ಇಲ್ಲಿ First Nightಗೆ ಮೊದಲ ನವಜೋಡಿ ಈ ದೇವರ ದರ್ಶನ ಪಡೆಯಲೇಬೇಕು!
ಶ್ರೀಕಾಕುಳಂ; ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ದೇಗುಲವೊಂದಿದೆ. ಈ ದೇಗುಲಕ್ಕೆ ಅಣ್ಣ-ತಂಗಿ, ಅಕ್ಕ-ತಮ್ಮಂದಿರುವ ಒಟ್ಟಿ ಹೋಗೋದಿಲ್ಲ. ಹೊಸದಾಗಿ ಮದುವೆಯಾದ ಜೋಡಿ ಫಸ್ಟ್ ನೈಟ್‌ಗೂ ಮೊದಲು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ದೇವರ ದರ್ಶನ ಪಡೆದ ಮೇಲೆಯೇ ಇಲ್ಲಿ ನವಜೋಡಿಗೆ ಫಸ್ಟ್ ನೈಟ್ ಆಗೋದು…! ವಿಚಿತ್ರ ಆದರೂ ಇದು ಸತ್ಯ. ಜೊತೆಗೆ ಇದಕ್ಕೊಂದು ಕಾರಣ ಕೂಡಾ ಇದೆ.
ಇದು ರಾಧಾ ವೇಣುಗೋಪಾಲಸ್ವಾಮಿ ದೇವಾಲಯ.. ಇದು ಆಂಧ್ರ-ಒಡಿಶಾ ಗಡಿಯಲ್ಲಿರುವ ಶ್ರೀಕಾಕುಳಂ ಜಿಲ್ಲೆಯ ಮೆಲಿಯಪುಟ್ಟಿ ಜಂಕ್ಷನ್‌ನಲ್ಲಿದೆ. ಈ ದೇಗುಲವನ್ನು ಆಂಧ್ರ ಖಜುರಾಹೋ ಅಂತಾನೂ ಕರೆಯುತ್ತಾರೆ. ಇದು ದೇವಾಲಯದ ನಿರ್ಮಾಣ ಮತ್ತು ಶಿಲ್ಪಕಲಾ ಸೌಂದರ್ಯ ಎಲ್ಲರನ್ನೂ ಸೆಳೆಯುತ್ತದೆ.
ಇದು ನವಜೋಡಿಗಳಿಗೆಂದೇ ಇರುವ ವಿಶೇಷ ದೇವಾಲಯ. ಮದುವೆಯಾದ ಮೇಲೆ ನವಜೋಡಿ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುತ್ತದೆ. ದೇಗುಲದ ಗೋಡೆ, ಕಂಬಗಳ ಮೇಲೆ ಕೆತ್ತನೆ ಮಾಡಿರುವ ಶಿಲ್ಪಕಲೆಯನ್ನು ನೋಡುತ್ತದೆ. ಅನಂತರವೇ ಅವರಿಗೆ ಫಸ್ಟ್ ಆಗೋದು. ಈ ಭಾಗದಲ್ಲಿ ಇದು ಒಂದು ಸಂಪ್ರದಾಯವಾಗಿ ಮುಂದುವರೆದಿದೆ.
200 ವರ್ಷಗಳಿಂದ ಶ್ರೀಕಾಕುಕುಳಂ ಸುತ್ತಮುತ್ತ ಈ ಪದ್ಧತಿ ನಡೆದುಕೊಂಡು ಬಂದಿದೆ.
ದೇವಾಲಯದ ಪ್ರದಕ್ಷಿಣೆ ನಂತರವೇ ಮೊದಲ ರಾತ್ರಿ!
ದೇಗುಲಕ್ಕೆ ಬರುವವರಿಗೆ ವೈದಿಕ ಶಾಸ್ತ್ರ ಹಾಗೂ 64 ಕಲೆಗಳ ಸಾರವನ್ನು ಶಿಲ್ಪಗಳ ರೂಪದಲ್ಲಿ ಕೆತ್ತಿಸಲಾಗಿದೆ. ಇವುಗಳಲ್ಲಿ ಪ್ರಣಯದ ಶಿಲ್ಪಗಳು ಕೂಡಾ ಸೇರಿವೆ.
ಹಿಂದಿನ ಕಾಲದಲ್ಲಿ ಸಮಾಜ ಮುಂದುವರೆದಿರಲಿಲ್ಲ. ನವಜೋಡಿಗೆ ಲೈಂಗಿಕತೆಯ ಬಗ್ಗೆ ಹೆಚ್ಚು ಅರಿವಿರಲಿಲ್ಲ. ಹಾಗಂತ ನಮ್ಮ ಸಮಾಜದಲ್ಲಿ ಇದನ್ನು ಸಾರ್ವಜನಿಕವಾಗಿ ಚರ್ಚೆಯನ್ನೂ ಮಾಡುತ್ತಿರಲಿಲ್ಲ. ಹೀಗಾಗಿ, ಆಗಿನ ಕಾಲದಲ್ಲಿ ನವಜೋಡಿಗಳಿಗೆ ತಿಳಿಯಲೆಂದೇ ಅವುಗಳನ್ನು ದೇವಾಲಯದ ಗೋಡೆಗಳ ಮೇಲೆ ಶಿಲ್ಪಗಳಾಗಿ ಕೆತ್ತಲಾಗಿದೆ. ದೇವಸ್ಥಾನಕ್ಕೆ ಬಂದವರು ಇವುಗಳ ಮೂಲಕ ಲೈಂಗಿಕತೆಯ ಜ್ಞಾನ ಪಡೆಯುತ್ತಾರೆ. ಆ ಶಿಲ್ಪಗಳು ಹೆಚ್ಚಾಗಿ ದೇವಸ್ಥಾನದಲ್ಲಿ ಕಾಣಸಿಗುತ್ತವೆ. ಹೀಗಾಗಿ, ನವಜೋಡಿಗಳಿಗೆ ಮೊದಲು ಈ ದೇಗುಲದ ಪ್ರದಕ್ಷಿಣೆ ಹಾಕಿಸಿ ಅನಂತರ ಮೊದಲ ರಾತ್ರಿಯ ವ್ಯವಸ್ಥೆ ಮಾಡಲಾಗುತ್ತದೆ.
ಮೆಳಿಯಪುತ್ತಿಗೆ ಸೇರಿ ಸುಮಾರು 50 ಗ್ರಾಮಗಳ ನವದಂಪತಿಗಳು ಮೊದಲು ಈ ದೇವಸ್ಥಾನಕ್ಕೆ ಬರುತ್ತಾರೆ. ದೇವಾಲಯದ ಸುತ್ತಲೂ ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಾರೆ. ಆ ಸಮಯದಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಶಿಲ್ಪಗಳನ್ನು ಸಹ ಅವರು ಗಮನಿಸುತ್ತಾರೆ. ಆ ನಂತರ ಜೋಡಿಯ ಫಸ್ಟ್ ನೈಟ್ ಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ದೇವಸ್ಥಾನಕ್ಕೆ ಸಂಬಂಧಪಟ್ಟವರೊಬ್ಬರು ತಿಳಿಸಿದ್ದಾರೆ.
ದೇವಸ್ಥಾನ ಕಟ್ಟಿದಾಗ ಆರಂಭವಾದ ಈ ಆಚರಣೆ ಇಂದಿಗೂ ಮುಂದುವರಿದಿದೆ. ವಿವಾಹಿತರು ಕೂಡ ಆಗಾಗ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಮಾಡುತ್ತಾರೆ.