ಜಲಪಾತದ ನೀರಿಗೆ ಹಾರಿದ ಯುವಕ ಕೊಚ್ಚಿಹೋಗಿ ದಾರುಣ ಸಾವು
ಮುಂಬೈ; ಜಿಮ್ ಮಾಡಿ ದೇಹ ಕಟ್ಟು ಮಸ್ತಾದ ದೇಹ ಬೆಳೆಸಿದ್ದ ಯುವಕ ಜಲಪಾತದ ನೀರಿಗೆ ಧುಮುಕಿ ರಭಸವಾಗಿ ಹರಿಯುವ ನೀರಿನಲ್ಲಿ ಈಜಾಡಿ ತನ್ನ ಪವರ್ ತೋರಿಸಲು ಹೋಗಿದ್ದಾನೆ.. ಆದ್ರೆ ನೀರಿನ ರಭಸಕ್ಕೆ ಈಜಲಾಗದೇ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ.. ಮಹಾರಾಷ್ಟ್ರದ ಪುಣೆಯ ತಮ್ಹಿನಿ ಘಾತ್ ವಾಟರ್ ಫಾಲ್ಸ್‌ನಲ್ಲಿ ಈ ಘಟನೆ ನಡೆದಿದೆ..
ಪುಣೆಯ ಭೋಸಾರಿ ಪ್ರದೇಶದ ಪಿಂಪ್ರಿ ಚಿಂಚ್ವಾಡ್ನ ನಿವಾಸಿ ಸ್ವಪ್ನಿಲ್ ಧಾವ್ಡೆ ಎಂಬಾತನೇ ಫಾಲ್ಸ್‌ಗೆ ಹಾರಿ ಸಾವನ್ನಪ್ಪಿರುವ ವ್ಯಕ್ತಿ. ಜಿಮ್ ಮಾಡುವ 32 ಸ್ನೇಹಿತರೊಂದಿಗೆ ಈತ ಪಿಕ್‌ನಿಕ್ ಹೋಗಿದ್ದ.. ಈ ವೇಳೆ ಜಲಪಾತಕ್ಕೆ ಹಾರಿ ಈಜಾಡಿ ಸಾಹಸ ಪ್ರದರ್ಶನ ಮಾಡಲು ಹೋಗಿದ್ದಾನೆ.. ಈ ವೇಳೆ ದುರ್ಘಟನೆ ನಡೆದಿದೆ.. ಯುವಕ ಈಜಲೆಂದು ಜಲಪಾತದ ನೀರಿಗೆ ಜಂಪ್ ಮಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಯುವಕನು ನೀರಿಗೆ ಜಿಗಿದು ಈಜಿ ದಡ ಸೇರಲು ಮುಂದಾಗುತ್ತಾನೆ. ಆದರೆ ನೀರಿನ ಹರಿಯುವ ರಭಸ ಜೋರಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾನೆ.