BengaluruHealth

ಕೋವಿಡ್‌ ರಿಪೋರ್ಟ್:‌ ಇಂದು 14,366ಮಂದಿಗೆ ಸೋಂಕು, 58ಮಂದಿ ಸಾವು

ಬೆಂಗಳೂರು: ಕೊರೊನಾ ಸೋಂಕು ಗಣನೀಯವಾಗಿ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 14,366 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದುವರೆಗೆ 38,23,833ಕ್ಕೆ ಸೋಂಕು ಏರಿಕೆಯಾಗಿದೆ. ಸೋಂಕಿತರ ಪೈಕಿ 35,87,022 ಜನ ಗುಣಮುಖರಾಗಿದ್ದಾರೆ. ಸೋಂಕಿಗೆ ಇಂದು 58 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ  39,056 ಜನ ಸಾವನ್ನಪ್ಪಿದ್ದಾರೆ.  1,97,725 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ರಾಜಧಾನಿಯಲ್ಲಿ ಇಂದು ಒಂದೇ ದಿನ 6,685 ಜನರಿಗೆ ಸೋಂಕು ದೃಢಪಟ್ಟಿದೆ. ಇಲ್ಲಿವರೆಗೂ ಕೊರೊನಾ ಪೀಡಿತರ ಸಂಖ್ಯೆ 17,27,575 ಕ್ಕೆ ಏರಿಕೆಯಾಗಿದೆ.  16,05,847 ಮಂದಿ ಗುಣಮುಖರಾಗಿದ್ದಾರೆ. ಇಂದು ಕೊರೊನಾ ಸೋಂಕಿನಿಂದ 9 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಕೊರೊನಾದಿಂದ 16,602 ಜನ ಮೃತಪಟ್ಟಿದ್ದಾರೆ.  1,05,125 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಮಾಹಿತಿ ನೀಡಿದೆ.

Share Post