ಸೆಲ್ಫಿಗಾಗಿ ಬಂದ ವ್ಯಕ್ತಿ ವಿರುದ್ಧ ಡಿಕೆಶಿ ಗರಂ
ಮಂಡ್ಯ: ಕಾಂಗ್ರೆಸ್ ಸಮಿತಿಯು ಮಂಡ್ಯ ಜಿಲ್ಲೆ ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದ ಬಳಿ 137 ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಾಗೂ ಸೇವಾದಳ ಧ್ಚಜವಂದನೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಭಾಗಿಯಾಗಿದ್ದರು. ಅವರು ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ಅಭಿಮಾನಿಯೊಬ್ಬ ಸೆಲ್ಫಿಗಾಗಿ ಅಂತಾ ಡಿಕೆಶಿ ಮುಂದೆ ಮೊಬೈಲ್ ಹಿಡಿದರು. ಇದ್ದರಿಂದ ಕೋಪಗೊಂಡ ಡಿ.ಕೆ. ಶಿವಕುಮಾರ್ ಆ ಮೊಬೈಲ್ ಕಸಿದುಕೊಂಡು ರೊಚ್ಚಿಗೆದ್ದರು.ಅಷ್ಟೇ ಅಲ್ಲದೆ ಆತನಿಗೆ ಆವಾಜ್ ಬೇರೆ ಹಾಕಿದ್ದಾರೆ. ನಿನಗೆ ಕಾಮನ್ ಸೆನ್ಸ್ ಇಲ್ವಾ, ಧ್ವಜಾರೋಹಣಕ್ಕೆ ಹೋಗುವುದು ಬಿಟ್ಟು ನಿನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲ್ಲಾ? ಎಂದು ಸಿಡಿಮಿಡಿಯಿಂದ ಹೋದ್ರು.ನಂತರ ಡಿ.ಕೆ.ಶಿವಕುಮಾರ್ ಗನ್ ಮ್ಯಾನ್ ಆ ವ್ಯಕ್ತಿಯನ್ನು ಎಳೆದು ಹಾಕಿದರು.
ಈ ಹಿಂದೆ ಕೂಡ ಹೆಗಲ ಮೇಲೆ ಕೈ ಹಾಕಿಕೊಂಡು ಫೋಟೋಗೆ ಫೋಸ್ ಕೊಡಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತನ ಕಪಾಳಕ್ಕೆ ಡಿಕೆಶಿ ಹೊಡೆದಿದ್ದು ಸಖತ್ ಸುದ್ದಿಯಾಗಿತ್ತು. ಇದೀಗ ಸೆಲ್ಫಿ ತೆಗೆದುಕೊಳ್ಳ ಬಂದ ವ್ಯಕ್ತಿ ವಿರುದ್ಧ ಗರಂ ಆದರು. ಹೀಗಾಗಿ ಆ ವ್ಯಕ್ತಿ ಕೆಲಕಾಲ ವಿಸ್ಮಿತವಾಗಿ ನಿಂತಿದ್ದನು.