ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡಬಾರದಂತೆ!; ಸರ್ಕಾರದಿಂದ ಹೊಸ ರೂಲ್!
ಬೆಂಗಳೂರು; ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೆಲ ತಿಂಗಳ ಹಿಂದೆ ತಮ್ಮ ತಂದೆ, ಮಾಜಿ ಸಿಎಂ ಬಂಗಾರಪ್ಪ ಅವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳ ಜೊತೆ ಆಚರಣೆ ಮಾಡಿದ್ದರು.. ಅವರ ಜೊತೆ ಸಿಹಿಯೂಟ ಮಾಡಿ ಸಂಭ್ರಮಿಸಿದ್ದರು.. ಈಗ ಅದೇ ಮಧು ಬಂಗಾರಪ್ಪ ಅವರ ನೇತೃತ್ವದ ಶಿಕ್ಷಣ ಇಲಾಖೆ, ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಿಸುವುದಕ್ಕೆ ಬ್ರೇಕ್ ಹಾಕಿ ಆದೇಶ ಹೊರಡಿಸಿದೆ..
ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.. ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಹಾಗೂ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡಬಾರದು ಎಂದು ಹೇಳಲಾಗಿದೆ.. ಶಾಲೆಯ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗಣ್ಯ ವ್ಯಕ್ತಿಗಳು ಹಾಗೂ ಅವರ ಮಕ್ಕಳ ಹುಟ್ಟುಹಬ್ಬಗಳನ್ನು ಶಾಲೆಗಳಲ್ಲಿ ಆಚರಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ..
ಹೀಗೆ ಹುಟ್ಟುಹಬ್ಬಗಳನ್ನು ಶಾಲೆಗಳಲ್ಲಿ ಆಚರಣೆ ಮಾಡಿದರೆ, ಮಕ್ಕಳಿಗೂ ತನ್ನ ಹುಟ್ಟುಹಬ್ಬ ಹೀಗೆ ಆಚರಿಸಿಕೊಳ್ಳುವುದಕ್ಕೆ ಆಗುತ್ತಿಲ್ಲವಲ್ಲ ಎಂಬ ಬೇಜಾರು ಮೂಡುತ್ತದೆ.. ಇದರಿಂದ ಮಕ್ಕಳ ಮಾನಸಿಕವಾಗಿ ತೊಳಲಾಡುತ್ತಾರೆ.. ಈ ಕಾರಣದಿಂದ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಣೆ ನಿಷೇಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ..