Crime

ಗಟ್ಟಿಮೇಳ ನಟ ರಕ್ಷಿತ್‌ ಮತ್ತು ಸಂಗಡಿಗರಿಂದ ಗಲಾಟೆ – FIR ದಾಖಲು

ಬೆಂಗಳುರು : ಕಿರುತೆರೆಯ ಜನಪ್ರಿಯ ಸೀರಿಯಲ್‌ ಗಟ್ಟಿಮೇಳದ ನಟ ರಕ್ಷಿತ್‌ ಮತ್ತು ಸಂಗಡಿಗರು ಕುಡಿದು ರಂಪಾಟ ಮಾಡಿದ ಪ್ರಕರಣ ದಾಖಲಾಗಿದೆ. ಕುಡಿದ ಮತ್ತಿನಲ್ಲಿ ಪೊಲೀಸರ ಜತೆಯೂ ಮಾತಿನ ಚಕಮಕಿ ಮಾಡಿರುವ ರಕ್ಷಿತ್‌ ಅಂಡ್‌ ಗ್ಯಾಂಗ್‌ ಅವರ ಮೇಲೆ FIR ದಾಖಲಿಸಲಾಗಿದೆ.

ನಾಗರಭಾವಿಯಲ್ಲಿ ಶೂಟಿಂಗ್‌ ಮುಗಿಸಿ ಕೆಂಗೇರಿ ಬಳಿಯಿರುವ ಜಿಂಜರ್‌ ಲೇಕ್‌ವ್ಯೂ ಹೋಟೆಲ್‌ಗೆ ಬಂದಿದ್ದ ರಕ್ಷಿತ್‌ ಮತ್ತು ತಂಡದವರಿಂದ ಈ ಕೃತ್ಯ ನಡೆದಿದೆ. ನೈಟ್‌ ಕರ್ಫ್ಯೂ ನಡುವೆಯೂ ರಾತ್ರಿ ಮದ್ಯಪಾನ ಮಾಡಿ ರಕ್ಷಿತ್‌ ಗ್ಯಾಂಗ್‌ನವರು ಗಲಾಟೆ ಮಾಡುತ್ತಿದ್ದ ಕಾರಣ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ರಕ್ಷಿತ್‌ ಅವರನ್ನು ವಿಚಾರಿಸಿದಾಗ ಊಟ ಮಾಡುವುದಕ್ಕೆ ಬಂದಿದ್ದೆವು ಲೇಟ್ ಆಯಿತು ಎಂದು ಕಟುವಾಗಿ ವರ್ತಿಸಿದ್ದಾರೆ. ತಕ್ಷಣವೇ ಪೊಲೀಸರು ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ ಸೇರಿದಂತೆ 7 ಜನರಿಗೆ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.

ನೈಟ್‌ ಕರ್ಫ್ಯೂ ಜಾರಿಯಲ್ಲಿದ್ದರೂ ಪಾರ್ಟಿಗೆ ಅನುಮತಿ ನೀಡಿದ್ದಕ್ಕೆ ಹೋಟೆಲ್ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Share Post