ಪ್ರಧಾನಿ ಬಳಿ ಸುಸಜ್ಜಿತ ಐಶಾರಾಮಿ ಕಾರು: ನೋಡಿದ್ರೆ ಅಬ್ಬಬ್ಬಾ ಅಂತೀರಾ..!
ದೆಹಲಿ: ದೇಶದ ಗೌರವಾನ್ವಿತ ಹುದ್ದೆಯಲ್ಲಿರುವವರಿಗೆ ಅವರ ಘನತೆ ಮತ್ತು ರಕ್ಷಣಾ ಉದ್ದೇಶದಿಂದ ಬಹಳ ವಿಶೇಷವಾದ ಕಾರುಗಳನ್ನು ಬಳಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಬಳಿ ಈಗಾಗಲೇ ರೇಂಜ್ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರುಗಳು ಇವೆ. ಅದರ ಜೊತೆಗೆ ಬರೋಬ್ಬರಿ ೧೨ ಕೋಟಿ ಮೌಲ್ಯದ ಮರ್ಸಿಡೆಸ್ ಬೆಂಜ್ ಕಂಪನಿಯ ಮೇಬ್ಯಾಕ್ ಎಸ್.650 ಕಾರು ಕೂಡ ಸೇರ್ಪಡೆಯಾಗಿದೆ. ಪ್ರಧಾನಿಯ ರಕ್ಷಣಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಹಳ ವ್ಯವಸ್ಥಿತವಾಗಿ ಇದನ್ನು ತಯಾರು ಮಾಡಲಾಗಿದೆಯಂತೆ.
ಮರ್ಸಿಡೆಸ್ ಬೆಂಜ್ ಕಂಪನಿಯ ಮೇಬ್ಯಾಕ್ ಎಸ್.650 ವಿಶೇಷತೆ
೧. ಎಕೆ 47 ರೈಫಲ್ನ ನಿರಂತರ ದಾಳಿ ಹಾಗೂ ಸೆಲ್ ಆಕ್ರಮಣ ತಡೆಯುತ್ತದೆ.
೨. ನವೀಕರಿಸಿದ ಕಿಟಕಿಗಳು ಪಾಲಿಕಾರ್ಬೋನೇಟ್ನಿಂದ ಲೇಪಿತವಾಗಿದ್ದು, ಗಟ್ಟಿಯಾದ ಸ್ಟೀಲ್ ಕೋರ್ ಬುಲೆಟ್ಗಳನ್ನು ತಡೆಯುವ ಸಾಮರ್ಥ್ಯವಿದೆ.
೩. 15 ಕೆ.ಜಿ.ಯಷ್ಟು ಅಪಾಯಕಾರಿ ಸ್ಪೋಟಕ ಎರಡು ಮೀಟರ್ ಅಂತರದ ಒಳಗೆ ಸ್ಫೋಟವಾದ್ರೂ ಯಾವುದೇ ಹಾನಿಯಾಗಲ್ಲ.
೪. ವಿಷ ಅನಿಲ ದಾಳಿ ನಡೆಸಿದರೆ ಕಾರಿನ ಒಳಗೆ ಸ್ವಚ್ಚ ವಾಯು ಪೂರೈಕೆ ಸೌಲಭ್ಯ ಕಲ್ಪಿಸಲಾಗಿದೆ.
೫. 6.0 ಲೀಟರ್ ಟ್ವಿನ್ ಟರ್ಬೊ ವಿ-12 ಎಂಜಿನ್ ಹೊಂದಿದ್ದು, 516 ಬಿಎಚ್ಪಿ ಮತ್ತು 900 ಎನ್ಎಂ ಪೀಕ್ ಟಾರ್ಕ್ ಅಳವಡಿಸಲಾಗಿದೆ.
೬. ಕಾರಿನ ಗರಿಷ್ಠ ವೇಗವನ್ನು 160 ಕಿಲೋ ಮೀಟರ್ಗೆ ಮಿತಿಗೊಳಿಸಲಾಗಿದೆ.
೭. ಬೋಯಿಂಗ್ ವಿಮಾನ ಮತ್ತು ಎಎಸ್-64 ಹೆಲಿಕಾಫ್ಟರ್ ಪೆಟ್ರೋಲ್ ಟ್ಯಾಂಕ್ಗೆ ಅಳವಡಿಸಲಾಗಿರುವ ವಿಶೇಷ ಕೋಟಿಂಗ್ ವ್ಯವಸ್ಥೆಯನ್ನು ಹೊಂದಿದೆ.
ಒಟ್ಟಿನಲ್ಲಿ ಎಲ್ಲಾ ರೀತಿಯ ದಾಳಿಗಳಿಂದಲೂ ರಕ್ಷಿಸಬಹುದಾದಂತಹ ಕಾರನ್ನು ಪ್ರಧಾನ ಮಂತ್ರಿಗಳು ಹೊಂದಿದ್ದಾರೆ. ಇವರು ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅತ್ಯಂತ ರಕ್ಷನಾ ಕವಚ ಇರುವ ಕಾರಿಗಳನ್ನೇ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.