CrimeNational

ಪರಿಚಿತ ಮಹಿಳೆ ಮೇಲೆ ಅತ್ಯಾಚಾರ!; ಯೋಧ ಅರೆಸ್ಟ್‌!

ಭೋಪಾಲ್; ಯೋಧನೊಬ್ಬ ಪರಿಚಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.. ಸಂಜಯ್‌ ಎಂಬ ಯೋಧನೇ ಬಂಧಿತ ಆರೋಪಿಯಾಗಿದ್ದಾನೆ..
ಸಂಜಯ್‌ ಅಸ್ಸಾಂನಲ್ಲಿ ಯೋಧನಾಗಿ ಕೆಲಸ ಮಾಡುತ್ತಾನೆ.. ರಜೆಯ ಮೇಲೆ ಇಂದೋರ್‌ಗೆ ಬಂದಿದ್ದ ಯೋಧ ಸಂಜಯ್‌ ಪರಿಚಯದ ಮಹಿಳೆಯೊಬ್ಬರು ಹೋಟೆಲ್‌ನಲ್ಲಿ ತಂಗಿದ್ದ ವಿಷಯ ತಿಳಿದು ಅಲ್ಲಿಗೆ ಹೋಗಿದ್ದಾನೆ.. ಇದೇ ವೇಳೆ ಯೋಧ ಸಂಜಯ್‌ ಆಕೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.. ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ..
ಸಂತ್ರಸ್ತೆ ಹೋಟೆಲ್‌ನಿಂದ ತಪ್ಪಿಸಿಕೊಂಡು ಬಂದು ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.. ಸದ್ಯ ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಮಹಿಳೆಯ ಖಾಸಗಿ ಭಾಗಗಳಿಗೆ ತೀವ್ರ ಗಾಯಗಳಾಗಿವೆ.. ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.. ಅತ್ಯಾಚಾರದ ದೃಶ್ಯಗಳನ್ನು ಆರೋಪಿ ಚಿತ್ರೀಕರಣ ಮಾಡಿರಬಹುದು ಎಂದು ಶಂಕಿಸಲಾಗಿದೆ.. ಈ ಬಗ್ಗೆ ತನಿಖೆ ಮುಂದುವರೆದಿದೆ…
ಗ್ರಾಹಕರ ಪವರ್‌ ಹೀಗಿರುತ್ತೆ!; ಮಹಿಳೆಯ ಹೋರಾಟಕ್ಕೆ ತಲೆಬಾಗಿದ ಓಲಾ ಕಂಪನಿ!
ಬೆಂಗಳೂರು; ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿದ್ದ ಕನ್ನಡದ ಮಹಿಳೆಯೊಬ್ಬರು ಅದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು.. ಸರಿಯಾದ ಸರ್ವೀಸ್‌ ಸಿಗದ ಕಾರಣ ಆಕೆ ರೋಸಿ ಹೋಗಿದ್ದಳು.. ಇದರಿಂದಾಗಿ ತನ್ನ ಸ್ಕೂಟರ್‌ ಮೇಲೆ ಪ್ರಿಯ ಕನ್ನಡಿಗರೇ ಓಲಾ ಸ್ಕೂಟರ್‌ ಖರೀದಿ ಮಾಡಬೇಡಿ.. ಇದು ಡಬ್ಬಾ ಗಾಡಿ, ಓಲಾ ತಗೊಂಡ್ರೆ ನಿಮ್ಮ ಜೀವನ ಗೋಳು ಎಂದು ಬರೆದಿದ್ದರು.. ಇದು ಸಾಕಷ್ಟು ವೈರಲ್‌ ಆಗಿತ್ತು.. ಈಗಾ ಓಲಾ ಕಂಪನಿ ಸಿಬ್ಬಂದಿ ಆಕೆ ಇರುವಲ್ಲಿಗೇ ಹುಡುಕಿಕೊಂಡು ಬಂದಿದ್ದಾರೆ..
ನಿಶಾ ಗೌರಿ ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ಈಗ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.. ಮೊದಲಿಗೆ ಓಲಾ ಕಂಪನಿಯಿಂದಾದ ತೊಂದರೆ ಬಗ್ಗೆ ಪೋಸ್ಟ್‌ ಮಾಡಿದ್ದಾಗ ಅದು ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿತ್ತು.. ಓಲಾ ಕಂಪನಿಗೂ ಅದು ತಲುಪಿತ್ತು.. ಕಂಪನಿ ಸಿಬ್ಬಂದಿ ಹಲವು ಬಾರಿ ಆಕೆಗೆ ಕರೆ ಮಾಡಿದ್ದರಂತೆ.. ಜೊತೆಗೆ ಕಂಪನಿಯ ನೌಕರನೇ ಆಕೆಯ ಮನೆ ಬಳಿ ಬಂದು ಸ್ಕೂಟರ್‌ ಅನ್ನು ರಿಪೇರಿಗೆ ತೆಗೆದುಕೊಂಡು ಹೋಗಿದ್ದಾನೆ.. ಜೊತೆಗೆ ಅಲ್ಲಿಯ ತನಕ ಓಡಿಸಲು ಬೇರೊಂದು ಸ್ಪೇರ್‌ ಗಾಡಿಯನ್ನು ನಿಶಾ ಗೌರಿಯವರಿಗೆ ನೀಡಲಾಗಿದೆ..
ಶಾಸಕರ ಮನೆಯಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ!
ಲಕ್ನೋ; ಮನೆಗೆಲಸ ಮಾಡುವ ಅಪ್ರಾಪ್ತ ಬಾಲಕಿ ಶಾಸಕರೊಬ್ಬರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಮತ್ತೊಬ್ಬ ಬಾಲಕಾರ್ಮಿಕಳನ್ನು ರಕ್ಷಣೆ ಮಾಡಲಾಡಗಿದೆ.. ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರ ಆಪ್ತ ಶಾಸಕರಲ್ಲಿ ಒಬ್ಬರಾದ ಭಾದೋಹಿಯಾ ಕ್ಷೇತ್ರದ ಶಾಸಕ ಜಾಹಿದ್‌ ಬೇಗ್‌ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ..
