HistoryLifestyle

IAS, IPS Factory; 75 ಮನೆಗೆ 51 IAS, IPSಗಳು; ಈ ಗ್ರಾಮ IAS ಫ್ಯಾಕ್ಟರಿ!

ಉತ್ತರ ಪ್ರದೇಶ; ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್‌, ಐಪಿಎಸ್‌ ಆಗಬೇಕು ಅಂತ ಕನಸು ಕಾಣೋರು ತುಂಬಾನೇ ಇದ್ದಾರೆ.. ಆದ್ರೆ ಅದು ಅಷ್ಟು ಸುಲಭದ ಕೆಲಸ ಅಂತೂ ಅಲ್ಲವೇ ಅಲ್ಲ.. ಅದಕ್ಕೊಂದು ತಪ್ಪಸ್ಸು ಬೇಕು.. ಜೊತೆಗೆ ಅದೃಷ್ಟನೂ ಇರಬೇಕು… ವರ್ಷಾನುಗಟ್ಟಲೆ ಓದಿದರೂ, ಪರೀಕ್ಷೆ ಪಾಸು ಮಾಡಲಾರದೆ ನಿರಾಸೆ ಹೊಂದಿದವರೇ ಹೆಚ್ಚು.. ಆದ್ರೆ ಇಲ್ಲೊಂದು ಗ್ರಾಮ ಇದೆ… ಈ ಗ್ರಾಮ ಒಂದು ರೀತಿ ಐಪಿಎಸ್‌, ಐಎಎಸ್‌ ಅಧಿಕಾರಿಗಳನ್ನು ತಯಾರಿಸುವ ಪ್ಯಾಕ್ಟರಿ.. ಯಾಕಂದ್ರೆ ಈ ಗ್ರಾಮದಲ್ಲಿರೋದು ಬರೀ 75 ಮನೆ.. ಆದ್ರೆ ಈ ಗ್ರಾಮದಿಂದ ಸುಮಾರು 51 ಮಂದಿ ಐಎಎಸ್‌, ಐಪಿಎಸ್‌ಗಳಾಗಿದ್ದಾರೆ…

ಇದನ್ನೂ ಓದಿ; Train; ಈ ಊರಿನ ಜನ ದಿನಾ ಟಿಕೆಟ್‌ ಖರೀದಿಸ್ತಾರೆ, ಆದ್ರೆ ಟ್ರೈನ್‌ ಹತ್ತೋದೇ ಇಲ್ಲ!

ಮಾಧೋಪಟ್ಟಿ ಎಂಬ IAS, IPS ಫ್ಯಾಕ್ಟರಿ!;

ಮಾಧೋಪಟ್ಟಿ ಎಂಬ IAS, IPS ಫ್ಯಾಕ್ಟರಿ!; ಈ ಗ್ರಾಮದ ಹೆಸರು ಮಾಧೋಪಟ್ಟಿ… ಉತ್ತರ ಪ್ರದೇಶದ ಜೋನ್‌ಪುರ್‌ ಜಿಲ್ಲೆಯಲ್ಲಿದೆ… ಇದೊಂದು ಪುಟ್ಟ ಗ್ರಾಮ… ಈ ಗ್ರಾಮದಲ್ಲಿ 75 ಮನೆಗಳಿಗೆ ಅಷ್ಟೇ… ಆದ್ರೆ, ಮನೆಗೊಬ್ಬರಾದರೂ ಅಧಿಕಾರಿ ಇದ್ದಾರೆ… ಅದ್ರಲ್ಲೂ ಈ ಊರಿನಿಂದಲೇ ಬರೋಬ್ಬರಿ 51 ಮಂದಿ ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಿದ್ದಾರೆ… ಹೀಗಾಗಿಯೇ ಈ ಗ್ರಾಮ ಯಾವಾಗಲೂ ಚರ್ಚೆಯಲ್ಲಿರುತ್ತದೆ..

