Train; ಈ ಊರಿನ ಜನ ದಿನಾ ಟಿಕೆಟ್ ಖರೀದಿಸ್ತಾರೆ, ಆದ್ರೆ ಟ್ರೈನ್ ಹತ್ತೋದೇ ಇಲ್ಲ!
ವಾರಂಗಲ್; ರೈಲು ನಿತ್ಯ ತುಂಬಾ ಜನ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಾರೆ. ಟಿಕೆಟ್ ಕಲೆಕ್ಟರ್ ಬಂದಾಗ ತಪ್ಪಿಸಿಕೊಂಡು ತಿರುಗಾಡುತ್ತಿರುತ್ತಾರೆ.. ಆದ್ರೆ ಇಲ್ಲೊಂದು ಗ್ರಾಮ ಇದೆ… ಈ ಗ್ರಾಮದ ಜನ ನಿತ್ಯವೂ ತಪ್ಪದೇ ರೈಲು ಟಿಕೆಟ್ ಖರೀದಿ ಮಾಡುತ್ತಾರೆ.. ಆದ್ರೆ ರೈಲು ಮಾತ್ರ ಹತ್ತೋದಿಲ್ಲ… ಸುಮ್ಮನೆ ಯಾಕೆ ಟಿಕೆಟ್ ಖರೀದಿ ಮಾಡಿ ದುಡ್ಡು ವೇಸ್ಟ್ ಮಾಡ್ತಾರೆ, ಇವರೇಗು ಹುಚ್ಚಾ ಅಂತ ನೀವು ಕೇಳಬಹುದು.. ಆದ್ರೆ ಇದರ ಹಿಂದೆ ಒಂದು ಕತೆಯೇ ಇದೆ..
ಇದನ್ನೂ ಓದಿ; NASA; ಭೂಮಿಯಂತಹ ಮತ್ತೊಂದು ಗ್ರಹ ಪತ್ತೆ ಮಾಡಿದ ನಾಸಾ; ಸೂಪರ್ ಅರ್ಥ್ ಎಷ್ಟು ದೂರ?
ಯಾವುದು ಈ ಊರು..? ಟಿಕೆಟ್ ಖರೀದಿ ಯಾಕೆ..?;
ಯಾವುದು ಈ ಊರು..? ಟಿಕೆಟ್ ಖರೀದಿ ಯಾಕೆ..?; ಆಂಧ್ರಪ್ರದೇಶದಲ್ಲಿ ಇಂತದ್ದೊಂದು ಗ್ರಾಮ ಇದೆ… ವಾರಂಗಲ್ ಜಿಲ್ಲೆ ನರಸಂಪೇಟೆ ಬಳಿ ನೆಕ್ಕೊಂಡ ಎಂಬ ಗ್ರಾಮ ಇದೆ.. ಈ ಗ್ರಾಮದಲ್ಲಿ ಒಂದು ರೈಲು ನಿಲ್ದಾಣವಿದೆ… ಇದರಿಂದಾಗಿ ಇಂಡೀ ಮಂಡಲ್ ಜನಕ್ಕೆ ಅನುಕೂಲ ಇದೆ… ಆದ್ರೆ, ಈ ನೆಕ್ಕೊಂಡ ಗ್ರಾಮದ ಒಂದಷ್ಟು ಜನ ಹಣ ಕೊಟ್ಟು ಟಿಕೆಟ್ ಖರೀದಿ ಮಾಡುತ್ತಾರೆ. ಆದ್ರೆ ರೈಲು ಹತ್ತೋದಿಲ್ಲ.. ನಿತ್ಯ ಹೀಗೆ ಅವರು ಹಣ ಪೋಲು ಮಾಡುತ್ತಿದ್ದರೂ, ಅವರಿಗೆ ಯಾವುದೇ ಬೇಜಾರಿಲ್ಲ…
ಇದಕ್ಕೂ ಕಾರಣವೂ ಇದೆ… ಈ ರೈಲು ನಿಲ್ದಾಣದಲ್ಲಿ ದಿನವೂ ರೈಲು ನಿಲ್ಲಬೇಕಾದರೆ ಇಂತಿಷ್ಟು ಟಿಕೆಟ್ ಸೇಲ್ ಆಗಬೇಕು.. ಇಲ್ಲದಿದ್ದರೆ ರೈಲು ನಿಲುಗಡೆ ರದ್ದಾಗಿಬಿಡುತ್ತದೆ… ಆದ್ರೆ ಅಷ್ಟೊಂದು ಜನ ಇಲ್ಲಿಂದ ದಿನವೂ ಪ್ರಯಾಣ ಮಾಡೋದಿಲ್ಲ.. ಪ್ರಯಾಣಿಕರು ಕಡಿಮೆ ಇದ್ದಾರೆ ಎಂದು ರೈಲು ನಿಲುಗಡೆ ಕ್ಯಾನ್ಸಲ್ ಆಗುತ್ತದೆ.. ಇದನ್ನು ಅರಿತ ಗ್ರಾಮಸ್ಥರು ರೈಲು ನಿಲುಗಡೆಗೆ ಎಷ್ಟು ಟಿಕೆಟ್‌ಗಳು ಬೇಕೋ ಅಷ್ಟೆನ್ನು ದಿನವೂ ಖರೀದಿ ಮಾಡುತ್ತಾರೆ.. ಈ ಮೂಲಕ ರೈಲು ಪ್ರತಿದಿನ ತಮ್ಮ ಗ್ರಾಮದಲ್ಲಿ ನಿಲ್ಲುವಂತೆ ಕಾಪಾಡಿಕೊಂಡು ಬಂದಿದ್ದಾರೆ.
