CrimeLifestyle

ರೇವ್‌ ಪಾರ್ಟಿಗಳಲ್ಲಿ ಏನು ನಡೆಯುತ್ತೆ..?; ನಿಜವಾಗ್ಲೂ ಅಲ್ಲಿ ಆ ಅಸಹ್ಯವೂ ನಡೆಯುತ್ತಾ..?

ರೇವ್‌ ಪಾರ್ಟಿ… ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ಹಾಟ್‌ ಟಾಪಿಕ್‌ ಇದು.. ಇತ್ತೀಚೆಗೆ ಬೆಂಗಳೂರಿನ ಹೊರವಲಯದ ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ತೆಲುಗಿನ ನಟ ನಟಿಯರು ಪಾಲ್ಗೊಂಡಿದ್ದರು.. ಈ ಕಾರಣಕ್ಕಾಗಿ ಇದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ.. ಹೆಚ್ಚು ಹೆಚ್ಚು ಚರ್ಚೆಯಾಗುತ್ತಿದೆ.. ರೇವ್‌ ಪಾರ್ಟಿ ವಿಚಾರ ಬಯಲಾಗುತ್ತಿದ್ದಂತೆ ಜನರಲ್ಲಿ ಅಷ್ಟಕ್ಕೂ ಈ ರೇವ್‌ ಪಾರ್ಟಿ ಅಂದ್ರೆ ಏನು..? ಅಲ್ಲಿ ಏನೇನು ನಡೆಯುತ್ತೆ..? ಎಂಬ ಕುತೂಹಲ ಹೆಚ್ಚಾಗಿದೆ… ಹಾಗಾದ್ರೆ ಈ ರೇವ್‌ ಪಾರ್ಟಿ ಅಂದ್ರೆ ಏನು..? ಈ ಪಾರ್ಟಿಗಳಲ್ಲಿ ಸೆಲೆಬ್ರಿಟಿಗಳೇ ಯಾಕೆ ಪಾಲ್ಗೊಳ್ಳುತ್ತಾರೆ..? ಈ ಪಾರ್ಟಿಗಳಲ್ಲಿ ಏನೇನೆಲ್ಲಾ ನಡೆಯುತ್ತೆ..? ಈ ಪಾರ್ಟಿಗಳಿಗೆ ಯುವ ಸಮುದಾಯ ಯಾಕೆ ಆಕರ್ಷಿತವಾಗುತ್ತಿದೆ..? ಇಂತಹ ಹಲವು ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳೋಣ ಬನ್ನಿ..
ಮೊನ್ನೆ ಬೆಂಗಳೂರಿನ ಖಾಸಗಿ ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ಮೇಲೆ ಈ ರೇವ್‌ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಲ್ಲಿ ಹೆಚ್ಚಾಗಿದೆ.. ಅಷ್ಟಕ್ಕೂ ರೇವ್‌ ಪಾರ್ಟಿ ಸಂಸ್ಕೃತಿ 1950ರಲ್ಲಿ ಇಂಗ್ಲೆಂಡ್‌ ನಲ್ಲಿ ಶುರುವಾಗುತ್ತೆ.. ಅದು ವರ್ಷದಿಂದ ವರ್ಷಕ್ಕೆ ಇಡೀ ಪ್ರಪಂಚವನ್ನ ಆವರಿಸಿದೆ.. ಮೊದಲು ಕ್ಲೋಸ್ಡ್‌ ಏರಿಯಾದಲ್ಲಿ ಹೆಚ್ಚು ಸೌಂಡ್‌ನಲ್ಲಿ ಮ್ಯೂಸಿಕ್‌ ಇಟ್ಟುಕೊಂಡು ಡ್ಯಾನ್ಸ್‌ ಮಾಡುತ್ತಾ ಎಂಜಾಯ್‌ ಮಾಡುತ್ತಿದ್ದರು.. ಇಲ್ಲಿ ಕುಣಿತ, ಹಾಡು, ಮ್ಯೂಸಿಕ್‌ ಎಲ್ಲವೂ ಇರುತ್ತಿತ್ತು.. ಇನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮದ್ಯ ಸೇವನೆ ಕಾಮನ್‌ ಆಗಿರುವುದರಿಂದ ಈ ಪಾರ್ಟಿಗಳಲ್ಲೂ ಮದ್ಯ ಸೇವನೆ ಇದ್ದೇ ಇರುತ್ತಿತ್ತು.. ರೇವ್‌ ಪಾರ್ಟಿ ಅಂದ್ರೆ ಇಷ್ಟೇ ಇದ್ದದ್ದು.. ಆದ್ರೆ ಬರಬರುತ್ತಾ ರೇವ್‌ ಪಾರ್ಟಿಯ ಅರ್ಥವೇ ಬದಲಾಗುತ್ತಾ ಹೋಗಿದೆ.. ಏನು ಮಾಡಬಾರದೋ ಅದೆಲ್ಲವೂ ರೇವ್‌ ಪಾರ್ಟಿಗಳಲ್ಲಿ ನಡೆಯುತ್ತದೆ ಎಂಬ ಆರೋಪವಿದೆ..

