ಗ್ರಾಹಕರ ಪವರ್ ಹೀಗಿರುತ್ತೆ!; ಮಹಿಳೆಯ ಹೋರಾಟಕ್ಕೆ ತಲೆಬಾಗಿದ ಓಲಾ ಕಂಪನಿ!
ಬೆಂಗಳೂರು; ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದ ಕನ್ನಡದ ಮಹಿಳೆಯೊಬ್ಬರು ಅದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು.. ಸರಿಯಾದ ಸರ್ವೀಸ್ ಸಿಗದ ಕಾರಣ ಆಕೆ ರೋಸಿ ಹೋಗಿದ್ದಳು.. ಇದರಿಂದಾಗಿ ತನ್ನ ಸ್ಕೂಟರ್ ಮೇಲೆ ಪ್ರಿಯ ಕನ್ನಡಿಗರೇ ಓಲಾ ಸ್ಕೂಟರ್ ಖರೀದಿ ಮಾಡಬೇಡಿ.. ಇದು ಡಬ್ಬಾ ಗಾಡಿ, ಓಲಾ ತಗೊಂಡ್ರೆ ನಿಮ್ಮ ಜೀವನ ಗೋಳು ಎಂದು ಬರೆದಿದ್ದರು.. ಇದು ಸಾಕಷ್ಟು ವೈರಲ್ ಆಗಿತ್ತು.. ಈಗಾ ಓಲಾ ಕಂಪನಿ ಸಿಬ್ಬಂದಿ ಆಕೆ ಇರುವಲ್ಲಿಗೇ ಹುಡುಕಿಕೊಂಡು ಬಂದಿದ್ದಾರೆ..
ನಿಶಾ ಗೌರಿ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈಗ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.. ಮೊದಲಿಗೆ ಓಲಾ ಕಂಪನಿಯಿಂದಾದ ತೊಂದರೆ ಬಗ್ಗೆ ಪೋಸ್ಟ್ ಮಾಡಿದ್ದಾಗ ಅದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.. ಓಲಾ ಕಂಪನಿಗೂ ಅದು ತಲುಪಿತ್ತು.. ಕಂಪನಿ ಸಿಬ್ಬಂದಿ ಹಲವು ಬಾರಿ ಆಕೆಗೆ ಕರೆ ಮಾಡಿದ್ದರಂತೆ.. ಜೊತೆಗೆ ಕಂಪನಿಯ ನೌಕರನೇ ಆಕೆಯ ಮನೆ ಬಳಿ ಬಂದು ಸ್ಕೂಟರ್ ಅನ್ನು ರಿಪೇರಿಗೆ ತೆಗೆದುಕೊಂಡು ಹೋಗಿದ್ದಾನೆ.. ಜೊತೆಗೆ ಅಲ್ಲಿಯ ತನಕ ಓಡಿಸಲು ಬೇರೊಂದು ಸ್ಪೇರ್ ಗಾಡಿಯನ್ನು ನಿಶಾ ಗೌರಿಯವರಿಗೆ ನೀಡಲಾಗಿದೆ..