ಇದನ್ನೂ ಓದಿ; BDA; ಮೊದಲ ಬಾರಿಗೆ BDAನಿಂದ ಫ್ಲ್ಯಾಟ್ ಮೇಳ; Full Details
ನರಸಂಪೇಟ ಕ್ಷೇತ್ರ ಏಕೈಕ ರೈಲು ನಿಲ್ದಾಣವಿದು;
ನರಸಂಪೇಟ ಕ್ಷೇತ್ರ ಏಕೈಕ ರೈಲು ನಿಲ್ದಾಣವಿದು; ನರಸಂಪೇಟ ಕ್ಷೇತ್ರ ವ್ಯಾಪ್ತಿಯಲ್ಲಿ ಇದೊಂದೇ ರೈಲು ನಿಲ್ದಾಣ ಇರೋದು.. ಸುತ್ತಮುತ್ತಲ ಹತ್ತಾರು ಗ್ರಾಮಗಳು ಜನರು ದೂರ ಪ್ರದೇಶಗಳಿಗೆ ಹೋಗಲು ಈ ರೈಲು ನಿಲ್ದಾಣವನ್ನು ನೆಚ್ಚಿಕೊಂಡಿದ್ದಾರೆ.. ತಿರುಪತಿ, ಹೈದರಾಬಾದ್, ಶಿರಡಿ, ದೆಹಲಿ ಮುಂತಾದ ಸ್ಥಳಗಳಿಗೆ ಹೋಗುವ ರೈಲುಗಳು ಈ ನಿಲ್ದಾಣದ ಮೂಲಕವೇ ಪ್ರಯಾಣಿಸುತ್ತವೆ.. ಆದ್ರೆ ಇಲ್ಲಿ ಯವ್ಯಾವ ರೈಲುಗಳೂ ನಿಲ್ಲುತ್ತಿರಲಿಲ್ಲ.. ಇದರ ಜೊತೆಗೆ ಆದಾಯ ಕಡಿಮೆಯಾಗುತ್ತಿದೆ ಎಂದು ನೆಮವೊಡ್ಡಿ ರೈಲ್ವೆ ಅಧಿಕಾರಿಗಳು ಪದ್ಮಾವತಿ ಎಕ್ಸ್‌ಪ್ರೆಸ್ ನಿಲುಗಡೆ ನಿಲ್ಲಿಸಿಬಿಟ್ಟಿದ್ದರು.
ಇದನ್ನೂ ಓದಿ; Idli guru; ಪ್ರಾಂಚೈಸಿ ಹೆಸರಿನಲ್ಲಿ ವಂಚನೆ; ಇಡ್ಲಿ ಗುರು ಮಾಲೀಕ ಅರೆಸ್ಟ್!
ಆದಾಯ ಬಂದರೆ ಮಾತ್ರ ರೈಲು ನಿಲುಗಡೆ;
ಆದಾಯ ಬಂದರೆ ಮಾತ್ರ ರೈಲು ನಿಲುಗಡೆ; ಸಿಕಂದರಾಬಾದ್ ಟು ಗುಂಟೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲುಗಳು ಕೂಡಾ ನಿಲ್ಲಿಸಲಾಗಿತ್ತು.. ಈಗ ಇಲ್ಲಿನ ಪ್ರಯಾಣಿಕರ ವಿನಂತಿಯ ಮೇರೆಗೆ ಮತ್ತೆ ನಿಲುಗಡೆ ತಾತ್ಕಾಲಿಕವಾಗಿ ಅನುಮತಿ ನೀಡಲಾಗಿದೆ.. ಮೂರು ತಿಂಗಳವರೆಗೆ ನೋಡುತ್ತೇವೆ.. ಆದಾಯ ಬರದೇ ಹೋದರೆ ನಿಲುಗಡೆ ನಿಲ್ಲಿಸುತ್ತೇವೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರಂತೆ. ಹೀಗಾಗಿ ಗ್ರಾಮದ ಜನರು ರೈಲು ನಿಲುಗಡೆ ಕ್ಯಾನ್ಸಲ್ ಆಗದಂತೆ ನೋಡಿಕೊಳ್ಳಲು ಈ ಪ್ಲ್ಯಾನ್ ಮಾಡಿದ್ದಾರೆ. ಜನರಿಂದ ಹಣ ಸಂಗ್ರಹಿಸಿ, ದಿನವೂ ಹಲವು ಟಿಕೆಟ್‌ಗಳನ್ನು ಖರೀದಿ ಮಾಡಲಾಗುತ್ತಿದೆ.