ವೈಲ್ಡ್‌ ಬಿಹೇವಿಯರ್‌ ನೊಂದಿಗೆ ಮಾಡಿಕೊಳ್ಳುವ ಪಾರ್ಟಿಗಳನ್ನು ರೇವ್‌ ಪಾರ್ಟಿ ಎಂದು ಕರೆಯುವುದಕ್ಕೆ ಶುರು ಮಾಡಿದ್ದಾರೆ.. ಈ ಕಾರಣಕ್ಕಾಗಿ ರೇವ್‌ ಪಾರ್ಟಿಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯಲು ಶುರುವಾಗಿವೆ.. ಹೀಗಾಗಿ ಈ ರೇವ್‌ ಪಾರ್ಟಿಗಳನ್ನು ನಿಷೇಧಿಸಲಾಗಿದೆ.. ಹೀಗಿದ್ದರೂ ಕದ್ದು ಮುಚ್ಚಿ ಅಲ್ಲಲ್ಲಿ ಇಂತಹ ರೇವ್‌ ಪಾರ್ಟಿಗಳು ನಡೆಯುತ್ತಲೇ ಬಂದಿವೆ..
ರೇವ್‌ ಪಾರ್ಟಿಗಳು ತುಂಬಾ ಗೌಪ್ಯವಾಗಿ ನಡೆಯುತ್ತವೆ.. ಯಾಕಂದ್ರೆ ಈ ಪಾರ್ಟಿಗಳಲ್ಲಿ ಸೆಲೆಬ್ರಿಟಿಗಳು, ಗಣ್ಯರ ಮಕ್ಕಳು, ಗಣ್ಯರು ಮಾತ್ರವೇ ಪಾಲ್ಗೊಳ್ಳುತ್ತಾರೆ.. ಇದರ ಜೊತೆಗೆ ಪಾರ್ಟಿಗಳಲ್ಲಿ ಗುಂಡು ಪಾರ್ಟಿಯ ಜೊತೆಗೆ ಡ್ರಗ್ಸ್‌, ಹುಡುಗಿಯರು ಹೀಗೆ ತುಂಬಾ ವ್ಯವಹಾರಗಳು ನಡೆಯುತ್ತವೆ ಎಂಬ ಆರೋಪಗಳಿವೆ.. ಯುವ ಸಮುದಾಯ ಡ್ರಗ್ಸ್‌ ಸೇವಿಸುತ್ತಾ, ಅಶ್ಲೀಲ ನೃತ್ಯಗಳನ್ನು ಮಾಡುತ್ತಾರೆ… ಅದು ಯಾವ ರೀತಿ ಇರುತ್ತದೆ ಎಂದರೆ ಹದ್ದುಮೀರಿದ ವರ್ತನೆಗಳು ತೋರುತ್ತಿರುತ್ತಾರೆ ಎಂದು ಹೇಳಲಾಗುತ್ತದೆ.. ಎಲ್ಲಾ ಕೆಲಸಗಳಿಗೂ ರೆಡಿಯಾದವರು ಮಾತ್ರವೇ ಇಂತಹ ಪಾರ್ಟಿಗಳಿಗೆ ಹೋಗುತ್ತಾರೆ ಎಂದು ಹೇಳಲಾಗುತ್ತದೆ.. ಆದ್ರೆ ಎಲ್ಲಾ ರೇವ್‌ ಪಾರ್ಟಿಗಳಲ್ಲೂ ಇದೆಲ್ಲಾ ನಡೆಯೋದಿಲ್ಲ.. ಮದ್ಯ ಸೇವನೆ, ಕುಣಿತ ಇರುತ್ತದೆ.. ಕೆಲವು ಪಾರ್ಟಿಗಳಲ್ಲಿ ಡ್ರಗ್ಸ್‌, ಹುಡುಗಿಯರು, ಶೃಂಗಾರ ಇರುತ್ತದೆ ಎಂದು ಕೆಲವರು ಹೇಳುತ್ತಾರೆ..
