Lifestyle

ಚಳಿಗಾಲದಲ್ಲಿ ಭಾರೀ ಸ್ಪೆಷಲ್‌ ಈ ಕಾಶ್ಮೀರಿ ಹರಿಸಾ ಮಾಂಸದ ಖಾದ್ಯ

ಜಮ್ಮು-ಕಾಶ್ಮೀರ: ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ಸ್ವಲ್ಪ ಬೇಡಿಕೆ ಆಹಾರ ಅಂದ್ರೆ, ಬಜ್ಜಿ, ಬೋಂಡಾ, ಕಾಫಿ, ಟೀ, ಬಿಸಿ ಬಿಸಿ ಉಪ್ಪಿಟ್ಟು ಇತ್ಯಾದಿ..ಹೀಗೆ ಅಂತ ಹೇಳೋಕಾಗಲ್ಲ.. ಒಬ್ಬೊಬ್ಬರು.. ಒಂದೊಂದು ತಿಂಡಿ ಇಷ್ಟ ಪಡ್ತಾರೆ. ಬೇರೆ ಬೇರೆ ಕಡೆ ಬೇರೆ ಬೇರೆ ಫುಡ್‌ ರೆಸಿಪಿ ಇರುತೆ.. ಆದ್ರೆ ಕಾಶ್ಮೀರದಲ್ಲಿ ಮಾತ್ರ ಚಳಿಗಾಲದಲ್ಲಿ ದಿ..ಮೋಸ್ಟ್‌ ಫೇವರಿಟ್‌ ಅಂಡ್‌ ಹಾಟ್‌ ಫುಡ್‌ ಅಂದ್ರೆ ಅದು ಹರಿಸಾ ಮಾಂಸ ಅಂತೆ…

ಜಮ್ಮ-ಕಾಶ್ಮೀರದಲ್ಲಿ ಚಳಿ ಅಂದ್ರೆ ನೆನಪಿಸಿಕೊಂಡ್ರೇನೆ ಭಯ ಆಗುತ್ತೆ..ಅಂತಹ ಚಳಿ ತಡೆಯೋಕೆ ಅದೇ ಸೈಲಿಯ ಅಡುಗೆ ಬೇಕಲ್ವಾ ಹಾಗಾಗಿ ಈ ಹರಿಸಾ ಮಾಂಸವನ್ನು ಅಲ್ಲಿನ ಜನ ಹೆಚ್ಚಾಗು ಮಾಡ್ತಾರಂತೆ…ಈ ಖಾದ್ಯವನ್ನು ಕಾಶ್ಮೀರಿ ಕೇಸರಿ, ಆರೊಮ್ಯಾಟಿಕ್ ಮಸಾಲೆಗಳು, ಅಕ್ಕಿ, ಮಾಂಸ ಮತ್ತು ಉಪ್ಪಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಹೆಚ್ಚಿನ ಕ್ಯಾಲೋರಿ ಮತ್ತು ಪ್ರೊಟೀನ್ ಅಂಶಗಳಲನ್ನು ಒಳಗೊಂಡಿರುತ್ತೆ. ಜೊತೆಗೆ ಸುಲಭವಾಗಿ ಸೇವಿಸಿದ ಆಹಾರ ಜೀರ್ಣವಾಗುತ್ತೆ ಅಂತ ಸ್ಥಳೀಯರು ಹೇಳ್ತಾರೆ. ದೊಡ್ಡ ಮಣ್ಣಿನ ಪಾತ್ರೆಯಲ್ಲಿ ಇದನ್ನು ತಯಾರುಮಾಡಲಾಗುತ್ತಂತೆ. ರಾತ್ರಿಯಿಡೀ ಕಟ್ಟಿಗೆ, ಕೆಂಡಗಳಿಂದ ಬಿಸಿಯಾಗಿರುವಂತೆ ನೋಡಕೊಳ್ಳಲಾಗುತ್ತೆ. ಬೆಳಗ್ಗಿನ ಚಳಿಗೆ ತಿಂದ್ರೆ ಆಹಾ….ಬಾಯಲ್ಲಿ ನೀರೂರುವುದರ ಜೊತೆಗೆ ಸ್ವರ್ಗ ಧರೆಗಿಳಿದಂತೆ ಇರುತ್ತದೆ ಅಂತಾರೆ ಗ್ರಾಹಕರು.

