ಇದು ಹೂವಿನ ತೋಟವಲ್ಲ..ನಿಜವಾದ ಜಡೆಯ ಡಿಸೈನ್..!
ವಿಯೆಟ್ನಾಂ: ಹೆಣ್ಣುಮಕ್ಳಿಗೆ ಎಷ್ಟೇ ಅಂದವಾಗಿದ್ರೂ ಕೂಡ ತಲೆಯಲ್ಲಿ ಕೂದಲಿಲ್ಲ ಅಂದ್ರೆ ಅಂದವಾಗಿದ್ದೂ ಪ್ರಯೋಜನವಿಲ್ಲ. ತಲೆ ಕೂದಲಲ್ಲಿ ವೆರೈಟಿ ವೆರೈಟಿ ಹೇರ್ ಸ್ಟೈಲ್ ಮಾಡುವುದು ಈಗಿನ ಟ್ರೆಂಡ್. ಒಬ್ಬೊಬ್ಬರದ್ದೂ ಒಂದೊಂದು ಹೇರ್ಸ್ಟೈಲ್ ಇರುತ್ತೆ. ಆದ್ರೆ ವಿಯೆಟ್ನಾಂನ ಈ ಯುವತಿ ಹೇರ್ಸ್ಟೈಲ್ ನೋಡಿದ್ರೆ ಇದೇನು ಹೂವಿನ ತೋಟವಾ ಅನಿಸುತ್ತೆ. ಆ ರೀತಿ ಕೂದಲಿಗೆ ಶೃಂಗಾರವನ್ನು ಮಾಡಿದ್ದಾನೆ ಗುಯೆನ್ ಫಟ್ ಎಂಬ ಬ್ಯೂಟೀಷಿಯನ್. ಈತನ ವಯಸ್ಸು ಕೇವಲ 28ವರ್ಷ ಅಷ್ಟೇ ಆದ್ರೆ ಕಲೆಗೆ ಮಾತ್ರ ಸರಿಸಾಟಿಯಿಲ್ಲ.
ಸಾವಿರಾರು ರೀತಿಯ ಹೇರ್ ಡಿಸೈನ್ ಮಾಡುವ ಕಲೆ ಈತನಲ್ಲಿದೆ. ಈತ ಹೇರ್ ಸ್ಟೈಲ್ ಮಾಡೋದಕ್ಕೆ ಬರೋಬ್ಬರಿ 10 ರಿಂದ 20 ಸಾವಿರ ರೂಪಾಯಿ ಪಡೆದುಕೊಳ್ತಾನಂತೆ. ಕೆಲವು ಡಿಸೈನ್ ಮಾಡಲು ಎರಡರಿಂದ ಮೂರು ದಿನ ತೆಗೆದುಕೊಂಡ್ರೆ, ಇನ್ನು ವಿಶೇಷ ಹೇರ್ಸ್ಟೈಲ್ ಮಾಡಲು ಎರಡರಿಂದ ಮೂರು ತಿಂಗಳು ಸಮಯ ಬೇಕಂತೆ. ಆದ್ರೀಗ ಎಲ್ಲಾ ವಿಗ್ ಮಯವಾಗಿದ್ದು ಕ್ಷಣಾರ್ಧದಲ್ಲಿ ಬೇಕಾಗಿರುವ ಹೇರ್ ಡಿಸೈನ್ ಮಾಡಲಾಗುತ್ತದೆ. ಕೂದಲು ಇಲ್ಲ ಅಂದ್ರು ಕೂಡ ವಿಗ್ ಮೂಲಕ ಹೆಣ್ಣು ಮಕ್ಕಳನ್ನು ಬಹಳ ಸುಂದರವಾಗಿ ಕಾಣುವಂತೆ ಮಾಡುವ ಕಲೆಯಿದೆ.