ರೇವ್‌ ಪಾರ್ಟಿಗಳು ತುಂಬಾ ದುಬಾರಿಯಂತೆ.. ಬೆಂಗಳೂರಿನಲ್ಲಿ ನಡೆದ ರೇವ್‌ ಪಾರ್ಟಿಗೆ ಎಂಟ್ರಿ ಫೀಸ್‌ ಒಬ್ಬರಿಗೆ 50 ಲಕ್ಷ ರೂಪಾಯಿ ಇತ್ತು ಎಂದು ಹೇಳಲಾಗುತ್ತಿದೆ.. ಇಷ್ಟು ದೊಡ್ಡ ಮಟ್ಟದ ಹಣ ಖರ್ಚು ಮಾಡುವ ರೇವ್‌ ಪಾರ್ಟಿಗಳು ಅತ್ಯಂತ ಗೌಪ್ಯವಾಗಿ ನಡೆಯುತ್ತವೆ.. ಈ ರೇವ್‌ ಪಾರ್ಟಿ ಆಯೋಜಿಸುವವರೇ ಇದರಲ್ಲಿ ಪಾಲ್ಗೊಳ್ಳುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.. ಆಯ್ದು ಹಾಗೂ ಕೆಲವೇ ಮಂದಿಗೆ ಆಹ್ವಾನ ನೀಡಲಾಗುತ್ತದೆ.. ಗೊತ್ತಿಲ್ಲದ ವ್ಯಕ್ತಿಗಳಿಗೆ ಯಾವ ಕಾರಣಕ್ಕೂ ಇಲ್ಲಿ ಎಂಟ್ರಿ ಸಿಗೋದಿಲ್ಲ.. ಮುಂಚೆಯೇ ಪಾರ್ಟಿಯಲ್ಲಿ ಏನೆಲ್ಲಾ ಇರುತ್ತವೆ ಎಂದು ಹೇಳಲಾಗುತ್ತದೆ.. ಪಾರ್ಟಿಯಲ್ಲಿ ಪಾಲ್ಗೊಳ್ಳುವವರ ರಿಕ್ವೈರ್‌ಮೆಂಟ್‌ಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.. ಎಲ್ಲದಕ್ಕೂ ಓಕೆ ಎನ್ನುವವರಿಗೆ ಮಾತ್ರ ಈ ಪಾರ್ಟಿಗೆ ಅವಕಾಶ ಇರುತ್ತದೆ..
