವ ಕೊಬ್ಬಿನಾಂಶ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.

ಕಡಲೆಯಲ್ಲಿರುವ ನಾರಿನಂಶವು ಅಸಿಡಿಟಿ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೆಲ್ಲ ಮತ್ತು ಕಡಲೆಕಾಯಿಯಲ್ಲಿರುವ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಧಾನ್ಯಗಳಲ್ಲಿ ಕಂಡುಬರುವ ಸೆಲೆನಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣವು ಸಂತಾನೋತ್ಪತ್ತಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಝೈಮರ್ಸ್‌ನಂತಹ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಕಡಲೆಯಲ್ಲಿರುವ ವಿಶೇಷ ಪೋಷಕಾಂಶಗಳು ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಿ ಒಳ್ಳೆಯ ಕೊಬ್ಬನ್ನು ಹೆಚ್ಚಿಸುತ್ತವೆ. ಕಡಲೆಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.  ಆರೋಗ್ಯಕ್ಕೆ ಒಳ್ಳೆಯದು ಅಂತ ಹೆಚ್ಚಾಗಿ ತಿನ್ನಬಾರದು.  ಹೆಚ್ಚು ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ, ಮಲಬದ್ಧತೆ ಸಮಸ್ಯೆಗಳನ್ನು ಎದುರಿಸಬಹುದು.

Share Post