Lifestyle

ಬಾಳೆಹಣ್ಣಿನ ಕೇಸರಿಬಾತ್‌ ಮಾಡುವುದು ಹೇಗೆ?

ಮನೆಗೆ ಅತಿಥಿಗಳು ಬಂದರೆ ಥಟ್ಟನೆ ಏನಾದರು ಸಿಹಿ ಮಾಡಿ ಬಡಿಸಬೇಕೆಂದರೆ ಮೊದಲು ನೆನಪಾಗುವುದು ಕೇಸರಿಬಾತ್.ಭಾನುವಾರದ ಸ್ಪೆಷಲ್ ಅಡುಗೆಯಲ್ಲಿ ಒಂದು ಸ್ಪೆಷಲ್ ಸಿಹಿ ಇರಬೇಕೆಂದು ಯೋಚಿಸುತ್ತಿರುವಾಗ ಮೊದಲು ಹೊಳೆಯುವುದೇ ಕೇಸರಿಬಾತ್. ಕೇಸರಿಬಾತ್ ಮಾಡುವ ವಿಧಾನ ಈಗಗಾಲೇ ನೋಡಿದ್ದೇವೆಲ್ಲ ಎಂದುಕೊಂಡಿರಾ ? ನಿಜ ..ಆದರೆ ನಿಮಗೆ ಗೊತ್ತಾ ? ಕೇಸರಿಬಾತ್ನಲ್ಲಿ ಕೆಲವು ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡಿಕೊಂಡು ಅದನ್ನೇ ಸ್ವಲ್ಪ ಭಿನ್ನವಾಗಿ ಆದರೆ ಇನ್ನಷ್ಟು ರುಚಿಯಾಗಿ ಮಾಡಬಹುದು. ಬಾಳೆಹಣ್ಣಿನ ಕೇಸರಿಬಾತ್ . ಅದನ್ನು ಮಾಡುವ ವಿಧಾನವನ್ನುತಿಳಿಯೋಣ
ಬೇಕಾಗುವ ಸಾಮಗ್ರಿಗಳು:
ತುಪ್ಪ – 5 ದೊಡ್ಡ ಚಮಚ
ಗೋಡಂಬಿ ಚೂರುಗಳು – 2 ದೊಡ್ಡ ಚಮಚ
ಒಣದ್ರಾಕ್ಷಿ – 2 ದೊಡ್ಡ ಚಮಚ
ರವೆ – ಅರ್ಧ ಕಪ್
ಮಾಗಿದ ಬಾಳೆಹಣ್ಣು – 2
ಬಿಸಿನೀರು – ಒಂದು ಕಾಲು ಕಪ್
ಸಕ್ಕರೆ – ಅರ್ಧ ಕಪ್
ಕೇಸರಿ, ಬಿಸಿ ನೀರಿನಲ್ಲಿ ನೆನೆಸಿದ್ದು – ಅರ್ಧ ಚಮಚ
ಏಲಕ್ಕಿ ಪುಡಿ – ಅರ್ಧ ಚಮಚ
ಮಾಡುವ ವಿಧಾನ:
ಬಾಣಲೆಯಲ್ಲಿ ೧ ದೊಡ್ಡ ಚಮಚ ತುಪ್ಪ ಬಿಸಿ ಮಾಡಿಕೊಂಡು ಅದಕ್ಕೆ ಒಂದು ದೊಡ್ಡ ಚಮಚ ಆಗುವಷ್ಟು ಗೋಡಂಬಿ ಚೂರುಗಳನ್ನು ಹಾಕಿ ಚೆನ್ನಾಗಿ ಹುರಿದು ತೆಗೆದಿಡಿ.ನಂತರ ಬಾಣಲೆಯಲ್ಲಿ ಉಳಿದ ತುಪ್ಪಕ್ಕೆ ೧ ದೊಡ್ಡ ಚಮಚ ಒಣ ದ್ರಾಕ್ಷಿ ಹಾಕಿ ಚೆನ್ನಾಗಿ ಹುರಿದು ಬೇರೆ ತೆಗೆದಿಡಿ.ಅದೇ ಬಾಣಲೆಗೆ ಉಳಿದ ತುಪ್ಪಕ್ಕೆ ಅರ್ಧ ಕಪ್ ಆಗುವಷ್ಟು ಉಪ್ಪಿಟ್ಟು ರವೆ ಅಥವಾ ಚಿರೋಟಿ ರವೆ ಹಾಕಿ ಸಣ್ಣ ಉರಿಯಲ್ಲಿ, ಸೌಟಿನಿಂದ ಮಗುಚುತ್ತಾ ಸುಮಾರು ೪ ರಿಂದ ೫ ನಿಮಿಷಗಳವರೆಗೆ ಚೆನ್ನಾಗಿ ಹುರಿಯಿರಿ. ರವೆಯ ಬಣ್ಣ ಬದಲಾಗಬಾರದು. ಹಾಗಂತ ಚೆನ್ನಾಗಿ ಹುರಿಯದೇ ಇದ್ದರೆ ರವೆ ಹಸಿಯಾಗಿಯೇ ಉಳಿಯುತ್ತದೆ. ಚೆನ್ನಾಗಿ ಹುರಿದ ರವೆಯನ್ನು ಬಾಣಲೆಯಿಂದ ತೆಗೆದು ಒಂದು ತಟ್ಟೆಗೆ ಹಾಕಿಡಿ. ಇಲ್ಲವಾದಲ್ಲಿ ಬಾಣಲೆಯ ಬಿಸಿಗೆ ರವೆಯ ಬಣ್ಣ ಬದಲಾಗುತ್ತದೆ.ಒಂದು ಪ್ರತ್ಯೇಕ ಕಪ್ನಲ್ಲಿ ೨ ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು, ಅವನ್ನು ಚೆನ್ನಾಗಿ ಹಿಸುಕಿ ಪೇಸ್ಟ್ ಮಾಡಿಕೊಳ್ಳಿ.ನಂತರ ಅದೇ ಬಾಣಲೆಗೆ ಹುರಿದ ಬಾಳೆಹಣ್ಣಿನ ಪೇಸ್ಟ್ ಮೇಲೆ ಒಂದು ಕಾಲು ಕಪ್ ಆಗುವಷ್ಟು ಕುದಿಯುತ್ತಿರುವ ಬಿಸಿ ನೀರನ್ನು ಹಾಕಿ ಚೆನ್ನಾಗಿ ಕಲಕಿ.ಒಂದು ಕುದಿ ಬರುವ ತನಕ ಕಾದು ನಂತರ ಅದಕ್ಕೆ ಹುರಿದು ತೆಗೆದಿಟ್ಟ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಗಂಟು ಬೀಳದಂತೆ ನೋಡಿಕೊಳ್ಳಿ.ನಂತರ ಅರ್ಧ ಕಪ್ ಸಕ್ಕರೆ ಹಾಗು ೩ ದೊಡ್ಡ ಚಮಚ ಆಗುವಷ್ಟು ತುಪ್ಪ ಹಾಕಿ ಚೆನ್ನಾಗಿ ಕಲಸಿ. ಮತ್ತೆರಡು ನಿಮಿಷ ಚೆನ್ನಾಗಿ ಕಲಸುತ್ತಾ ಬೇಯಿಸಿಕೊಳ್ಳಿ.ಚೆನ್ನಾಗಿ ಕಲಸಿದರೆ ರುಚಿಯಾದ ಬಾಳೆಹಣ್ಣಿನ ಕೇಸರಿಬಾತ್ ರೆಡಿ

 

Share Post