CinemaLifestyle

ತಾಯಿಯಾಗುತ್ತಿದ್ದಾರಂತೆ ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ..

ಬೆಂಗಳೂರು; ವರ್ಷದ ಹಿಂದೆ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಹಾಗೂ ಪ್ರಸಾದ್‌ ಬಿದ್ದಪ್ಪ ಪುತ್ರಿ ಅವಿವಾ ಮದುವೆಯಾಗಿದ್ದರು.. ಇದೀಗ ಈ ಜೋಡಿ ಖುಷಿ ಸುದ್ದಿ ಕೊಟ್ಟಿದೆ.. ಅವಿವಾ ಈಗ ಗರ್ಭಿಣಿಯಾಗಿದ್ದು, ಅಂಬರೀಶ್‌ ಕುಟುಂಬ ಸಖತ್‌ ಖುಷಿಯಾಗಿದೆ..

ಇದನ್ನೂ ಓದಿ; ಯೂಟ್ಯೂಬ್‌ ನೋಡಿ ಬಾಂಬ್‌ ತಯಾರಿ ಯತ್ನ; ಸ್ಫೋಟಗೊಂಡ 5 ಮಕ್ಕಳಿಗೆ ಗಾಯ!

ಅವಿವಾ ಅವರು ಗರ್ಭಿಣಿಯಾಗಿದ್ದು, ಅಭಿಷೇಕ್‌-ಅವಿವಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ಅಜ್ಜಿಯಾಗುತ್ತಿರುವುದಕ್ಕೆ ಸುಮಲತಾ ಅಂಬರೀಶ್‌ ಸಂಭ್ರಮದಲ್ಲಿದ್ದಾರೆ.. ಇದೇ ವಾರದಲ್ಲಿ ಅವಿವಾಗೆ ಸೀಮಂತ ಮಾಡಲು ಪ್ಲಾನ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.. ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.. ಆದ್ರೆ ಅಂಬರೀಶ್‌ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ; ಸಿದ್ದರಾಮಯ್ಯ ನಿವಾಸಕ್ಕೆ ಬಂದ ಆ ನಾಯಕ!; ರಾಜ್ಯ ರಾಜಕಾರಣದಲ್ಲಿ ಕುತೂಹಲ!

ಸದ್ಯ ಅಂಬರೀಶ್‌ ವಿದೇಶಕ್ಕೆ ಹೊರಗಿದ್ದಾರೆ.. ಅವರು ಹೊಸ ಚಿತ್ರಕ್ಕಾಗಿ ಕಿಕ್‌ ಬಾಕ್ಸಿಂಗ್‌ ಕಲಿಯಲು ವಿದೇಶಕ್ಕೆ ಹೋಗಿದ್ದರು.. ನಾಳೆ ಅವರು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ..

 

Share Post