ಯುದ್ಧ ಬೇಡವೆಂದು ಲೈವ್‌ನಲ್ಲಿ ರಾಜೀನಾಮೆ ನೀಡಿದ ಮಾಧ್ಯಮವೊಂದರ ಪತ್ರಕರ್ತರು
ರಷ್ಯಾ: ರಷ್ಯಾ ಮಾಧ್ಯಮವೊಂದರ ಸಿಬ್ಬಂದಿ ಒಟ್ಟಿಗೆ ರಾಜೀನಾಮೆ ನೀಡಿದ್ದಾರೆ. ವಾಹಿನಿಯ ಕಾರ್ಯಕ್ರಮದಲ್ಲಿ ʻನೋ ಟು ವಾರ್ʼ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ನಂತರ ಎಲ್ಲರೂ ಒಟ್ಟಿಗೆ ರಾಜೀನಾಮೆ ನೀಡಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧ-ಸಂಬಂಧಿತ ಕಾರ್ಯಾಚರಣೆಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ರಷ್ಯಾದ ಅಧಿಕಾರಿಗಳು ಟಿವಿ ಚಾನೆಲ್ ಅನ್ನು ಅಮಾನತುಗೊಳಿಸಿದ್ದಾರೆ.
“ನೋ ಟು ವಾರ್” ಕಾರ್ಯಕ್ರಮದ ನಂತರ ಉದ್ಯೋಗಿಗಳು ರಾಜೀನಾಮೆ ನೀಡಿ ಸ್ಟುಡಿಯೋ ತೊರೆದಿದ್ದಾರೆಂದು ಎ ಚಾನೆಲ್ ಸಂಸ್ಥಾಪಕರಲ್ಲಿ ಒಬ್ಬರಾದ ನಟಾಲಿಯಾ ಸಿಂಡೇವಾ ಹೇಳಿದ್ದಾರೆ. ನಂತರ ಯಾವುದೇ ಸೂಚನೆಯಿಲ್ಲದೆ ನಮ್ಮ ಚಾನೆಲ್ ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ.
ಈ ವಿಚಾರ ಬಗೆಗಿನ ಸಂಪೂರ್ಣ ವೀಡಿಯೊವನ್ನು ಬರಹಗಾರ ಡೇನಿಯಲ್ ಅಬ್ರಹಾಂ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.
ಇಡೀ ಸಿಬ್ಬಂದಿ ರಾಜೀನಾಮೆ ನೀಡಿ ಹೊರನಡೆದ ನಂತರ .. ಸ್ವಾನ್ ಲೇಕ್ ಬ್ಯಾಲೆಟ್ ವಿಡಿಯೋ ಟೆಲಿಕಾಸ್ಟ್ ಮಾಡಲಾಯಿತು. ಸೋವಿಯತ್ ಒಕ್ಕೂಟದ ಪತನದ ಸಮಯದಲ್ಲಿ ಪ್ರಸಾರವಾದ ವೀಡಿಯೊಗಳನ್ನು ಮತ್ತೊಮ್ಮೆ ಪ್ರಸಾರ ಮಾಡಲಾಯಿತು. ಎಲ್ಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಖೋವ್ ಮಾಸ್ಕೋ ರೇಡಿಯೋ ಸ್ಟೇಷನ್ ಕೂಡ ಉಕ್ರೇನ್ ಮೇಲೆ ಯುದ್ಧವನ್ನು ಪ್ರಸಾರ ಮಾಡಿದ್ದಕ್ಕಾಗಿ ಮುಚ್ಚಲಾಯಿತು. ಹಠ ಬಿಡದ ಮಾಲೀಕರು YouTube ನಲ್ಲಿ ಪ್ರಸಾರವನ್ನು ಮುಂದುವರಿಸಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಪ್ರಸಾರ ಮಾಡದಂತೆ ರಷ್ಯಾ ಮಾಧ್ಯಮಗಳನ್ನು ನಿಷೇಧಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.