ಬೆಂಡೆಕಾಯಿ ಚಟ್ನಿ ಮಾಡುವ ವಿಧಾನ
ಅಡುಗೆ ಮಾಡುವುದಕ್ಕೆ ಏನು ತರಕಾರಿ ಇಲ್ಲದೆ, ಬರಿ ಬೆಂಡೆಕಾಯಿ ಇದ್ದರೆ ಸಾಕು ಅದರಲ್ಲಿ ವಿವಿಧ ರೀತಿಯಲ್ಲಿ ಅಡುಗೆ ಮಾಡಬಹುದು. ಬೆಂಡೆಕಾಯಿಯಲ್ಲಿ ಪಲ್ಯ ಮತ್ತ ಬೆಂಡೆಕಾಯಿ ಗೊಜ್ಜು ಹಾಗೂ ಚಟ್ನಿ, ಬೆಷಡೆಕಾಯಿ ಫ್ರೈ ಮಾಡಬಹುದು. ಬೆಂಡೆಕಾಯಿ ಇದ್ದರೆ ಕಡಿಮೆ ಅವಧಿಯಲ್ಲಿ ಬೇಗ ಬೇಗ ರುಚಿ ರುಚಿಯಾಗಿ ಅಡುಗೆ ಮಾಡಿ ಮುಗಿಸಬಹುದು. ಅದೇರೀತಿ ಈಗ ಉತ್ತರ ಕರ್ನಾಟಕ ಶೈಲಿಯಲ್ಲಿ ಬೆಂಡೆಕಾಯಿ ಚಟ್ನಿ ಹೇಗೆ ಮಾಡುವುದು ನೋಡೋಣ್ಣ ಬನ್ನಿ
ಬೇಕಾಗುವ ಸಾಮಾಗ್ರಿಗಳು
೧೦-೧೫ ಬೆಂಡೆಕಾಯಿ
೩-೪ ಬೆಳ್ಳುಳ್ಳಿ ಸಿಪ್ಪೆ
ಹುಣಸೆ ಹಣ್ಣು
ಖಾರಕ್ಕೆ ತಕ್ಕಷ್ಟು ಮೆಣಸಿನಕಾಯಿ
ಸ್ವಲ್ಪ ಕೊಬ್ಬರಿ
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಬೆಲ್ಲ
ಮಾಡುವ ವಿಧಾನ
ಮೊದಲು ಬೆಂಡೆಕಾಯಿಯನ್ನು ಬಾಣಲೆಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ಉಳಿದ ತೆಂಗಿನ ತುರಿ, ಬೆಳ್ಳುಳ್ಳಿ, ಹುಣಸೆ ಹಣ್ಣು, ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಹಾಕಿ, ಸ್ವಲ್ಪ ರುಬ್ಬಿಕೊಳ್ಳಬೇಕು. ಬಳಿಕ ಬೆಂಡೆಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರುಬ್ಬಿಕೊಳ್ಳಬೇಕು. ನಂತರ ಬೆಂಡೆಕಾಯಿ ಚಟ್ನಿ ಸವಿಯಲು ಸಿದ್ಧ.