ಈ ರೇವ್‌ ಪಾರ್ಟಿಗಳನ್ನು ಶ್ರೀಮಂತರ ಫಾರ್ಮ್‌ ಹೌಸ್‌ಗಳು, ಗೆಸ್ಟ್‌ ಹೌಸ್‌ಗಳಲ್ಲಿ ಮಾಡುತ್ತಾರೆ.. 24 ಗಂಟೆಗಳಿಂದ ಹಿಡಿದು ಮೂರು ದಿನಗಳವರೆಗೂ ಈ ಪಾರ್ಟಿಗಳು ನಡೆದ ಉದಾಹರಣೆಗಳಿವೆ.. ಅದಕ್ಕೆ ತಕ್ಕಂತೆ ಆಹಾರ, ಡ್ರಿಂಕ್ಸ್‌, ಡ್ರಗ್ಸ್‌, ಸಿಗರೇಟ್‌ಗಳು ಎಲ್ಲಾ ತರದ ವ್ಯವಸ್ಥೆ ಮಾಡಲಾಗಿರುತ್ತದೆ.. ಕೆಲವು ರೇವ್‌ ಪಾರ್ಟಿಗಳಲ್ಲಿ ಲೈಂಗಿಕ ಚಟುವಟಿಕೆಗಳು ಕೂಡಾ ಇರುತ್ತವಂತೆ!. ಇದಕ್ಕಾಗಿ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಕೂಡಾ ಮಾಡಲಾಗಿರುತ್ತದಂತೆ.. ಇಂತಹ ಪಾರ್ಟಿಗಳು ವಿವರಿಸಲಾಗದಷ್ಟು ಅಸಹ್ಯವಾಗಿ ನಡೆಯುತ್ತವೆ ಎಂದೂ ಕೆಲವರು ಹೇಳುತ್ತಾರೆ.. ಈ ಕಾರಣಕ್ಕಾಗಿಯೇ ರೇವ್‌ ಪಾರ್ಟಿಗಳು ನಡೆಯುವ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ತೆಗೆಯಲಾಗಿರುತ್ತದೆ.. ಮೊಬೈಲ್‌ ಫೋನ್‌ಗಳು, ಎಲೆಕ್ಟ್ರಾನಿಕ್‌ ವಸ್ತುಗಳನ್ನು ನಿಷೇಧಿಸಲಾಗಿರುತ್ತದೆ.. ಅಂದರೆ ಭಾಗವಹಿಸಿದವರ ಬಳಿ ಇರುವ ಮೊಬೈಲ್‌ ಸೇರಿ ಇತರ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತೆಗೆದು ಒಂದೆಡೆ ಇಡಲಾಗಿರುತ್ತದೆ..
ಭಾರತದಲ್ಲಿ ಮೊದಲ ರೇವ್‌ ಪಾರ್ಟಿ ನಡೆದದ್ದು ಗೋವಾದಲ್ಲಿ.. ಹಿಪ್ಪಿಗಳು ಇದನ್ನು ಗೋವಾದಲ್ಲಿ ಮೊದಲ ಬಾರಿಗೆ ಶುರು ಮಾಡಿದರು.. ನಂತರ ಈ ಪಾಶ್ಚಾತ್ಯ ಸಂಸ್ಕೃತಿ ದೇಶಾದ್ಯಂತ ವಿಸ್ತರಿಸುತ್ತಾ ಹೋಗಿದೆ.. ಮುಂಬೈ, ಬೆಂಗಳೂರು, ಹೈದರಾಬಾದ್‌, ಚೆನ್ನೈನಂತಹ ನಗರಗಳಲ್ಲಿ ಈ ಕಲ್ಚರ್‌ ಹೆಚ್ಚಾಗಿದೆ.. ಇತರರಿಗೆ ತೊಂದರೆ ಕೊಡದ ರೀತಿಯಲ್ಲಿ ಈ ಪಾರ್ಟಿಗಳು ನಡೆಯುತ್ತವೆ.. ಆದ್ರೆ, ಕ್ಲೋಸ್ಟ್‌ ಸ್ಥಳಗಳಲ್ಲಿ ನಡೆಯುವ ಈ ಪಾರ್ಟಿಗಳಲ್ಲಿ ಡ್ರಗ್ಸ್‌ ಸೇವನೆ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತವೆ.. ಹೀಗಾಗಿ, ಇಂತಹ ಪಾರ್ಟಿಗಳನ್ನು ತಡೆಗಟ್ಟಲು ಪೊಲೀಸರು ಅವಿರತವಾಗಿ ಶ್ರಮಿಸುತ್ತಲೇ ಇದ್ದಾರೆ.. ಆದ್ರೂ ಶ್ರೀಮಂತರು ಇಂತಹ ಪಾರ್ಟಿಗಳನ್ನು ಆಯೋಜಿಸುತ್ತಲೇ ಇದ್ದಾರೆ..

 

Share Post