ಈ ಹಳ್ಳಿ ನೀರು, ಗಾಳಿ ಮ್ಯಾಜಿಕ್‌ ಮಾಡುತ್ತಾ..?;

ಈ ಹಳ್ಳಿ ನೀರು, ಗಾಳಿ ಮ್ಯಾಜಿಕ್‌ ಮಾಡುತ್ತಾ..?; ಉತ್ತರ ಪ್ರದೇಶ ರಾಜಧಾನಿ ಲಖನೌನಿಂದ ಸುಮಾರು 300 ಕಿಲೋ ಮೀಟರ್‌ ದೂರದಲ್ಲಿ ಈ ಮಾಧೊಪಟ್ಟಿ ಗ್ರಾಮ ಇದೆ… ದೇಶದಲ್ಲೇ ಅತಿಹೆಚ್ಚು ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಿರುವ ಗ್ರಾಮವಿದು… ಇಲ್ಲಿ ಹುಟ್ಟಿದವರು ಬಹುತೇಕ ಎಲ್ಲಾ ಇಲಾಖೆಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ… ಈ ಗ್ರಾಮದ ಯುವ ಸಮುದಾಯ ಚಿಕ್ಕಂದಿನಿಂದಲೇ ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತೆ.. ಒಂದೆರಡು ಅಟೆಂಪ್ಟ್‌ಗಳಲ್ಲೇ ಬಹುತೇಕರು ಸಕ್ಸಸ್‌ ಆಗುತ್ತಾರೆ… ಪರಿಶ್ರಮ ಅಂತೂ ಇದ್ದೇ ಇದೆ… ಆದ್ರೂ ಒಂದೇ ಗ್ರಾಮದಿಂದ ಇಷ್ಟೊಂದು ಅಧಿಕಾರಿಗಳು ಆಯ್ಕೆ ಆಗೋದು ಅಂದ್ರೆ ಸುಮ್ನೆ ಅಂತೂ ಅಲ್ಲ.. ಹೀಗಾಗಿಯೇ ಜನ ಮಾಧೋಪಟ್ಟಿ ಗ್ರಾಮದ ನೀರು ಹಾಗೂ ಗಾಳಿ ಏನೋ ಮ್ಯಾಜಿಕ್‌ ಮಾಡುತ್ತೆ ಅಂತ ತಮಾಷೆ ಮಾಡುತ್ತಾರೆ..

ಇದನ್ನೂ ಓದಿ; NASA; ಭೂಮಿಯಂತಹ ಮತ್ತೊಂದು ಗ್ರಹ ಪತ್ತೆ ಮಾಡಿದ ನಾಸಾ; ಸೂಪರ್ ಅರ್ಥ್ ಎಷ್ಟು ದೂರ?

ಹಲವಾರು ಇಲಾಖೆಗಳಲ್ಲಿ ದೊಡ್ಡ ದೊಡ್ಡ ಹುದ್ದೆ;

ಹಲವಾರು ಇಲಾಖೆಗಳಲ್ಲಿ ದೊಡ್ಡ ದೊಡ್ಡ ಹುದ್ದೆ; ಈ ಗ್ರಾಮ ಒಂದು ರೀತಿ ಐಎಎಸ್‌ ಫ್ಯಾಕ್ಟರಿ.. ಐಪಿಎಸ್‌ ಅಧಿಕಾರಿಗಳೂ ಇದ್ದಾರಾದರೂ, ಐಎಎಸ್‌ಗಳ ಸಂಖ್ಯೆಯೇ ಹೆಚ್ಚು… ಅದ್ರಲ್ಲೂ ಮನೆಯೊಂದರ ನಾಲ್ವರು ಸಹೋದರರೂ ಐಎಎಸ್‌ ಅಧಿಕಾರಿಗಳಾಗಿದ್ದಾರೆ.. ಅವರ ಹೆಸರು ವಿನಯ್‌ಕುಮಾರ್‌ ಸಿಂಗ್‌, ಅಜಯ್‌ ಕುಮಾರ್‌ ಸಿಂಗ್‌, ಶಶಿಕಾಂತ್‌ ಸಿಂಗ್‌ ಹಾಗೂ ಛತ್ರಪಾಲ್‌ ಸಿಂಗ್‌. ಬಾಹ್ಯಾಕಾಶ ಇಲಾಖೆ, ಪರಮಾಣು ಸಂಶೋಧನೆ, ಕಾನೂನು ಸೇವೆಗಳು, ಬ್ಯಾಂಕಿಂಗ್‌ ಕ್ಷೇತ್ರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಈ ಗ್ರಾಮದ ಅಧಿಕಾರಿಗಳಿದ್ದಾರೆ. ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.. ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

Share Post