Lifestyle

ದೇಹದ ಅದೆಷ್ಟೋ ಮಾರಣಾಂತಿಕ ಕಾಯಿಲೆಗೆ ರಾಮಬಾಣ ಎಲೆಕೋಸು

ಎಷ್ಟೋ ಜನ ಎಲೆಕೋಸು ಉಷ್ಣ ಎಂದು ಹೆಚ್ಚಾಗಿ ತಿನ್ನುವುದಿಲ್ಲ. ಆದರೆ ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎಂಬ ಗಾದೆಯಂತೆ ಎಲೆಕೋಸಿನ ಪ್ರಯೋಜನ ಗೊತ್ತಿಲ್ಲದವರು ವಿರೋಧ ಮಾಡುತ್ತಾರಷ್ಟೇ…ನಿಮ್ಮ ಆಹಾರದಲ್ಲಿ ಎಲೆಕೋಸು ಸೇರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.  ಎಲೆಕೋಸು ಪೋಷಕಾಂಶಗಳ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ವಿಶೇಷವಾಗಿ ಎಲೆಕೋಸಿನಲ್ಲಿ ವಿಟಮಿನ್ ಎ, ರೈಬೋಫ್ಲಾವಿನ್, ಫೋಲೇಟ್, ಬಿ ಮತ್ತು ಫೈಬರ್ ಅಧಿಕವಾಗಿದೆ. ಎಲೆಕೋಸಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ಹೃದ್ರೋಗವನ್ನು ತಡೆಯಲು ಸಹಾಯ ಮಾಡುವುದಷ್ಟೇ ಅಲ್ಲದೆ ಕ್ಯಾನ್ಸರ್ ತಡೆಗಟ್ಟಲು ಸಹ ಸಹಾಯ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ದೇಹದಲ್ಲಿನ ಕೊಬ್ಬಿನ ನಿಕ್ಷೇಪಗಳನ್ನು ನಿವಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಸಮತೋಲನಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಕೊಡುಗೆ ನೀಡುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಎಲೆಕೋಸು ಸೇರಿಸಲು ಸಲಹೆ ನೀಡುತ್ತಾರೆ. ಇದನ್ನು ಸೇವಿಸುವುದರಿಂದ ಮೂಳೆಗಳು, ಹಲ್ಲುಗಳು ಮತ್ತು ಹೃದಯ ಸೇರಿದಂತೆ ದೇಹದ ಪ್ರತಿಯೊಂದು ಅಂಗಕ್ಕೂ ಕ್ಯಾಲ್ಸಿಯಂ ಸಿಗುತ್ತದೆ. ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳವುದು ಉತ್ತಮ ಅಂತಾರೆ ವೈದ್ಯರು.

ತೂಕ ಇಳಿಸಿಕೊಳ್ಳಲು ಬಯಸುವವರು ಎಲೆಕೋಸು ಸೇವನೆಯಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಕೂದಲಿನ ಆರೋಗ್ಯದ ಜೊತೆಗೆ,  ಸ್ನಾಯು ನೋವುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಎಲೆಕೋಸಿನಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣಿನ ಒಳಭಾಗದಲ್ಲಿರುವ ಕಲೆಗಳನ್ನು ತಡೆಯುತ್ತದೆ. ಪೊಟ್ಯಾಸಿಯಮ್ ಅಧಿಕವಾಗಿರುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದನ್ನು ಸೂಪ್, ತರಕಾರಿಗಳು, ಸಲಾಡ್ ರೂಪದಲ್ಲಿ ತೆಗೆದುಕೊಳ್ಳಬಹುದು. ಹಾಲುಣಿಸುವ ತಾಯಂದಿರು ಎಲೆಕೋಸು ತಿನ್ನುವುದರಿಂದ ಹಾಲಿನೊಂದಿಗೆ ಮಗುವಿಗೆ ಉತ್ತಮ ಪೋಷಕಾಂಶ ದೊರೆಯುತ್ತದೆ.

Share Post