LifestyleNational

ದಂಪತಿ ಫಸ್ಟ್‌ನೈಟ್‌ ಕೊಠಡಿಗೆ ಎಂಟ್ರಿ ದೃಶ್ಯ ಹರಿಬಿಟ್ಟ ಕುಟುಂಬ ಸದಸ್ಯರು!

ಬೆಂಗಳೂರು; ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗೋದಕ್ಕೆ, ಲೈಕ್‌, ಕಮೆಂಟ್‌ ಪಡೆಯೋದಕ್ಕೆ ಜನ ಮಾನ ಮರ್ಯಾದೆ, ನಾಚಿಕೆ ಎಲ್ಲವನ್ನೂ ಬಿಡುತ್ತಿದ್ದಾರೆ.. ಇದಕ್ಕೆ ಉದಾಹರಣೆ ಈ ಸ್ಟೋರಿ.. ಇಲ್ಲಿ ಹೊಸದಾಗಿ ಮದುವೆಯಾದ ಜೋಡಿಗೆ ಫಸ್ಟ್‌ ನೈಟ್‌ ಇತ್ತು.. ಫಸ್ಟ್‌ ನೈಟ್‌ ದಿನ ನವಜೋಡಿಯನ್ನು ಕೋಣೆಗೆ ಕಳುಹಿಸುವ ಸಂದರ್ಭವನ್ನು ಮನೆಯವರೇ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.. ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದೆ.. ಇದೆಲ್ಲಾ ಬೇಕಿತ್ತಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ..
ನವದಂಪತಿ ಮೊದಲ ರಾತ್ರಿ ಶಾಸ್ತ್ರವನ್ನು ಹಬ್ಬದಂತೆ ಆಚರಣೆ ಮಾಡಿದ್ದಾರೆ.. ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಮನೆಯವರೆಲ್ಲಾ ಕುಣಿದುಕುಪ್ಪಳಿಸಿದ್ದಾರೆ.. ಇದರಲ್ಲಿ ಚಿಕ್ಕ ಮಕ್ಕಳು ಕೂಡಾ ಇದ್ದರು ಅನ್ನೋದು ಗಮನಿಸಬೇಕಾದ ವಿಚಾರ. ಎಲ್ಲರ ಸಮ್ಮುಖದಲ್ಲಿ ನವ ದಂಪತಿಯನ್ನು ಗೇಲಿ ಮಾಡುತ್ತಾ ಮೊದಲ ರಾತ್ರಿ ಕೋಣೆ ಕಳುಹಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಹಕರ ಪವರ್‌ ಹೀಗಿರುತ್ತೆ!; ಮಹಿಳೆಯ ಹೋರಾಟಕ್ಕೆ ತಲೆಬಾಗಿದ ಓಲಾ ಕಂಪನಿ!

Share Post