ನಕಲಿ ಮಾವಿನ ಹಣ್ಣುಗಳ ಬಗ್ಗೆ ಇರಲಿ ಎಚ್ಚರ!; ತಿಂದರೆ ಗಂಭೀರ ಆರೋಗ್ಯ ಸಮಸ್ಯೆ!
ಈಗ ಮಾವಿನ ಸೀಸನ್.. ಮಾವಿನಹಣ್ಣಿನ ಪ್ರಿಯರು ಯಾರೂ ಇಲ್ಲವೇ ಇಲ್ಲ.. ಬಂಡಿಗಳ ಮೇಲೆ ಮಾರಾಟಕ್ಕಿಟ್ಟಿರುವ ಮಾವಿನ ಹಣ್ಣುಗಳನ್ನು ನೋಡಿದರೆ ಯಾರಿಗಾದರೂ ಖರೀದಿ ಮಾಡಬೇಕು ಅನಿಸುತ್ತದೆ.. ಆದ್ರೆ, ಎಲ್ಲಾ ಹಣ್ಣುಗಳೂ ನಿಜವಾದ ಹಣ್ಣುಗಳಲ್ಲ, ಅವುಗಳನ್ನು ತಿಂದರೆ ಆರೋಗ್ಯಕ್ಕೆ ತೊಂದರೆಯೇ ಹೆಚ್ಚು.. ಯಾಕಂದ್ರೆ, ಬಂಡಿಗಳ ಮೇಲೆ ಇಟ್ಟಿರುವ ಮಾವಿನ ಹಣ್ಣುಗಳಲ್ಲಿ ಇತ್ತೀಚೆಗೆ ನಕಲಿ ಹಣ್ಣುಗಳೇ ಹೆಚ್ಚಾಗಿ ಕಾಣಿಸುತ್ತಿವೆ.. ಹೀಗಾಗಿ ಗ್ರಾಹಕನಿಗೆ ಅಸಲಿ ಯಾವುದು, ನಕಲಿ ಯಾವುದು ಅನ್ನೋದೇ ಪತ್ತೆ ಮಾಡೋದಕ್ಕೆ ಆಗುತ್ತಿಲ್ಲ.. ನಕಲಿ ಹಣ್ಣುಗಳನ್ನು ಕೊಂಡು ತಿಂದರೆ ಗಂಭೀರ ಆರೋಗ್ಯ ಸಮಸ್ಯೆಗಳು ಬರೋದು ಗ್ಯಾರೆಂಟಿ ಅಂತ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ..
ನಕಲಿ ಮಾವಿನ ಹಣ್ಣುಗಳ ಅಂದ್ರೆ ಯಂತ್ರದಿಂದ ತಯಾರಿಸಿದ ಮಾವಿನ ಹಣ್ಣುಗಳು ಅಲ್ಲವೇ ಅಲ್ಲ.. ಮರದಲ್ಲಿ ಕಾಯಿ ಇರುವಾಗಲೇ ಅದನ್ನು ಕಿತ್ತುತಂದು ಅದಕ್ಕೆ ಕ್ಯಾಲ್ಸಿಯಂ ಕಾರ್ಬೈಡ್ ಹಾಕಿ ಕೃತಕವಾಗಿ ಮಾಗಿಸಲಾಗುತ್ತದೆ.. ಹೀಗೆ ಹಣ್ಣುಗಳ ಮೇಲೆ ಕ್ಯಾಲ್ಸಿಯಂ ಕಾರ್ಬೈಡ್ ಹಾಕುವುದರಿಂದ ಒಂದೇ ದಿನದಲ್ಲಿ ಹಣ್ಣಾಗುತ್ತದೆ.. ಹಾಗೆ ಕೃತಕವಾಗಿ ಮಾಡಿದ ಹಣ್ಣನ್ನು ನಕಲಿ ಹಣ್ಣು ಎಂದು ಕರೆಯಲಾಗುತ್ತದೆ.. ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸುವುದಕ್ಕೆ ನಿಷೇಧ ಹೇರಲಾಗಿದೆ.. ಹೀಗಿದ್ದರೂ ಕೂಡಾ ಹೆಚ್ಚಿನ ಜನರು ಇದನ್ನೇ ಮಾಡುತ್ತಿದ್ದಾರೆ.. ಇದರಿಂದ ಆರೋಗ್ಯಕ್ಕೆ ತುಂಬಾ ಅಪಾಯ ಎಂದು ತಜ್ಞರು ಹೇಳುತ್ತಾರೆ..
ಕ್ಯಾಲ್ಸಿಯಂ ಕಾರ್ಬೈಡ್ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಇದು ಒಂದು ರೀತಿಯ ಕಲ್ಲಿನಂತಿದ್ದು, ಅದನ್ನು ಜನರು ಸುಣ್ಣದ ಕಲ್ಲು ಎಂದೂ ಕರೆಯುತ್ತಾರೆ. ಕ್ಯಾಲ್ಸಿಯಂ ಕಾರ್ಬೈಡ್‌ನ್ನು ಮಾವಿನ ಕಾಯಿಗಳ ನಡುವೆ ಇಟ್ಟು ಹಣ್ಣು ಮಾಡುತ್ತಾರೆ.. ಹೀಗೆ ಕ್ಯಾಲ್ಸಿಯಂ ಕಾರ್ಬೈಡ್ ಇಟ್ಟ ಈ ಮಾವಿನಹಣ್ಣುಗಳನ್ನು ಗಾಳಿಯಾಡದ ಸ್ಥಳದಲ್ಲಿ 3-4 ದಿನಗಳವರೆಗೆ ಇಡಲಾಗುತ್ತದೆ. ಆ ಕಾರಣದಿಂದಾಗಿ ಅವು ಬೇಗ ಹಣ್ಣುಗಳಾಗುತ್ತವೆ.. ಕ್ಯಾಲ್ಸಿಯಂ ಕಾರ್ಬೈಡ್ ತೇವಾಂಶದ ಅಂಶವನ್ನು ಲೆಕ್ಕಿಸದೆ ಅಸಿಟಿಲೀನ್ ಅನಿಲವನ್ನು ರೂಪಿಸುತ್ತದೆ. ಇದರಿಂದ ಬಹುಬೇಗ ಹಣ್ಣಾಗುತ್ತವೆ..
ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಹಣ್ಣು ಮಾಡಿದ ಮಾವಿನ ಹಣ್ಣನ್ನು ತಿನ್ನುವುದು ಅತ್ಯಂತ ಅಪಾಯಕಾರಿ. ಇದನ್ನು ಸೇವಿಸುವುದರಿಂದ ಹೊಟ್ಟೆನೋವು, ಭೇದಿ ಮತ್ತು ವಾಂತಿಯಂತಹ ಸಮಸ್ಯೆಗಳು ಎದುರಾಗುತ್ತವೆ. ಅಷ್ಟೇ ಅಲ್ಲ, ತಲೆನೋವು, ಮಾನಸಿಕ ಕ್ಷೋಭೆ, ತಲೆತಿರುಗುವಿಕೆ, ಮೂರ್ಛೆ ಹೋಗುವುದು ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ..