CrimeNational

2024ರಲ್ಲಿ ಕೊನೆಗೂ ಕೊಲೆ ಮಾಡಿದ್ದೇನೆ; ಅಪ್ರಾಪ್ತ ಬಾಲಕನೇ ಕೊಲೆಗಾರ!

ನವದೆಹಲಿ; ಮೂರು ಹಾಸಿಗೆಗಳ ಸಣ್ಣ ಕ್ಲಿನಿಕ್‌ಗೆ ನುಗ್ಗಿದ ಅಪ್ರಾಪ್ತ ಬಾಲಕನೊಬ್ಬ ಅಲ್ಲಿದ್ದ ವೈದ್ಯನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.. ದೆಹಲಿಯ ಕಲಿಂದಿ ಕುಂಜ್‌ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.. ಆರೋಪಿ 17 ವರ್ಷದ ಬಾಲಕನಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ..
ಬುಧವಾರ ರಾತ್ರಿ ಆರೋಪಿ ದೆಹಲಿ ಕಲಿಂದಿ ಕುಂಜ್‌ನ ನೀಮಾ ಆಸ್ಪತ್ರೆಗೆ ನುಗ್ಗಿದ್ದಾನೆ.. ಅಲಿದ್ದ 55 ವರ್ಷದ ವೈದ್ಯನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.. ಅಲ್ಲಿಂದ ಎಸ್ಕೇಪ್‌ ಆದ ಆರೋಪಿ ಸೋಷಿಯಲ್‌ ಮೀಡಿಯಾದಲ್ಲಿ ʻ2024ರಲ್ಲಿ ಕೊನೆಗೂ ಮರ್ಡರ್‌ ಮಾಡಿದ್ದೇನೆʼ ಎಂದು ಬರೆದುಕೊಂಡಿದ್ದಾನೆ.. ಆರೋಪಿಯ ಜೊತೆ ಇನ್ನೂ ಒಬ್ಬ ಬಾಲಕ ಹೋಗಿದ್ದ ಎಂದು ತಿಳಿದುಬಂದಿದೆ.. ಆತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

Share Post