“ನಿಜವಾಗೂ ನೀವು ನಂಬಲೇಬೇಕು ಬೇರೆ ಎಲ್ಲಾ ಖಾದ್ಯಗಳು 2/3ಗಂಟೆಗಳಲ್ಲಿ ಮಾಡಿ ಮುಗಿಸಬಹುದು ಆದ್ರೆ ಒಂದು ರುಚಿಯಾದ, ಶುಚಿಯಾದ ಉತ್ತಮವಾದ ಹರಿಸಾ ತಯಾರಿಸಲು ಸುಮಾರು 17 ರಿಂದ 18 ಗಂಟೆ ಬೇಕಾಗುತ್ತದೆ. ಮೊದಲು ನೀವು ಅನ್ನ ತಯಾರಿಸಿ ಅದಕ್ಕೆ ಬೇಕಾಗಿರುವ ಎಲ್ಲಾ ಮಸಾಲೆಗಳನ್ನು ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಮಾಂಸವನ್ನು ಸೇರಿಸಲಾಗುತ್ತದೆ. ರಾತ್ರಿಯೆಲ್ಲೆ ಕೆಂಡದ ಬಿಸಿ ರಸಪಾಕವಅಗಿ ತಯಾರಾದ ಈ ಹರಿಸಾದಲ್ಲಿ ಹಾಕಿರುವ ಮಾಂಸದ ಮೂಳೆಗಳನ್ನು ಹೊರತೆಗೆಯಲಾಗುತ್ತದೆ.  ಬೆಳಿಗ್ಗೆ 4 ಗಂಟೆಗೆ ಎದ್ದು, ಮೂಳೆಗಳನ್ನು ಹೊರತೆಗೆಯುತ್ತೇವೆ. ಇದಕ್ಕೆಲ್ಲ ಸಾಕಷ್ಟು ಶ್ರಮ ಮತ್ತು ಸಮಯ ಬೇಕಾಗುತ್ತದೆ, ”ಎಂದು ಹರೀಸಾ ತಯಾರಕರು ಹೇಳುತ್ತಾರೆ. ಸುಮಾರು ಅಲ್ಲಿ ನೆಲೆಸಿರುವ ಎಲ್ಲಾ ಕುಟುಂಬಗಳೂ ಈ ಖಾದ್ಯವನ್ನು ಮಾಡುತ್ತಾರಂತೆ.

ಈ ಖಾದ್ಯವು ಕಾಶ್ಮೀರಿಗಳಿಗೆ ಮಾತ್ರವಲ್ಲದೆ ಚಳಿಗಾಲದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೂ ಪ್ರಿಯವಾಗಿದೆ. “ಜನರು ಈ ಖಾದ್ಯವನ್ನು ನಿಜವಾಗಿಯೂ ಇಷ್ಟಪಡ್ತಾರೆ, ವಿಶೇಷವಾಗಿ ಚಳಿಗಾಲದಲ್ಲಿ. ನಾವು ದೇಶಾದ್ಯಂತ ಗ್ರಾಹಕರನ್ನು ಹೊಂದಿದ್ದೇವೆ ಎಂದು ತಯಾರಕ ಅಹ್ಮದ್ ಹೇಳಿದ್ದಾರೆ.

ಇದು ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು..ಮೈ ಕೈ ನೋವು ಇರುವವರಿಗೆ ಹರಿಸಾ ತಿನ್ನುವುದರಿಂದ ನೋವು ನಿವಾರಣೆಯಾಗುತ್ತದೆ, ದೇಹದ ಉಷ್ಣತೆಯನ್ನು ಶಮನ ಮಾಡುತ್ತದೆ ಮತ್ತು ಇತರ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಕೆಲವರು ಈ ಖಾದ್ಯವನ್ನು ಹತ್ತಿರದ ಬಂಧುಗಳಿಗೆ ಮತ್ತು ಆತ್ಮೀಯರಿಗೆ ಉಡುಗೊರೆಯಾಗಿ ಕಳುಹಿಸುತ್ತಾರಂತೆ..ಅಮೆರಿಕ, ಯುರೋಪ್ ಸೇರಿದಂತೆ ವಿದೇಶಗಳಿಗೂ ರಫ್ತು ಮಾಡುತ್ತೇವೆ ಅಂತ ಹರೀಸಾ ಮಾಂಸ ಮಾರಾಟಗಾರ ಸಿಬ್ದಾರ್ ಅಹಮದ್ ಮಲ್ಲಾ ತಿಳಿಸಿದ್ದಾರೆ.

 

 

Share Post