CrimeNational

ಬಿಹಾರದಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ ಸಾವಿನ ಸಂಖ್ಯೆ 60ಕ್ಕೆ ಏರಿಕೆ

ಪಾಟ್ನಾ; ಸರಣ್‌ ಜಿಲ್ಲೆಯಲ್ಲಿ ನಡೆದ ಕಳ್ಳಬಟ್ಟಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಈ ವಿಚಾರ ಬಿಹಾರ ವಿಧಾನಸಭಾ ಚಳಗಾಲದ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ತಂದಿದ್ದರ ಬಗ್ಗೆಯೂ ಈಗ ಚರ್ಚೆ ಮುನ್ನೆಲೆಗೆ ಬಂದಿದೆ.

ಬಿಜೆಪಿ ಶಾಸಕರು ಫಲಕಗಳನ್ನು ಹಿಡಿದು ಸ್ಪೀಕರ್‌ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಸಿಪಿಎಂ (ಎಂಎಲ್‌) ಪಕ್ಷ ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಮದ್ಯ ಸೇವಿಸಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ ಪರಿಹಾರ ನೀಡುವುದಿಲ್ಲ ಅನ್ನೋ ನಿಯಮ ಮದ್ಯ ನಿಷೇಧ ಕಾನೂನಲ್ಲಿದೆ. ಕಾನೂನಿನ ಈ ಅಂಶದ ಕುರಿತು ಮರುಪರಿಶೀಲನೆ ಆಗ್ಬೇಕು ಅಂತ ಸಿಪಿಎಂಎಲ್‌ ಆಗ್ರಹ ಮಾಡಿದೆ.

ಎರಡು ದಿನದಲ್ಲಿ 126 ಕಳ್ಳಭಟ್ಟಿ ವ್ಯಾಪಾರಿಗಳ ಬಂಧನವಾಗಿದ್ದು, 4 ಸಾವಿರ ಲೀಟರ್‌ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Share Post