Districts

ಮೈಸೂರಿನ ಬಿಜೆಪಿಯಲ್ಲಿ ʻಗ್ಯಾಸ್‌ʼ ಟ್ರಬಲ್‌ ; ಸಂಸದ-ಇಬ್ಬರು ಶಾಸಕರ ಕಿತ್ತಾಟ..!

ಮೈಸೂರು: ಮೈಸೂರು ಬಿಜೆಪಿಯಲ್ಲಿ ಜಂಗೀಕುಸ್ತಿ ಶುರುವಾಗಿದೆ. ಮನೆಗಳಿಗೆ ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಹಾಗೂ ಶಾಕರ ನಡುವೆ ಕಿತ್ತಾಟ ಶುರುವಾಗಿದೆ. ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌, ಕೇಂದ್ರ ಸರ್ಕಾರದ ಯೋಜನೆ ಮೂಲಕ ನೇರವಾಗಿ ಮನೆಗಳಿಗೆ ಗ್ಯಾಸ್‌ ಪೈಪ್‌ ಲೈನ್‌ ಅಳವಡಿಸಲಾಗುತ್ತಿದೆ. ಆದ್ರೆ, ಇದ್ರಿಂದ ಕೆ.ಆರ್‌.ಕ್ಷೇತ್ರದಲ್ಲಿನ ರಸ್ತೆಗಳು ಹಾಳಾಗಲಿವೆ. ಹೀಗಾಗಿ ಪೈಪ್‌ಲೈನ್‌ ಹಾಕುವುದು ಬೇಡ ಎಂದು ಮೈಸೂರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಬೆನ್ನಲ್ಲೇ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಕೂಡಾ ಇದೇ ಮಾತನ್ನೇ ಹೇಳಿದ್ದಾರೆ. ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯಿಂದಾಗಿ ಈಗಾಗಲೇ ಮಾಡಿರುವ ರಸ್ತೆಗಳು ಹಾಳಾಗಲಿವೆ. ಈ ಕಾಮಗಾರಿಯಿಂದ 300 ಕೋಟಿ ರೂಪಾಯಿ ಡ್ಯಾಮೇಜ್‌ ಆಗಲಿದೆ. ಹೀಗಾಗಿ ರಸ್ತೆ ಹಾಳಾಗಲು ನಾವು ಬಿಡುವುದಿಲ್ಲ ಎಂದು ಶಾಸಕ ನಾಗೇಂದ್ರ ಹೇಳಿದ್ದಾರೆ.

ಇಬ್ಬರು ಬಿಜೆಪಿ ಶಾಸಕರ ವಿರೋಧಕ್ಕೆ ಸಂಸದ ಪ್ರತಾಪ ಸಿಂಹ ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್‍ನವರೇ ಈ ಯೋಜನೆಯನ್ನು ವಿರೋಧ ಮಾಡಿಲ್ಲ. ನಮ್ಮದೇ ಶಾಸಕರು ವಿರೋಧಿಸ್ತಾರೆ. ರಾಮದಾಸ್ ಮೋದಿಗಿಂತ ದೊಡ್ಡವರಾ..? ಮೋದಿಗಿಂತ ಬದುಧವಂತರಾ, ಜ್ಞಾನಿಗಳಾ..? ಎಂದು ಪ್ರಶ್ನೆ ಮಾಡಿದ್ದಾರೆ.

Share Post