BengaluruEconomyPolitics

ಗ್ಯಾರೆಂಟಿಗಳಿಂದ ಆಗೋ ನಷ್ಟ ಸರ್ಕಾರ ಹೇಗೆ ತುಂಬುತ್ತೆ ಗೊತ್ತಾ..?; ಸರ್ಕಾರಕ್ಕಿರುವ ದಾರಿಗಳಿವು..!

ಬೆಂಗಳೂರು; ಚುನಾವಣೆ ವೇಳೆ ನೀಡಿದ ಅಶ್ವಾಸನೆಗಳಂತೆ ಕಾಂಗ್ರೆಸ್‌ ಸರ್ಕಾರ ಐದೂ ಗ್ಯಾರೆಂಟಿಗಳನ್ನು ಜಾರಿ ಮಾಡಿದೆ. ಇದರ ಜೊತೆಗೆ ಇಂದಿರಾ ಕ್ಯಾಂಟೀನ್‌ಗೂ ಕಾಯಕಲ್ಪ ನೀಡಲು ಹೊರಟಿದೆ. ಈ ಎಲ್ಲಾ ಯೋಜನೆಗಳೂ ಸರಿಯಾಗಿ ಅನುಷ್ಠಾನವಾಗಬೇಕಾದರೆ ಕನಿಷ್ಠವೆಂದರೂ 60 ಸಾವಿರ ಕೋಟಿ ರೂಪಾಯಿಗಳು ಬೇಕು. ಹೀಗಾಗಿ ಸರ್ಕಾರ ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವುದು ಹೇಗೆ ಎಂದು ಯೋಚನೆ ಮಾಡುತ್ತಿದೆ. ಯಾವುದೇ ಸರ್ಕಾರಕ್ಕೆ ಅಬಕಾರಿ, ಕಂದಾಯ, ಆಸ್ತಿ ನೋಂದಣಿಯಿಂದ ಹೆಚ್ಚಿನ ಆದಾಯ ಬರುತ್ತದೆ. ಇದೀಗ ಆದಾಯ ಹೆಚ್ಚಿಸಿಕೊಳ್ಳಲು ರಾಜ್ಯ ಸರ್ಕಾರ ಇದೇ ಮೂರು ಇಲಾಖೆಗಳ ಮೇಲೆ ಕಣ್ಣಿಟ್ಟಿದೆ.

ನೋಂದಣಿ ಮತ್ತು ಮುದ್ರಾಂಕ ಕಾನೂನಿನ ಪ್ರಕಾರ ವರ್ಷ ವರ್ಷವೂ ಮಾರ್ಗಸೂಚಿ ದರವನ್ನು ಏರಿಕೆ ಮಾಡಬಹುದು. ಆದ್ರೆ, ಕೊರೊನಾ ಬಂದಿದ್ದರಿಂದಾಗಿ, 2019ರಿಂದಲೂ ಮಾರ್ಗಸೂಚಿ ದರ ಏರಿಕೆ ಮಾಡಿರಲಿಲ್ಲ. ಆಸ್ತಿ ನೋಂದಣಿಗಳು ಕುಸಿದಿದ್ದರಿಂದ ಮಾರ್ಗಸೂಚಿ ದರವನ್ನು ಕಡಿಮೆ ಕೂಡಾ ಮಾಡಲಾಗಿತ್ತು. ಇದೀಗ ಎಲ್ಲವೂ ಸರಿಹೋಗಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರ ಮತ್ತೆ ಗರಿಗೆದರಿದೆ. ಹೀಗಾಗಿ ಈ ಬಾರಿ ಮಾರ್ಗಸೂಚಿ ದರ ಹೆಚ್ಚಳ ಮಾಡಲು ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ದರ ಹೆಚ್ಚಳ ಸರ್ಕಾರಕ್ಕೂ ಅನಿವಾರ್ಯವಾಗಿದೆ. ಆದ್ರೆ  ಎಷ್ಟು ಪ್ರಮಾಣದಲ್ಲಿ ಮಾರ್ಗಸೂಚಿ ದರ ಏರಿಸುತ್ತಾರೋ ನೋಡಬೇಕು.

ಒಂದು ಕನಿಷ್ಠ ದರ 15ರಷ್ಟು ಏರಿಕೆ ಮಾಡಿದರೂ ಇದರಿಂದ ಸರ್ಕಾರಕ್ಕೆ ವರ್ಷಕ್ಕೆ 19 ಸಾವಿರ ಕೋಟಿ ರೂಪಾಯಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಆದ್ರೆ ಮೂರು ವರ್ಷದಿಂದ ಮಾರ್ಗಸೂಚಿ ದರ ಏರಿಸಿಲ್ಲ. ಹೀಗಾಗಿ ಶೇ.35ರಷ್ಟು ಏರಿಕೆ ಮಾಡುವುದಕ್ಕೆ ಸಾಧ್ಯವಿದೆ. ಹಾಗೇನಾದರೂ ಏರಿಕೆ ಮಾಡಿದರೆ, ಇದರಿಂದಲೇ 45-50 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಸರ್ಕಾರದ ಐದೂ ಗ್ಯಾರೆಂಟಿಗಳಿಗೆ ತಗಲುವ ಬಹುತೇಕ ಹಣ ಇದರಿಂದಲೇ ವಾಪಸ್‌ ಬರಲಿದೆ.

Share Post