ಅಪ್ರಾಪ್ತರನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ.. ಆದ್ರೆ ಶಾಸಕನೇ ತನ್ನ ಮನೆಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ.. ಅದರಲ್ಲಿ ಒಬ್ಬ ಬಾಲಕಿ ನೇಣಿಗೆ ಶರಣಾಗಿದ್ದಾಳೆ.. ಹೀಗಾಗಿ ಶಾಸಕ ಜಾಹಿದ್‌ ಬೇಗ್‌ ವಿರುದ್ಧ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯುನಿಟ್ ಕೇಸ್‌ ದಾಖಲಿಸಿದೆ.. ಶೀಘ್ರದಲ್ಲೇ ಶಾಸಕ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.. ಘಟನೆಯ ತೀವ್ರತೆ ಗೊತ್ತಾಗುತ್ತಿದ್ದ ಶಾಸಕ ಹಾಗೂ ಅವರ ಪತ್ನಿ ಪರಾರಿಯಾಗಿದ್ದಾರೆ.. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..
ಭದೋಹಿ ನಗರದ ಶಾಸಕರ ನಿವಾಸದಲ್ಲಿ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.. ಮಾರನೇ ದಿನ ಅದೇ ಮನೆಯಲ್ಲಿ ಮತ್ತೊಬ್ಬ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.. ಹೀಗಾಗಿ ಶಾಸಕ ಹಾಗೂ ಅವರ ಪತ್ನಿ ವಿರುದ್ಧ ಎರಡನೇ ಎಫ್‌ಐಆರ್‌ ಕೂಡಾ ದಾಖಲಿಸಲಾಗಿದೆ.. ಸೆಕ್ಷನ್ 143 (4), 143 (5), ಸೆಕ್ಷನ್ 79 ಮತ್ತು ಸೆಕ್ಷನ್ 4 ಮತ್ತು 16 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಲೆಕ್ಟ್ರಿಕ್‌ ಬಸ್‌ ಡಿಕ್ಕಿಯಾಗಿ 25 ವರ್ಷದ ಯುವತಿ ದುರ್ಮರಣ!
ಹೈದರಾಬಾದ್; ಎಲೆಕ್ಟ್ರಿಕ್‌ ಬಸ್‌ ಡಿಕ್ಕಿಯಾಗಿ 25 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ.. ಹೈದರಾಬಾದ್‌ನ ಮಾದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.. ತೆಲಂಗಾಣ ಸಾರಿಗೆ ಸಂಸ್ಥೆಗೆ ಸೇರಿದ ಎಲೆಕ್ಟ್ರಿಕ್‌ ಬಸ್‌ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ..
25 ವರ್ಷದ ಮಾಧವಿ ಎಂಬಾಕೆಯೇ ಸಾವನ್ನಪ್ಪಿದವರು.. ಶುಕ್ರವಾರ ರಾತ್ರಿ ಅವರು ಕೊತ್ತಗುಡ ಚೌಕದಿಂದ ಮಾದಾಪುರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.. ಈ ವೇಳೆ ಬಸ್‌ ಡಿಕ್ಕಿ ಹೊಡೆದಿದೆ.. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.. ಆದ್ರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಆಕೆ ಮೃತಪಟ್ಟಿದ್ದಾಳೆ.. ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ..
ಬಿಎಂಟಿಸಿ ಬಸ್‌ನಲ್ಲಿ ಯುವತಿಗೆ ಕಿರುಕುಳ ಕೊಟ್ಟ ಕಂಡಕ್ಟರ್‌!
ಬೆಂಗಳೂರು; ಬಿಎಂಟಿಸಿ ಬಸ್‌ ನಿರ್ವಾಹಕನೊಬ್ಬ ಯುತಿಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.. ವಿಡಿಯೋದಲ್ಲಿ ಸೀಟಿನಲ್ಲಿ ಯುವತಿಯೊಬ್ಬಳು ಕುಳಿತಿದ್ದು, ಸೀಟ್‌ ಪಕ್ಕ ಕೈಇಟ್ಟುಕೊಳ್ಳುವ ಜಾಗದಲ್ಲಿ ಕಂಡಕ್ಟರ್‌ ಕುಳಿತಿದ್ದಾನೆ.. ಯುವತಿಗೆ ಒರಗಿಕೊಂಡು ಕೂತಿದ್ದಾನೆ..
ಬಸ್‌ ಖಾಲಿ ಇದ್ದರು ಕೂಡಾ ಕಂಡಕ್ಟರ್‌ ಯುವತಿ ಇರುವ ಸೀಟ್‌ನ ಹ್ಯಾಂಡಲ್‌ ಮೇಲೆ ಕುಳಿತು, ಯುವತಿಗೆ ಕಿರಿಕಿರಿ ಉಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.. KA41D2500 ಸಂಖ್ಯೆಯ ಬಸ್ ನಲ್ಲಿ ಕಂಡಕ್ಟರ್‌ ಬೇಕಂತಲೇ ಹೀಗೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.. ಈ ಕುರಿತಂತೆ @karnatakaportf ಟ್ವಿಟರ್‌ ಖಾತೆಯಲ್ಲಿ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ.. ಕಂಡಕ್ಟರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹ ಮಾಡಿದ್ದಾರೆ..

Share Post