HealthLifestyle

ಹಲ್ಲು ಸ್ವಚ್ಛವಾಗಿದ್ದರೂ ಬಾಯಿ ದುರ್ವಾಸನೆ ಬರ್ತಿದೆಯಾ..?; ಅದಕ್ಕೆ ಪರಿಹಾರ ಇಲ್ಲಿದೆ!

ಕೆಲವರು ತುಂಬಾ ಕ್ಲೀನ್‌ ಆಗಿರುತ್ತಾರೆ.. ದಿನಕ್ಕೆ ಎರಡು ಬಾರಿ ಬ್ರಷ್‌ ಮಾಡುತ್ತಾರೆ.. ನೀಟಾಗೂ ಇರುತ್ತಾರೆ.. ಆದ್ರೆ ಅವರ ಬಾಯಿಂದ ಮಾತ್ರ ದುರ್ವಾಸನೆ ಬರುತ್ತಿರುತ್ತದೆ.. ಸಾಮಾನ್ಯವಾಗಿ ಹಲ್ಲನ್ನ ಸರಿಯಾಗಿ ಉಜ್ಜದೇ ಇದ್ದರೆ, ಬಾಯಿಯ ನೈರ್ಮಲ್ಯ ಚೆನ್ನಾಗಿಲ್ಲದಿದ್ದರೆ ದುರ್ವಾಸನೆ ಬರುತ್ತದೆ.. ಅದು ಕಾಮನ್‌.. ಆದ್ರೆ, ಬಾಯಿಯನ್ನು ಚೆನ್ನಾಗಿ ತೊಳೆದರೂ ಕೂಡಾ ಕೆಲವರು ವಿಪರೀತ ಸಮಸ್ಯೆ ಇರುತ್ತದೆ.. ಅವರ ಎದುರು ನಿಲ್ಲೋದಕ್ಕೂ ಜನ ಹಿಂಜರಿಯುತ್ತಿರುತ್ತಾರೆ.. ಅಂತವರು ತುಂಬಾ ಕಿರಿಕಿರಿ ಅನುಭವಿಸುತ್ತಿರುತ್ತಾರೆ.. ಈಗ ತಾನೆ ಬ್ರಷ್‌ ಮಾಡಿದೆ ಆದರೂ ವಾಸನೆ ಬರ್ತಿದೆ ಯಾಕೆ ಎಂದು ಪ್ರಶ್ನಿಸಿಕೊಳ್ಳುತ್ತಿರುತ್ತಾರೆ.. ಹಾಗೆ, ಬಾಯಿಯಿಂದ ದುರ್ವಾಸನೆ ಬರೋದಕ್ಕೆ ಹೊಟ್ಟೆ ಕಾರಣ ಎಂದು ತಜ್ಞರು ಹೇಳುತ್ತಾರೆ..

ದಿನಕ್ಕೆ ಎರಡು ಬಾರಿ ಬ್ರಷ್‌ ಮಾಡುವುದು, ಆಹಾರ ತಿಂದ ಮೇಲೆ ಬಾಯಿ ಮುಕ್ಕಳಿಸಬೇಕು ಎಂದು ದಂತ ವೈದ್ಯರು ಶಿಫಾರಸು ಮಾಡುತ್ತಾರೆ.. ಇಷ್ಟೆಲ್ಲಾ ಮಾಡಿದರೂ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ, ಅದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಬಾಯಿಯ ದುರ್ವಾಸನೆಯು ಅನೇಕ ಅಪಾಯಕಾರಿ ಕಾಯಿಲೆಗಳ ಆರಂಭಿಕ ಲಕ್ಷಣ ಎಂದೇ ಕೆಲ ತಜ್ಞರು ಹೇಳುತ್ತಾರೆ…

ಕೆಲವರಿಗೆ ಉಸಿರಾಟದ ಸೋಂಕು ಇರುತ್ತದೆ.. ಅಂದ್ರೆ ನಾವು ಉಸಿರಾಡುವ ನಾಳದಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುತ್ತದೆ.. ಅವುಗಳಿಂದ ದುರ್ವಾಸನೆ ಬರುತ್ತದೆ.. ನಾವು ಮಾತನಾಡುವಾಗ ಉಸಿರಾಡುವ ನಾಳಗಳ ಬ್ಯಾಕ್ಟೀರಿಯಾಗಳು ಉಂಟು ಮಾಡುವ ದುರ್ವಾಸನೆ ಹೊರಬರುತ್ತದೆ.. ಇದರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ.. ಇನ್ನು ಹೊಟ್ಟೆ ಹುಣ್ಣು ಆಗಿದ್ದರೆ ಕೂಡಾ ಇಂತ ಸಮಸ್ಯೆ ಉಂಟಾಗುತ್ತದೆ.. ಹೊಟ್ಟೆಯಲ್ಲಿರುವ ಆಮ್ಲ ಅನ್ನನಾಳಕ್ಕೆ ಮರಳಿದಾಗ, ಇದು ಬಾಯಿಯಲ್ಲಿ ಹುಳಿ ರುಚಿಯನ್ನು ಉಂಟುಮಾಡುತ್ತದೆ. ಇದು ಕೂಡ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ.
ಇನ್ನು ಮೂತ್ರಪಿಂಡದ ಕಾಯಿಲೆಯು ಕೂಡಾ ಬಾಯಿಯ ದುರ್ವಾಸನೆಯನ್ನು ತರಿಸುತ್ತದೆ.. ದೇಹದಿಂದ ಅನಗತ್ಯ ವಿಷಕಾರಿ ಅಂಶವನ್ನು ಹೊರಹಾಕುಔ ಸಂದರ್ಭದಲ್ಲಿ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ವಿಷದಿಂದ ಉಸಿರಾಟವು ಅಮೋನಿಯಾದಂತೆ ವಾಸನೆ ಬೀರುತ್ತದೆ. ಇದನ್ನು ಯುರೆಮಿಕ್ ಉಸಿರಾಟ ಎಂದೂ ಕರೆಯುತ್ತಾರೆ. ದೀರ್ಘಕಾಲದಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಬಾಯಿಯಿಂದಲೂ ದುರ್ವಾಸನೆ ಬರುತ್ತಿರುತ್ತದೆ.. ಸಿರೋಸಿಸ್ ಅಥವಾ ಯಕೃತ್ತಿನ ಸಮಸ್ಯೆಗಳು ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು ಅಂದ ತಜ್ಞರು ಹೇಳುತ್ತಾರೆ..

Share Post