National

ದೆಹಲಿಯಲ್ಲಿ ಪ್ರಬಲ ಭೂಕಂಪನ; 5.3 ತೀವ್ರತೆ ದಾಖಲು

ನವದೆಹಲಿ; ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರಬಲ ಭೂಕಂಪನವಾಗಿದೆ. ಹಲವು ಸೆಕೆಂಡ್‌ಗಳಷ್ಟು ಭೂಮಿ ನಡುಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಭೂಮಿ ಕಂಪಿಸಿದೆ.

ದೆಹಲಿ, ಪಂಜಾಬ್‌, ಚಂಡೀಗಢ, ಜಮ್ಮು-ಕಾಶ್ಮೀರದಲ್ಲಿ ಭೂಮಿ ನಡುಗಿದೆ ಎಂದು ತಿಳಿದುಬಂದಿದೆ. ರಿಕ್ಟರ್‌ ಮಾಪಕದಲ್ಲಿ 5.3 ತೀವ್ರತೆ ತೀವ್ರತೆ ದಾಖಲಾಗಿದೆ. ಆದ್ರೆ ಭೂಮಿ ಬಿರುಕು ಬಿಟ್ಟಿದ್ದಾಗಲೀ, ಪ್ರಾಣ ಹಾನಿ ಸಂಭವಿಸಿದ್ದಾಗಲೀ ಯಾವುದೂ ಆಗಿಲ್ಲ. ಆದ್ರೆ ಭೂಮಿ ಪ್ರಬಲವಾಗಿ ನಡುಗಿದ್ದರಿಂದ ಜನರಲ್ಲಿ ಭೀತಿ ಹೆಚ್ಚಾಗಿದೆ. ಮತ್ತೆ ಭೂಮಿ ನಡುಗಬಹುದು ಎಂಬ ಆತಂಕದಲ್ಲಿ ಜನರಿದ್ದಾರೆ.

Share Post