ನೆಕ್ಕೊಂಡ ಗ್ರಾಮದಿಂದ ಹತ್ತುವವರಿಗೆ ಉಚಿತ ಟಿಕೆಟ್;
ನೆಕ್ಕೊಂಡ ಗ್ರಾಮದಿಂದ ಹತ್ತುವವರಿಗೆ ಉಚಿತ ಟಿಕೆಟ್; ಗ್ರಾಮದ ಜನರು ನೆಕ್ಕೊಂಡ ಟೌನ್ ರೈಲ್ವೆ ಟಿಕೆಟ್ಸ್ ಫೋರಂ ಎಂಬ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡಿದ್ದಾರೆ.. ಇವರು ದೇಣೀಗೆ ರೂಪದಲ್ಲಿ ಇದುವರೆಗೆ 25 ಸಾವಿರ ರೂಪಾಯಿ ಸಂಗ್ರಹ ಮಾಡಿಕೊಂಡಿದ್ದಾರೆ.. ಈ ಹಣದಿಂದ ನಿತ್ಯವೂ ಒಂದು ನಿಲ್ದಾಣದಲ್ಲಿ ಮಿನಿಮಮ್ ಎಷ್ಟು ಟಿಕೆಟ್ ಸೇಲ್ ಆಗಬೇಕೋ ಅಷ್ಟು ಟಿಕೆಟ್‌ಗಳನ್ನು ಖರೀದಿ ಮಾಡುತ್ತಾರೆ. ಖಮ್ಮಂ, ಸಿಕಂದ್ರಾಬಾದ್ ಸೇರಿ ಹಲವು ಸ್ಥಳಗಳಿಗೆ ಟಿಕೆಟ್ ಖರೀದಿ ಮಾಡಲಾಗುತ್ತದೆ. ಈ ವೇಳೆ ಯಾರಾದರೂ ಪ್ರಯಾಣಿಕರು ಬಂದರೆ ಅವರಿಗೆ ಈ ಟಿಕೆಟ್‌ಗಳನ್ನು ಉಚಿತವಾಗಿ ಗ್ರಾಮದ ಜನ ನೀಡುತ್ತಿದ್ದಾರೆ.
ಇದನ್ನೂ ಓದಿ; Jayapradha; ನಟಿ, ರಾಜಕಾರಣಿ ಜಯಪ್ರದಾ ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ; ಯಾಕೆ ಗೊತ್ತಾ..?
400 ಮಂದಿ ಗ್ರೂಪ್ ಮಾಡಿಕೊಂಡು ಟಿಕೆಟ್ ಖರೀದಿ;
400 ಮಂದಿ ಗ್ರೂಪ್ ಮಾಡಿಕೊಂಡು ಟಿಕೆಟ್ ಖರೀದಿ; ನೆಕ್ಕೊಂಡದ 400 ಮಂದಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದಾರೆ… ಇವರು ಸಾಧ್ಯವಾದಷ್ಟು ಆಗಾಗ ಹಣ ನೀಡುತ್ತಿರುತ್ತಾರೆ.. ಈ ಹಣದಿಂದ ನಿತ್ಯವೂ ಟಿಕೆಟ್ ಖರೀದಿ ನಡೆಯುತ್ತದೆ.. ಇದಕ್ಕಾಗಿ ಒಂದು ಲೆಕ್ಕದ ಪುಸ್ತಕ ಕೂಡಾ ಇಡಲಾಗಿದೆ… ಜನ ದೇಣಿಗೆಯಾಗಿ ಕೊಟ್ಟ ಹಣದ ವಿವರ ಹಾಗೂ ನಿತ್ಯ ಟಿಕೆಟ್ ಖರೀದಿಗೆ ಖರ್ಚಾಗುತ್ತಿರುವ ಹಣದ ವಿವರವನ್ನು ಅದರಲ್ಲಿ ಬರೆಯಲಾಗುತ್ತದೆ.